Amos · chapter 8 · verse 7
Amos 8:7 in Kannada
ಕರ್ತನು ಯಾಕೋಬಿನ ಹೆಚ್ಚಳದ ಮೇಲೆ ಆಣೆಯಿಟ್ಟುಕೊಂಡು ಹೇಳುವದೇನಂದರೆ--ನಿಶ್ಚಯ ವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವದಿಲ್ಲ.
Kartanu yaakobina hechchalada mele aaneyittukondu heluvadenandare--nishchaya vaagiyoo naanu endendigoo avara yaava kriyegalannoo mareyuvadilla.
Amos 8:7 in English
- King James Version (KJV)
- The LORD hath sworn by the excellency of Jacob, Surely I will never forget any of their works.
- World English Bible (WEB)
- The LORD has sworn by the pride of Jacob, “Surely I will never forget any of their works.
- American Standard Version (ASV)
- Jehovah hath sworn by the excellency of Jacob, Surely I will never forget any of their works.
- Bible in Basic English (BBE)
- The Lord has taken an oath by the pride of Jacob, Truly I will ever keep in mind all their works.
- Darby Translation (DBY)
- Jehovah hath sworn by the glory of Jacob, Certainly I will never forget any of their works.
- Webster's Bible (WBS)
- The LORD hath sworn by the excellence of Jacob, Surely I will never forget any of their works.
- Young's Literal Translation (YLT)
- Sworn hath Jehovah by the excellency of Jacob: 'I forget not for ever any of their works.
Read in context
- 5ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಗೋಧಿ ಯನ್ನು ಇಡುವ ಹಾಗೆ ಸಬ್ಬತ್ತು ಯಾವಾಗ ತೀರುವದೆಂದೂ ಎಫವನ್ನು ಚಿಕ್ಕದಾಗಿಯು ಶೆಕೇಲನ್ನು ದೊಡ್ಡದಾಗಿಯು ಕಳ್ಳತ್ರಾಸುಗಳನ್ನು ಮೋಸಕ್ಕಾಗಿ ಮಾಡೋಣವೆಂದೂ
- 6ಬಡವರನ್ನು ಬೆಳ್ಳಿಗೆ ದರಿದ್ರ ರನ್ನು ಕೆರಗಳ ಜೋಡಿಗೆ ಕೊಂಡುಕೊಂಡು ಗೋಧಿಯ ಕಸವನ್ನು ಮಾರೋಣವೆಂದೂ ಹೇಳುತ್ತೀರಲ್ಲಾ?
- 7ಕರ್ತನು ಯಾಕೋಬಿನ ಹೆಚ್ಚಳದ ಮೇಲೆ ಆಣೆಯಿಟ್ಟುಕೊಂಡು ಹೇಳುವದೇನಂದರೆ--ನಿಶ್ಚಯ ವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವದಿಲ್ಲ.
- 8ಇದಕ್ಕಾಗಿ ದೇಶವು ನಡುಗುವದಿಲ್ಲವೇ? ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವದಿಲ್ಲವೇ? ಅದು ಪ್ರವಾಹದಂತೆ ಉಬ್ಬಿ ಐಗುಪ್ತದ ಪ್ರವಾಹದಂತೆ ಬಡುಕೊಂಡು ಇಳಿಯು ವದು.
- 9ದೇವರಾದ ಕರ್ತನು ಹೇಳುತ್ತಾನೆ--ಆ ದಿನದಲ್ಲಿ ಆಗುವದೇನಂದರೆ, ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡು ತ್ತೇನೆ.
Cross references
- Amos 6:8 ಆಮೋಸ 6:8ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.
- Hosea 9:9 ಹೋಶೇಯ 9:9ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
- Hosea 7:2 ಹೋಶೇಯ 7:2ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕಮಾಡು ತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನಸಿಕೊಳ್ಳು ವದಿಲ್ಲ; ಈಗ ಅವರ ಸ್ವಂತ ಕೃತ್ಯಗಳು ಅವರನ್ನು ಸುತ್ತಿಕೊಂಡಿವೆ; ಅವು ನನ್ನ ಮುಖದ ಮುಂದೆ ಇವೆ.
- Hosea 8:13 ಹೋಶೇಯ 8:13ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ; ಆದರೆ ಕರ್ತನು ಅವುಗಳಿಗೆ ಮೆಚ್ಚುವದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕ ಮಾಡಿಕೊಂಡು ಅವರ ಪಾಪಗಳನ್ನು ವಿಚಾ ರಿಸುವನು; ಅವರು ಐಗುಪ್ತಕ್ಕೆ ಹಿಂದಿರುಗುವರು.ಇಸ್ರಾಯೇಲು ತನ್ನ ನಿರ್ಮಾಣಿಕ ನನ್ನು ಮರೆತುಬಿಟ್ಟು ಆಲಯಗಳನ್ನು ಕಟ್ಟಿಕೊಂಡಿದೆ; ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚು ಮಾಡಿಕೊಂಡಿದೆ; ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವುಗಳ ಅರಮನೆಗಳನ್ನು ನುಂಗಿಬಿಡುವದು.
- Psalm 47:4 ಕೀರ್ತನೆಗಳು 47:4ಆತನು ಪ್ರೀತಿಮಾಡುವ ಯಾಕೋಬನ ಘನತೆಯಾದ ನಮ್ಮ ಬಾಧ್ಯತೆಯನ್ನು ಆದುಕೊಳ್ಳುತ್ತಾನೆ--ಸೆಲಾ.
- Psalm 10:11 ಕೀರ್ತನೆಗಳು 10:11ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Jeremiah 17:1 ಯೆರೆಮೀಯ 17:1ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ ವಜ್ರದ ಮೊನೆಯಿಂದಲೂ ಬರೆಯಲ್ಪಟ್ಟಿದೆ; ಅದು ಅವರ ಹೃದಯದ ಹಲಿಗೆಯ ಮೇಲೆಯೂ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲ್ಪಟ್ಟಿದೆ.
- Deuteronomy 33:26–29 ಧರ್ಮೋಪದೇಶಕಾಂಡ 33:26–29ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ಆತನು ನಿನ್ನ ಸಹಾಯಕ್ಕೆ ಪರಲೋಕದಲ್ಲಿಯೂ ತನ್ನ ಘನತೆಯಲ್ಲಿಯೂ ಆಕಾಶದ ಮೇಲೆಯೂ ಬರುತ್ತಾನೆ. ನಿತ್ಯನಾದ ದೇವರು ನಿನ್ನ ಆಶ್ರಯವು; ಆತನ ನಿತ್ಯವಾದ ತೋಳುಗಳು ಕೆಳಗಿವೆ, ಶತ್ರುವನ್ನು ನಿನ್ನ ಮುಂದೆ ಹೊರಡಿಸಿ--ಅವರನ್ನು ನಾಶಮಾಡು ಎಂದು ಹೇಳುವನು. ಇಸ್ರಾಯೇಲು ಒಂಟಿಯಾಗಿ ಭರವಸದಿಂದ ಸುರಕ್ಷಿತವಾಗಿ ವಾಸಿಸುವದು. ಧಾನ್ಯ ದ್ರಾಕ್ಷಾರಸಗಳ ದೇಶದಲ್ಲಿ ಯಾಕೋಬನ ಬುಗ್ಗೆ ಇರುವದು. ಅವನ ಆಕಾಶಗಳು ಸಹ ಮಂಜನ್ನು ಸುರಿಸುವವು.ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ. ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.
- Jeremiah 31:34 ಯೆರೆಮೀಯ 31:34ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.
- Psalm 68:34 ಕೀರ್ತನೆಗಳು 68:34ದೇವರ ಬಲವನ್ನು ವಿವರಿಸಿರಿ; ಇಸ್ರಾಯೇಲಿನ ಮೇಲೆ ಆತನಿಗೆ ಘನ ತೆಯೂ ಮೇಘಗಳಲ್ಲಿ ಆತನಿಗೆ ಬಲವೂ ಇರುತ್ತದೆ.ಓ ದೇವರೇ, ನಿನ್ನ ಪರಿಶುದ್ಧ ಸ್ಥಳಗಳಿಂದ ನೀನು ಭಯಂಕರನಾಗಿದ್ದೀ; ಇಸ್ರಾಯೇಲಿನ ದೇವರಾದ ಈತನೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುತ್ತಾನೆ. ದೇವರಿಗೆ ಸ್ತುತಿಯಾಗಿಲಿ.
- Luke 2:32 ಲೂಕನು 2:32ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ ಆಗಿದೆ ಅಂದನು.