Amos · chapter 5 · verse 2
Amos 5:2 in Kannada
ಇಸ್ರಾಯೇಲಿನ ಕನ್ಯೆಯು ಬಿದ್ದಿದ್ದಾಳೆ, ಇನ್ನು ಮೇಲೆ ಎದ್ದೇಳುವದೇ ಇಲ್ಲ. ಅವಳು ತನ್ನ ಭೂಮಿಯ ಮೇಲೆ ತೊರೆದು ಬಿಡಲ್ಪಟ್ಟವಳಾಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.
Israayelina kanyeyu biddiddaale, innu mele eddeluvade illa. Avalu tanna bhoomiya mele toredu bidalpattavalaagiddaale. Alli avalannu ebbisuvavaru yaaroo illa.
Amos 5:2 in English
- King James Version (KJV)
- The virgin of Israel is fallen; she shall no more rise: she is forsaken upon her land; [there is] none to raise her up.
- World English Bible (WEB)
- “The virgin of Israel has fallen; She shall rise no more. She is cast down on her land; there is no one to raise her up.”
- American Standard Version (ASV)
- The virgin of Israel is fallen; she shall no more rise: she is cast down upon her land; there is none to raise her up.
- Bible in Basic English (BBE)
- The virgin of Israel has been made low, never again to be lifted up: she is stretched out by herself on her land; there is no one to put her on her feet again.
- Darby Translation (DBY)
- The virgin of Israel is fallen; she shall no more arise: she is cast down upon her land; there is none to raise her up.
- Webster's Bible (WBS)
- The virgin of Israel is fallen; she shall no more rise! she is forsaken upon her land; [there is] none to raise her up.
- Young's Literal Translation (YLT)
- 'Fallen, not again to rise, hath the virgin of Israel, Left on her land — she hath no raiser up.'
Read in context
- 1ಓ ಇಸ್ರಾಯೇಲಿನ ಮನೆತನದವರೇ, ನಾನು ನಿಮಗೆ ವಿರೋಧವಾಗಿ ಗೋಳಾ ಟದ ವಿಷಯವನ್ನೆತ್ತುವ ಈ ವಾಕ್ಯವನ್ನು ಕೇಳಿರಿ.
- 2ಇಸ್ರಾಯೇಲಿನ ಕನ್ಯೆಯು ಬಿದ್ದಿದ್ದಾಳೆ, ಇನ್ನು ಮೇಲೆ ಎದ್ದೇಳುವದೇ ಇಲ್ಲ. ಅವಳು ತನ್ನ ಭೂಮಿಯ ಮೇಲೆ ತೊರೆದು ಬಿಡಲ್ಪಟ್ಟವಳಾಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.
- 3ಕರ್ತನಾದ ದೇವರು ಹೀಗೆ ಹೇಳುತ್ತಾನೆ; ಪಟ್ಟಣದಿಂದ ಸಾವಿರ ಮಂದಿ ಯಾಗಿ ಹೊರಟವರು ನೂರು ಮಂದಿಯಾಗಿ ಉಳಿದು ಇಸ್ರಾಯೇಲಿನ ಮನೆ ಸೇರಲು ನೂರು ಮಂದಿಯಾಗಿ ಹೊರಟವರು ಹತ್ತು ಮಂದಿಯಾಗಿ ಉಳಿಯುವರು.
- 4ಕರ್ತನು ಇಸ್ರಾಯೇಲಿನ ಮನೆಯವರಿಗೆ ಹೀಗೆ ಹೇಳುತ್ತಾನೆ--ನೀವು ನನ್ನನ್ನು ಹುಡುಕಿ ಜೀವಿಸಿರಿ.
Cross references
- Jeremiah 14:17 ಯೆರೆಮೀಯ 14:17ಆದದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು--ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ; ಯಾಕಂದರೆ ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ದೊಡ್ಡ ಏಟಿನಿಂದಲೂ ಪೆಟ್ಟಿನಿಂದಲೂ ಮುರಿಯಲ್ಪಟ್ಟಳು.
- Hosea 14:1 ಹೋಶೇಯ 14:1ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ;
- Jeremiah 2:27 ಯೆರೆಮೀಯ 2:27ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು.
- Isaiah 24:20 ಯೆಶಾಯ 24:20ಭೂಮಿಯು ಕುಡುಕನ ಹಾಗೆ ಓಲಾಡು ತ್ತದೆ ಮತ್ತು ಗುಡಿಸಲಿನ ಹಾಗೆ ತೆಗೆಯಲ್ಪಡುತ್ತದೆ ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ; ಅದು ಬಿದ್ದುಹೋಗುತ್ತದೆ ತಿರಿಗಿ ಏಳುವದೇ ಇಲ್ಲ.
- Hosea 6:2 ಹೋಶೇಯ 6:2ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
- Amos 8:14 ಆಮೋಸ 8:14ಅವರು ಸಮಾರ್ಯದ ಪಾಪದ ಮೇಲೆ ಆಣೆಯಿಟ್ಟುಕೊಂಡು--ಓ ದಾನೇ, ನಿನ್ನ ದೇವರ ಜೀವದಾಣೆ ಎಂದೂ ಬೇರ್ಷೆಬ ಮಾರ್ಗದ ಜೀವದಾಣೆ ಎಂದೂ ಹೇಳುವವರು ಬಿದ್ದು ಮತ್ತೆ ಮೇಲೆ ಏಳಲಾರರು.
- Jeremiah 18:13 ಯೆರೆಮೀಯ 18:13ಆದದರಿಂದ ಕರ್ತನು ಹೇಳುವದೇ ನಂದರೆ--ಅನ್ಯಜನಾಂಗಗಳಲ್ಲಿ ವಿಚಾರಿಸಿರಿ; ಇಂಥವು ಗಳನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಕನ್ಯೆಯು ಮಹಾಭಯಂಕರವಾದದ್ದನ್ನು ಮಾಡಿದ್ದಾಳೆ.
- Amos 7:2–5 ಆಮೋಸ 7:2–5ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು. ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು. ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು.
- Jeremiah 30:12–14 ಯೆರೆಮೀಯ 30:12–14ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಗಾಯವು ಗುಣಹೊಂದದು ನಿನ್ನ ಬಾಸುಂಡೆಯು ಅಘೋರ ವಾದದ್ದು. ಅದನ್ನು ನಿನಗೆ ಕಟ್ಟುವ ಹಾಗೆ ನಿನಗೋ ಸ್ಕರ ವಾದಿಸುವವರು ಯಾರೂ ಇರುವದಿಲ್ಲ. ವಾಸಿ ಮಾಡುವ ಔಷಧಗಳು ನಿನಗೆ ಇಲ್ಲ. ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.
- Lamentations 2:13 ಪ್ರಲಾಪಗಳು 2:13ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
- Jeremiah 4:20 ಯೆರೆಮೀಯ 4:20ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- Lamentations 1:16–19 ಪ್ರಲಾಪಗಳು 1:16–19ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ. ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ. ಕರ್ತನು ನೀತಿವಂತನು, ನಾನು ಆತನ ಆಜ್ಞೆಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೇನೆ; ಎಲ್ಲಾ ಜನರೇ, ಕೇಳಿರಿ, ನಾನು ನಿಮ್ಮನ್ನು ಕೇಳಿ ಕೊಳ್ಳುತ್ತೇನೆ; ನನ್ನ ದುಃಖವನ್ನು ನೋಡಿರಿ, ನನ್ನ ಕನ್ಯೆಯರೂ ನನ್ನ ಯೌವನಸ್ಥರೂ ಸೆರೆಗೆ ಹೋಗಿದ್ದಾರೆ. ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.