Skip to content
ThuthiThuthiThuthi
Amos · chapter 5 of 9 · 27 verses

Amos 5 in Kannada

ಆಮೋಸ 5

  1. ಓ ಇಸ್ರಾಯೇಲಿನ ಮನೆತನದವರೇ, ನಾನು ನಿಮಗೆ ವಿರೋಧವಾಗಿ ಗೋಳಾ ಟದ ವಿಷಯವನ್ನೆತ್ತುವ ಈ ವಾಕ್ಯವನ್ನು ಕೇಳಿರಿ.

    Hear ye this word which I take up against you, [even] a lamentation, O house of Israel.

  2. ಇಸ್ರಾಯೇಲಿನ ಕನ್ಯೆಯು ಬಿದ್ದಿದ್ದಾಳೆ, ಇನ್ನು ಮೇಲೆ ಎದ್ದೇಳುವದೇ ಇಲ್ಲ. ಅವಳು ತನ್ನ ಭೂಮಿಯ ಮೇಲೆ ತೊರೆದು ಬಿಡಲ್ಪಟ್ಟವಳಾಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.

    The virgin of Israel is fallen; she shall no more rise: she is forsaken upon her land; [there is] none to raise her up.

  3. ಕರ್ತನಾದ ದೇವರು ಹೀಗೆ ಹೇಳುತ್ತಾನೆ; ಪಟ್ಟಣದಿಂದ ಸಾವಿರ ಮಂದಿ ಯಾಗಿ ಹೊರಟವರು ನೂರು ಮಂದಿಯಾಗಿ ಉಳಿದು ಇಸ್ರಾಯೇಲಿನ ಮನೆ ಸೇರಲು ನೂರು ಮಂದಿಯಾಗಿ ಹೊರಟವರು ಹತ್ತು ಮಂದಿಯಾಗಿ ಉಳಿಯುವರು.

    For thus saith the Lord GOD; The city that went out [by] a thousand shall leave an hundred, and that which went forth [by] an hundred shall leave ten, to the house of Israel.

  4. ಕರ್ತನು ಇಸ್ರಾಯೇಲಿನ ಮನೆಯವರಿಗೆ ಹೀಗೆ ಹೇಳುತ್ತಾನೆ--ನೀವು ನನ್ನನ್ನು ಹುಡುಕಿ ಜೀವಿಸಿರಿ.

    For thus saith the LORD unto the house of Israel, Seek ye me, and ye shall live:

  5. ಆದರೆ ಬೇತೇಲನ್ನು ಆಶ್ರಯಿಸಬೇಡಿರಿ, ಗಿಲ್ಗಾಲಿಗೆ ಹೋಗಬೇಡಿರಿ, ಬೇರ್ಷೆಬಕ್ಕೆ ಹಾದು ಹೋಗ ಬೇಡಿರಿ, ಯಾಕಂದರೆ ಗಿಲ್ಗಾಲು ಸೆರೆಗೆ ನಿಶ್ಚಯವಾಗಿ ಹೋಗುವದು. ಬೇತೇಲು ಏನಿಲ್ಲದೆ ಹೋಗುವದು.

    But seek not Beth-el, nor enter into Gilgal, and pass not to Beer-sheba: for Gilgal shall surely go into captivity, and Beth-el shall come to nought.

  6. ನೀವು ಕರ್ತನನ್ನು ಹುಡುಕಿ ಬದುಕಿರಿ, ಇಲ್ಲದಿದ್ದರೆ ಆತನು ಬೆಂಕಿಯಂತೆ ಯೋಸೇಫನ ಮನೆತನದಲ್ಲಿ ಪ್ರವೇಶಿಸುವನು; ಅದು ನುಂಗಿಬಿಡುವದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವದಿಲ್ಲ.

    Seek the LORD, and ye shall live; lest he break out like fire in the house of Joseph, and devour [it], and [there be] none to quench [it] in Beth-el.

  7. ನ್ಯಾಯವನ್ನು ಮಾಚಿಪತ್ರೆಗೆ ತಿರಿಗಿಸುವವರೇ, ನೀತಿಯನ್ನು ಭೂಮಿಯಲ್ಲಿ ಬಿಡುವವರೇ,

    Ye who turn judgment to wormwood, and leave off righteousness in the earth,

  8. ಏಳು ನಕ್ಷತ್ರಗಳನ್ನೂ ಮೃಗಶಿರವನ್ನೂ ಉಂಟು ಮಾಡಿ ಮರಣದ ನೆರಳನ್ನು ಉದಯಕ್ಕೆ ಬದಲಿಸಿ, ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲು ಮಾಡಿ ಸಮುದ್ರದ ನೀರನ್ನು ಬರಮಾಡಿ ಅವುಗಳನ್ನು ಭೂಮಿಯ ಮೇಲೆ ಸುರಿಸುವ ಕರ್ತನೆಂಬ ಹೆಸರುಳ್ಳಾತನನ್ನೇ ಹುಡು ಕಿರಿ.

    [Seek him] that maketh the seven stars and Orion, and turneth the shadow of death into the morning, and maketh the day dark with night: that calleth for the waters of the sea, and poureth them out upon the face of the earth: The LORD [is] his name:

  9. ಕೋಟೆಯ ಮೇಲೆ ಸೂರೆಮಾಡುವ ಹಾಗೆ ಸೂರೆಯನ್ನು ಬಲಿಷ್ಠರ ಮೇಲೆ ತಟ್ಟನೆ ತಂದೊಡ್ಡು ವಾತನು ಆತನೇ.

    That strengtheneth the spoiled against the strong, so that the spoiled shall come against the fortress.

  10. ಅವರು ಬಾಗಿಲಲ್ಲಿ ಬೆದರಿಸುವ ನನ್ನು ಹಗೆಮಾಡುತ್ತಾರೆ, ಯಥಾರ್ಥವಾಗಿ ಮಾತನಾ ಡುವವನನ್ನು ಅವರು ಅಸಹ್ಯಿಸುತ್ತಾರೆ.

    They hate him that rebuketh in the gate, and they abhor him that speaketh uprightly.

  11. ಆದಕಾರಣ ನೀವು ಬಡವನನ್ನು ತುಳಿದವರಾಗಿ ಗೋಧಿಯ ಹೊರೆಗಳನ್ನು ಅವನಿಂದ ಕಸಿದುಕೊಂಡು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಲ್ಲಾ; ನೀವು ಅವುಗಳಲ್ಲಿ ವಾಸಮಾಡದೆ ಇರುವಿರಿ; ರಮ್ಯವಾದ ದ್ರಾಕ್ಷೆಯತೋಟ ಗಳನ್ನು ನೆಟ್ಟಿರಲ್ಲಾ; ಅವುಗಳ ದ್ರಾಕ್ಷಾರಸವನ್ನು ಕುಡಿ ಯಲಾರಿರಿ.

    Forasmuch therefore as your treading [is] upon the poor, and ye take from him burdens of wheat: ye have built houses of hewn stone, but ye shall not dwell in them; ye have planted pleasant vineyards, but ye shall not drink wine of them.

  12. ನಿಮ್ಮ ಅನೇಕ ಅಪರಾಧಗಳನ್ನೂ ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು; ಅವರು ನೀತಿವಂತರನ್ನು ಬಾಧೆಪಡಿಸಿ ಲಂಚವನ್ನು ತೆಗೆದು ಕೊಂಡರು; ಬಾಗಲ ಬಳಿಯಲ್ಲಿರುವ ಬಡವರ ನ್ಯಾಯ ವನ್ನು ತೀರಿಸದೆ ಅವರು ಕಳುಹಿಸಿಬಿಟ್ಟರು.

    For I know your manifold transgressions and your mighty sins: they afflict the just, they take a bribe, and they turn aside the poor in the gate [from their right].

  13. ಆದದ ರಿಂದ ಆ ಕಾಲದಲ್ಲಿ ಬುದ್ದಿವಂತನು ಮೌನವಾಗಿ ರುವನು; ಯಾಕಂದರೆ ಅದು ಕೆಟ್ಟ ಕಾಲವಾಗಿದೆ.

    Therefore the prudent shall keep silence in that time; for it [is] an evil time.

  14. ನೀವು ಬದುಕುವ ಹಾಗೆಯೂ ನೀವು ಹೇಳುವ ಪ್ರಕಾರ ಸೈನ್ಯಾಧಿಪತಿಯಾದ ಕರ್ತನು, ನಿಮ್ಮ ಸಂಗಡ ಇರುವ ಹಾಗೆಯೂ ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ದನ್ನು ಹುಡುಕಿರಿ.

    Seek good, and not evil, that ye may live: and so the LORD, the God of hosts, shall be with you, as ye have spoken.

  15. ಕೆಟ್ಟದ್ದನ್ನು ದ್ವೇಷಿಸಿರಿ; ಒಳ್ಳೇದನ್ನು ಪ್ರೀತಿಸಿರಿ ಮತ್ತು ಬಾಗಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ; ಒಂದು ವೇಳೆ ಸೈನ್ಯಾಧಿಪತಿಯಾದ ಕರ್ತನು ಯೋಸೇ ಫನ ಉಳಿದವರನ್ನು ಕನಿಕರಿಸಬಹುದು.

    Hate the evil, and love the good, and establish judgment in the gate: it may be that the LORD God of hosts will be gracious unto the remnant of Joseph.

  16. ಆದದ ರಿಂದ ಕರ್ತನು, ಸೈನ್ಯಗಳ ದೇವರಾದ ಕರ್ತನು, ಹೀಗೆ ಹೇಳುತ್ತಾನೆ ಎಲ್ಲಾ ಬೀದಿಗಳಲ್ಲೂ ಗೋಳಾಟ ಗಳು, ಹೆದ್ದಾರಿಗಳಲ್ಲೂ ಅಯ್ಯೋ, ಅಯ್ಯೋ ಅನ್ನು ವರು. ಒಕ್ಕಲಿಗರನ್ನು ದುಃಖಿಸುವದಕ್ಕೂ ಪ್ರಲಾಪಿ ಸುವದಕ್ಕೆ ತಿಳಿದವರನ್ನು ಗೋಳಾಟಕ್ಕೂ ಕರೆಯುವರು.

    Therefore the LORD, the God of hosts, the Lord, saith thus; Wailing [shall be] in all streets; and they shall say in all the highways, Alas! alas! and they shall call the husbandman to mourning, and such as are skilful of lamentation to wailing.

  17. ಎಲ್ಲಾ ದ್ರಾಕ್ಷೇತೋಟಗಳಲ್ಲೂ ಗೋಳಾಟವಿರು ವದು; ಯಾಕಂದರೆ ನಾನು ನಿನ್ನ ಮಧ್ಯೆ ಹಾದುಹೋಗು ವೆನೆಂದು ಕರ್ತನು ಹೇಳುತ್ತಾನೆ.

    And in all vineyards [shall be] wailing: for I will pass through thee, saith the LORD.

  18. ಕರ್ತನ ದಿನವನ್ನು ಅಪೇಕ್ಷಿಸುವ ನಿಮಗೆ ಅಯ್ಯೋ! ನಿಮ್ಮ ಅಂತ್ಯವೇನಾಗುವದು? ಅಯ್ಯೋ, ಕರ್ತನ ದಿನವು ನಿಮಗೆ ಬೆಳಕಲ್ಲ, ಕತ್ತಲೆಯೇ.

    Woe unto you that desire the day of the LORD! to what end [is] it for you? the day of the LORD [is] darkness, and not light.

  19. ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ ಕರಡಿಯನ್ನು ಎದುರುಗೊಂಡ ಹಾಗೆಯೂ ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈ ಒರಗಿ ಸಿದಾಗ ಸರ್ಪವು ಕಚ್ಚಿದ ಹಾಗೆಯೂ ಇರುವದು.

    As if a man did flee from a lion, and a bear met him; or went into the house, and leaned his hand on the wall, and a serpent bit him.

  20. ಹೀಗೆ ಕರ್ತನ ದಿನವು ಬೆಳಕಲ್ಲ ಕತ್ತಲಲ್ಲವೇ? ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲಲ್ಲವೋ? ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ.

    [Shall] not the day of the LORD [be] darkness, and not light? even very dark, and no brightness in it?

  21. ನಿಮ್ಮ ನಿಮ್ಮ ಪರಿಶುದ್ಧ ಸಭೆಗಳನ್ನು ನಾನು ಮೂಸುವದಿಲ್ಲ.

    I hate, I despise your feast days, and I will not smell in your solemn assemblies.

  22. ನೀವು ನನಗೆ ದಹನಬಲಿಗಳನ್ನೂ ಆಹಾರ ಅರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವುಗಳನ್ನು ಅಂಗೀ ಕರಿಸುವದಿಲ್ಲ, ಇಲ್ಲವೆ ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನು ಲಕ್ಷಿಸುವದಿಲ್ಲ.

    Though ye offer me burnt offerings and your meat offerings, I will not accept [them:] neither will I regard the peace offerings of your fat beasts.

  23. ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ; ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವದಿಲ್ಲ.

    Take thou away from me the noise of thy songs; for I will not hear the melody of thy viols.

  24. ಆದರೆ ನ್ಯಾಯವು ನೀರಿನಂತೆಯೂ ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ.

    But let judgment run down as waters, and righteousness as a mighty stream.

  25. ಓ ಇಸ್ರಾಯೇಲಿನ ಮನೆತನದವರೇ, ನೀವು ನನಗೆ ಅರಣ್ಯ ದಲ್ಲಿ ನಲವತ್ತು ವರುಷಗಳು ಬಲಿಗಳನ್ನೂ ಕಾಣಿಕೆ ಗಳನ್ನೂ ಅರ್ಪಿಸಿದಿರೋ?

    Have ye offered unto me sacrifices and offerings in the wilderness forty years, O house of Israel?

  26. ಆದರೆ ನೀವು ನಿಮ ಗೋಸ್ಕರ ಮಾಡಿಕೊಂಡ ಮೋಲೇಕನ ಗುಡಾರವನ್ನು, ನಿಮ್ಮ ಕಿಯೂನ್‌ ಎಂಬ ವಿಗ್ರಹವನ್ನು, ನಿಮ್ಮ ಮೋಲೇ ಕನ ದೇವತೆಯ ನಕ್ಷತ್ರವನ್ನು ಹೊತ್ತುಕೊಂಡು ಹೋಗ ಬೇಕಾಗುವದು.ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.

    But ye have borne the tabernacle of your Moloch and Chiun your images, the star of your god, which ye made to yourselves.

  27. ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.

    Therefore will I cause you to go into captivity beyond Damascus, saith the LORD, whose name [is] The God of hosts.

All chapters of Amos · Kannada Bible · Amos 5 in Tamil

Kannada Bible: Kannada Old Version, public domain.

King James Version: public domain.