Colossians · chapter 3 · verse 18
Colossians 3:18 in Kannada
ಸ್ತ್ರೀಯರೇ, ನೀವು ಕರ್ತನಲ್ಲಿ ಯೋಗ್ಯರಾಗಿ ರುವಂತೆ ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.
Streeyare, neevu kartanalli yogyaraagi ruvante nimma gandandirige adheenaraagirri.
Colossians 3:18 in English
- King James Version (KJV)
- Wives, submit yourselves unto your own husbands, as it is fit in the Lord.
- World English Bible (WEB)
- Wives, be in subjection to your husbands, as is fitting in the Lord.
- American Standard Version (ASV)
- Wives, be in subjection to your husbands, as is fitting in the Lord.
- Bible in Basic English (BBE)
- Wives, be under the authority of your husbands, as is right in the Lord.
- Darby Translation (DBY)
- Wives, be subject to [your] husbands, as is fitting in [the] Lord.
- Webster's Bible (WBS)
- Wives, submit yourselves to your own husbands, as it is fit in the Lord.
- Young's Literal Translation (YLT)
- The wives! be subject to your own husbands, as is fit in the Lord;
Read in context
- 16ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ.
- 17ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
- 18ಸ್ತ್ರೀಯರೇ, ನೀವು ಕರ್ತನಲ್ಲಿ ಯೋಗ್ಯರಾಗಿ ರುವಂತೆ ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.
- 19ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ; ಅವರಿಗೆ ನಿಷ್ಠುರವಾಗಿರಬೇಡಿರಿ.
- 20ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯ ರಾಗಿರ್ರಿ; ಯಾಕಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.
Cross references
- Titus 2:4–5 ತೀತನಿಗೆ 2:4–5ಇದಲ್ಲದೆ ದೇವರ ವಾಕ್ಯವು ದೂಷಿಸಲ್ಪ ಡದಂತೆ ಯೌವನ ಸ್ತ್ರೀಯರು ಸ್ವಸ್ಥಚಿತ್ತರೂ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ ವಿವೇಕವುಳ್ಳವರೂ ಪತಿವ್ರತೆಯರೂ ಮನೆಯನ್ನು ನೋಡಿಕೊಳ್ಳುವವರೂ ಒಳ್ಳೆಯವರೂ ತಮ್ಮ ಗಂಡಂದಿ ರಿಗೆ ವಿಧೇಯರೂ ಆಗಿರಬೇಕೆಂದು ಅವರಿಗೆ ಹೇಳು.
- 1 Corinthians 11:3 1 ಕೊರಿಂಥದವರಿಗೆ 11:3ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
- 1 Peter 3:1–6 1 ಪೇತ್ರನು 3:1–6ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಯಾರಾದರೂ ವಾಕ್ಯಕ್ಕೆ ಅವಿಧೇಯರಾಗಿದ್ದರೂ ಹೆಂಡತಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ ನಿಮ್ಮ ನಿರ್ಮಲವಾದ ಮತ್ತು ಭಯಭರಿತವಾದ ನಡತೆಯನ್ನು ಅವರು ನೋಡಲಿ. ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ. ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು. ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.
- Genesis 3:16 ಆದಿಕಾಂಡ 3:16ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು, ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ, ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು; ಅವನು ನಿನ್ನನ್ನು ಆಳುವನು ಅಂದನು.
- 1 Timothy 2:12 1 ತಿಮೊಥೆಯನಿಗೆ 2:12ಆದರೆ ಉಪದೇಶ ಮಾಡುವದ ಕ್ಕಾಗಲೀ ಪುರುಷರ ಮೇಲೆ ಅಧಿಕಾರ ನಡಿಸುವದ ಕ್ಕಾಗಲೀ ಸ್ತ್ರೀಗೆ ನಾನು ಅಪ್ಪಣೆಕೊಡುವದಿಲ್ಲ; ಆಕೆಯು ಮೌನವಾಗಿರಬೇಕು.
- Esther 1:20 ಎಸ್ತೇರಳು 1:20ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲಾದರಲ್ಲಿ ಕೇಳಲ್ಪಟ್ಟಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರ ವರೆಗೂ ತಮ್ಮ ಯಜಮಾನರಿಗೆ ಮಾನಕೊಡುವ ರೆಂದು ಹೇಳಿದನು.
- 1 Corinthians 14:34 1 ಕೊರಿಂಥದವರಿಗೆ 14:34ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ.
- Acts 5:29 ಅಪೊಸ್ತಲರ ಕೃತ್ಯಗಳು 5:29ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.