Amos · chapter 7 · verse 1
Amos 7:1 in Kannada
ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು.
Devaraada kartanu nanage heege torisidanu; igo, hingaaru male biddu pairu sompaaguvadakke aarambhavaadaaga andare, raajaadaayada hullannu koyda mele beleyu vruddhiyaaguttiddaaga igo, kartanu midategalannu untumaadidanu.
Amos 7:1 in English
- King James Version (KJV)
- Thus hath the Lord GOD shewed unto me; and, behold, he formed grasshoppers in the beginning of the shooting up of the latter growth; and, lo, [it was] the latter growth after the king’s mowings.
- World English Bible (WEB)
- Thus the Lord GOD showed me: behold, he formed locusts in the beginning of the shooting up of the latter growth; and behold, it was the latter growth after the king’s harvest.
- American Standard Version (ASV)
- Thus the Lord Jehovah showed me: and, behold, he formed locusts in the beginning of the shooting up of the latter growth; and, lo, it was the latter growth after the king’s mowings.
- Bible in Basic English (BBE)
- This is what the Lord God let me see: and I saw that, when the growth of the late grass was starting, he made locusts; it was the late growth after the king's cutting was done.
- Darby Translation (DBY)
- Thus did the Lord Jehovah shew unto me; and behold, he formed locusts in the beginning of the shooting up of the latter growth, and behold, it was the latter growth after the king's mowings.
- Webster's Bible (WBS)
- Thus hath the Lord GOD shown to me; and behold, he formed grasshoppers in the beginning of the shooting up of the latter growth; and lo, [it was] the latter growth after the king's mowings.
- Young's Literal Translation (YLT)
- Thus hath the Lord Jehovah shewed me, and lo, He is forming locusts at the beginning of the ascending of the latter growth, and lo, the latter growth [is] after the mowings of the king;
Read in context
- 1ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು.
- 2ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು
- 3ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು.
Cross references
- Joel 1:4 ಯೋವೇಲ 1:4ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ.
- Amos 8:1 ಆಮೋಸ 8:1ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು--ಇಗೋ, ಬೇಸಿಗೆ ಹಣ್ಣು ಗಳುಳ್ಳ ಪುಟ್ಟಿ ಅಂದನು.
- Nahum 3:15–17 ನಹೂಮ 3:15–17ಅಲ್ಲೇ ಬೆಂಕಿ ನಿನ್ನನ್ನು ನುಂಗುವದು; ಕತ್ತಿಯು ನಿನ್ನನ್ನು ಕಡಿದುಬಿಡುವದು; ನಾಶಕ ಹುಳದಂತೆ ಅದು ನಿನ್ನನ್ನು ತಿಂದುಬಿಡುವದು; ನಾಶಕ ಹುಳದಂತೆ ಬಹು ಮಂದಿಯಾಗು; ಮಿಡತೆಗಳಂತೆ ಬಹು ಮಂದಿಯಾಗು. ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ. ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ;
- Isaiah 33:4 ಯೆಶಾಯ 33:4ನಿಮ್ಮ ಕೊಳ್ಳೆಯು ಕಂಬಳಿ ಹುಳವನ್ನು ಕೂಡಿಸುವ ಹಾಗೆ ಕೂಡಿಸಲ್ಪಡುವದು. ಮಿಡತೆಗಳು ಓಡಾಡುವ ಹಾಗೆ ಅದರ ಮೇಲೆ ಓಡಾಡುವರು.
- Amos 4:9 ಆಮೋಸ 4:9ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Joel 2:25 ಯೋವೇಲ 2:25ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
- Jeremiah 1:11–16 ಯೆರೆಮೀಯ 1:11–16ಇದಲ್ಲದೆ ಕರ್ತನ ವಾಕ್ಯವು ನನಗೆ--ಯೆರೆವಿಾ ಯನೇ, ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬಾದಾಮಿ ಮರದ ಕೋಲನ್ನು ನೋಡುತ್ತೇನೆ ಅಂದೆನು. ಆಗ ಕರ್ತನು ನನಗೆ--ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು. ಎರಡನೇ ಸಾರಿ ಕರ್ತನ ವಾಕ್ಯವು ನನಗೆ ಉಂಟಾಗಿ--ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬೇಯುವ ಮಡಿಕೆಯನ್ನು ನೋಡುತ್ತೇನೆ; ಅದರ ಬಾಯಿ ಉತ್ತರದ ಕಡೆಗೆ ಇದೆ ಅಂದೆನು. ಆಗ ಕರ್ತನು ನನಗೆ--ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವದು. ಇಗೋ, ನಾನು ಉತ್ತರದಲ್ಲಿರುವ ರಾಜ್ಯಗಳ ಕುಟುಂಬಗಳನ್ನೆಲ್ಲಾ ಕರೆಯುತ್ತೇನೆಂದು ಕರ್ತನು ಅನ್ನು ತ್ತಾನೆ; ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು. ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿ ದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯು ವೆನು.
- Zechariah 1:20 ಜೆಕರ್ಯ 1:20ಆಗ ಕರ್ತನು ನನಗೆ ನಾಲ್ಕು ಬಡಗಿಯವರನ್ನು ತೋರಿಸಿದನು.ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು.
- Jeremiah 24:1 ಯೆರೆಮೀಯ 24:1ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾ ಕೀಮನ ಮಗನಾದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಬಡಗಿಯವರನ್ನೂ ಕಮ್ಮಾರರನೂ ಯೆರೂಸಲೇಮಿನಿಂದ ಸೆರೆಗೆ ಒಯ್ದು ಬಾಬೆಲಿಗೆ ತಕ್ಕೊಂಡುಹೋದ ಮೇಲೆ ಕರ್ತನು ನನಗೆ ತೋರಿಸ ಲಾಗಿ, ಅಗೋ, ಎರಡು ಪುಟ್ಟಿ ಅಂಜೂರದ ಹಣ್ಣುಗಳು ಕರ್ತನ ದೇವಾಲಯದ ಮುಂದೆ ಇದ್ದವು.
- Exodus 10:12–16 ವಿಮೋಚನಕಾಂಡ 10:12–16ಆಗ ಕರ್ತನು ಮೋಶೆಗೆ--ಮಿಡತೆಗಳಿಗಾಗಿ ನಿನ್ನ ಕೈಯನ್ನು ಐಗುಪ್ತದ ಮೇಲೆ ಚಾಚು. ಅವು ಐಗುಪ್ತದ ಮೇಲೆ ಬಂದು ಆ ದೇಶದಲ್ಲಿರುವ ಹಸುರಾದದ್ದನ್ನೆಲ್ಲಾ ಅಂದರೆ ಆನೆಕಲ್ಲಿನ ಮಳೆಯು ಉಳಿಸಿದ್ದದನ್ನೆಲ್ಲಾ ತಿಂದು ಬಿಡಲಿ ಅಂದನು. ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು. ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು. ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ. ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.
- Amos 7:7 ಆಮೋಸ 7:7ಆತನು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನು ನೂಲು ಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಮಟ್ಟ ಇತ್ತು.
- Amos 7:4 ಆಮೋಸ 7:4ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.