Daniel · chapter 10 · verse 21
Daniel 10:21 in Kannada
ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
Aadare satyada barahadalli soochisalpattaddannu ninage tilisuttene; nimma prabhuvaada viాkaayelane horatu matte yaaroo nanna sangada ee sangatigalalli balagollalilla.
Daniel 10:21 in English
- King James Version (KJV)
- But I will shew thee that which is noted in the scripture of truth: and [there is] none that holdeth with me in these things, but Michael your prince.
- World English Bible (WEB)
- But I will tell you that which is inscribed in the writing of truth. There is no one who holds with me against these but Michael your prince.
- American Standard Version (ASV)
- But I will tell thee that which is inscribed in the writing of truth: and there is none that holdeth with me against these, but Michael your prince.
- Bible in Basic English (BBE)
- But I am going back to make war with the angel of Persia, and when I am gone, the angel of Greece will come. And there is no one on my side against these, but Michael, your angel.
- Darby Translation (DBY)
- However, I will declare unto thee that which is set down in the scripture of truth; and there is not one that sheweth himself strong with me against these, but Michael your prince.
- Webster's Bible (WBS)
- But I will show thee that which is noted in the scripture of truth: and [there is] none that holdeth with me in these things, but Michael your prince.
- Young's Literal Translation (YLT)
- but I declare to thee that which is noted down in the Writing of Truth, and there is not one strengthening himself with me, concerning these, except Michael your head.
Read in context
- 19ಹೇಳಿದ್ದೇ ನಂದರೆ--ಓ ಅತಿಪ್ರಿಯನಾದ ಮನುಷ್ಯನೇ, ಭಯಪಡ ಬೇಡ; ನಿನಗೆ ಸಮಾಧಾನವಾಗಲಿ; ಬಲವಾಗಿರು; ಹೌದು ಬಲವಾಗಿರು; ಯಾವಾಗ ಅವನು ನನ್ನ ಸಂಗಡ ಹೀಗೆ ಮಾತನಾಡಿದನೋ ನಾನು ನನ್ನ ಬಲವನ್ನು ಹೊಂದಿ--ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ ಎಂದು ಹೇಳಿದೆನು.
- 20ಅವನು ಹೇಳಿದ್ದೇನಂದರೆ--ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ? ಈಗ ನಾನು ಪಾರಸಿಯ ಪ್ರಭುವಿನ ಸಂಗಡ (ಕಾದಾಡಲು) ತಿರುಗಿ ಹೋಗುತ್ತೇನೆ; ನಾನು ಹೋದ ಮೇಲೆ ಇಗೋ, ಗ್ರೀಕ್ ಪ್ರಭುವು ಬರುವನು.ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
- 21ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
Cross references
- Daniel 10:13 ದಾನಿಯೇಲನು 10:13ಆದರೆ ಪಾರಸಿಯ ರಾಜ್ಯದ ಪ್ರಭುವು ಇಪ್ಪತ್ತೊಂದು ದಿವಸಗಳು ನನಗೆ ಎದುರು ನಿಂತನು; ಆದರೆ ಇಗೋ,ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ವಿಾಕಾಯೇಲನು ನನ್ನ ಸಹಾ ಯಕ್ಕೆ ಬಂದನು; ನಾನು ಆ ಪಾರಸೀಯ ಅರಸರ ಬಳಿಯಲ್ಲಿ ಉಳಿದುಕೊಂಡು
- Revelation 12:7 ಪ್ರಕಟನೆ 12:7ಇದಲ್ಲದೆ ಪರಲೋಕದಲ್ಲಿ ಯುದ್ಧ ನಡೆಯಿತು. ವಿಾಕಾಯೇಲನೂ ಅವನ ದೂತರೂ ಘಟಸರ್ಪಕ್ಕೆ ವಿರೋಧವಾಗಿ ಯುದ್ಧಮಾಡಿದರು; ಘಟಸರ್ಪನೂ ಅವನ ದೂತರೂ ಯುದ್ದಮಾಡಿ ಸೋತು ಹೋದರು.
- Daniel 12:1 ದಾನಿಯೇಲನು 12:1ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
- Jude 1:9 ಯೂದನು 1:9ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ--ಕರ್ತನು ನಿನ್ನನ್ನು ಗದರಿಸಲಿ ಅಂದನು.
- Daniel 11:1–12 ದಾನಿಯೇಲನು 11:1–12ನಾನು ಸಹ ಮೇದ್ಯನಾದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ ಅವ ನನ್ನು ಸ್ಥಿರಪಡಿಸುವದಕ್ಕೂ ಬಲಪಡಿಸುವದಕ್ಕೂ ನಿಂತಿ ದ್ದೇನೆ. ನಾನು ಈಗ ನಿನಗೆ ಸತ್ಯವನ್ನು ತಿಳಿಸುತ್ತೇನೆ; ಇಗೋ, ಪಾರಸಿಯರಲ್ಲಿ ಇನ್ನು ಮೂರು ಅರಸರು ನಿಲ್ಲುವರು; ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು; ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸು ವನು. ಆಗ, ಬಲವುಳ್ಳ ಒಬ್ಬ ಅರಸನು ಎದ್ದು ಮಹಾಅಧಿಕಾರದಿಂದ ಆಳಿ ತನ್ನ ಚಿತ್ತದ ಪ್ರಕಾರ ಮಾಡುವನು. ಅವನು ತಲೆ ಎತ್ತಿದ ಮೇಲೆ ಅವನ ರಾಜ್ಯವು ಮುರಿಯಲ್ಪಟ್ಟು ಆಕಾಶದ ನಾಲ್ಕು ದಿಕ್ಕುಗಳ ಕಡೆಗೆ ವಿಭಾಗಿಸಲ್ಪಡುವದು; ಅವನ ಸಂತತಿಗಾಗಿ ಅಲ್ಲ, ಅಥವಾ ಅವನು ಆಳಿದ ಅಧಿಕಾರದ ಹಾಗಲ್ಲ ಅವನ ರಾಜ್ಯವು ಕೀಳಲ್ಪಟ್ಟು ಅವರಿಗಲ್ಲ, ಮತ್ತೊಬ್ಬರಿಗೆ ಹಂಚಲ್ಪಡುವದು. ದಕ್ಷಿಣದ ಅರಸನು ಬಲಿಷ್ಠನಾಗಿ ರುವನು. ಆದರೆ ಅವನ ಪ್ರಧಾನರಲ್ಲಿ ಒಬ್ಬನು ಇವನಿ ಗಿಂತ ಬಲಿಷ್ಠನಾಗಿದ್ದು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವದು. ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ. ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು. ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು. ಹೀಗೆ ದಕ್ಷಿಣದ ಅರಸನು ಅವನ ರಾಜ್ಯಕ್ಕೆ ಬಂದು ಮತ್ತೆ ಸ್ವಂತ ದೇಶಕ್ಕೆ ಹಿಂತಿರುಗಿ ಹೋಗುವನು. ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು. ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಅವನ ಸಂಗಡ ಅಂದರೆ ಉತ್ತರದ ಅರಸನ ಸಂಗಡ ಯುದ್ಧಮಾಡುವನು; ಅವನು ಮಹಾ ಸೈನ್ಯವನ್ನು ನಿಲ್ಲಿಸುವನು; ಆದರೆ ಆ ಮಹಾ ಸಮೂಹವು ಇವನ ಕೈಗೆ ಕೊಡಲ್ಪಡುವದು. ಆ ಸಮೂಹವನ್ನು ಅವನು ತೆಗೆದು ಹಾಕಿದ ಮೇಲೆ ಅವನ ಹೃದಯವು ಹೆಚ್ಚಳಪಡುವದು; ಹೌದು, ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ ಪ್ರಬಲವಾಗ ಲಾರನು.
- Daniel 9:25 ದಾನಿಯೇಲನು 9:25ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.
- Isaiah 41:22–23 ಯೆಶಾಯ 41:22–23ಅವರು ಅವುಗಳನ್ನು ತಂದು ಮುಂದೆ ಏನಾಗುವದು ಎಂದು ನಮಗೆ ತೋರಿಸಲಿ; ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು ಅವುಗಳ ಪರಿಣಾಮವನ್ನು ಇಲ್ಲವೇ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು. ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ; ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದ ನ್ನಾಗಲಿ ಕೆಟ್ಟದ್ದನ್ನಾಗಲಿಮಾಡಿರಿ.
- Isaiah 43:8–9 ಯೆಶಾಯ 43:8–9ಕಣ್ಣಿದ್ದರೂ ಕುರುಡರಾದ, ಕಿವಿಯಿದ್ದರೂ ಕಿವುಡ ರಾದ ಜನರನ್ನು ಕರೆ. ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ, ಎಲ್ಲಾ ಜನರೂ ಸೇರಿಕೊಳ್ಳಲಿ. ಅವರಲ್ಲಿ ಇದನ್ನು ಪ್ರಕಟಿಸುವವರೂ ಹಿಂದಿನವು ಗಳನ್ನು ನಮಗೆ ತೋರಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು ಇದನ್ನು ಕೇಳಿ ನಿಜವೆಂದು ಹೇಳಲಿ.
- Acts 15:15 ಅಪೊಸ್ತಲರ ಕೃತ್ಯಗಳು 15:15ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ--
- Daniel 12:4 ದಾನಿಯೇಲನು 12:4ಆದರೆ ಓ ದಾನಿಯೇಲನೇ, ನೀನು ಅಂತ್ಯ ಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆಯುವ ಆ ಗ್ರಂಥಕ್ಕೆ ಮುದ್ರೆಹಾಕು; ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು.
- Daniel 8:26 ದಾನಿಯೇಲನು 8:26ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.
- Amos 3:7 ಆಮೋಸ 3:7ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ.