Daniel · chapter 11 · verse 22
Daniel 11:22 in Kannada
ಪ್ರವಾಹದಂತಿರುವ ಆ ವ್ಯೂಹಗಳೂ ಒಡಂಬಡಿಕೆಯ ಪ್ರಧಾನನೂ ಅವನ ರಭಸಕ್ಕೆ ಸಿಕ್ಕಿ ಒಡೆದುಕೊಂಡು ಹೋಗಿ ಮುರಿದು ಹೋಗುವರು.
Pravaahadantiruva aa vyoohagaloo odambadikeya pradhaananoo avana rabhasakke sikki odedukondu hogi muridu hoguvaru.
Daniel 11:22 in English
- King James Version (KJV)
- And with the arms of a flood shall they be overflown from before him, and shall be broken; yea, also the prince of the covenant.
- World English Bible (WEB)
- The overwhelming forces will be overwhelmed from before him, and will be broken. Yes, also the prince of the covenant.
- American Standard Version (ASV)
- And the overwhelming forces shall be overwhelmed from before him, and shall be broken; yea, also the prince of the covenant.
- Bible in Basic English (BBE)
- And his forces will be completely taken away from before him and broken; and even the ruler of the agreement will have the same fate.
- Darby Translation (DBY)
- And the overflowing forces shall be overflowed from before him, and shall be broken: yea, also the prince of the covenant.
- Webster's Bible (WBS)
- And with the arms of a flood shall they be overflowed from before him, and shall be broken; yes, also the prince of the covenant.
- Young's Literal Translation (YLT)
- And the arms of the flood are overflowed from before him, and are broken; and also the leader of the covenant.
Read in context
- 20ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ.
- 21ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು; ಅವನಿಗೆ ರಾಜ್ಯದ ಮರ್ಯಾದೆಯನ್ನು ಕೊಡುವದಿಲ್ಲ, ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡಕೊಳ್ಳುವನು.
- 22ಪ್ರವಾಹದಂತಿರುವ ಆ ವ್ಯೂಹಗಳೂ ಒಡಂಬಡಿಕೆಯ ಪ್ರಧಾನನೂ ಅವನ ರಭಸಕ್ಕೆ ಸಿಕ್ಕಿ ಒಡೆದುಕೊಂಡು ಹೋಗಿ ಮುರಿದು ಹೋಗುವರು.
- 23ಅವನ ಸಂಗಡ ಸಮಾಧಾನ ಮಾಡಿ ಕೊಂಡ ಮೇಲೆ ಕಪಟವಾಗಿ ನಡೆಯುವನು. ಕೊಂಚ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು.
- 24ನೆಮ್ಮದಿಯಿಂದ ಸಂಸ್ಥಾನದ ಫಲವತ್ತಾದ ಪ್ರದೇಶ ಗಳಲ್ಲಿ ನುಗ್ಗಿ ತಂದೆ ತಾತಂದಿರು ಮಾಡದ ಕಾರ್ಯ ಗಳನ್ನು ಮಾಡುವನು; ಸೂರೆ, ಸುಲಿಗೆ, ಕೊಳ್ಳೆಹೊಡೆ ದವುಗಳನ್ನು ಅವರಲ್ಲಿ ಚೆಲ್ಲಿಬಿಡುವನು. ಹೌದು, ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತ ಕಾಲದ ತನಕ ಕಲ್ಪಿಸುತ್ತಿರುವನು.
Cross references
- Daniel 8:10–11 ದಾನಿಯೇಲನು 8:10–11ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು. ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;
- Daniel 9:26 ದಾನಿಯೇಲನು 9:26ಅರವತ್ತೆರಡು ವಾರಗಳಾದ ಮೇಲೆ ಮೆಸ್ಸೀಯನು ಛೇದಿಸಲ್ಪಡುವನು. ಆದರೆ ತನಗೆ ಅಲ್ಲ; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವದು. ಅಂತ್ಯದ ವರೆಗೂ ಯುದ್ಧವಾಗಿ ನಾಶನಗಳು ಸಂಭವಿಸುವವು.ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- Daniel 11:10 ದಾನಿಯೇಲನು 11:10ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು.
- Daniel 8:25 ದಾನಿಯೇಲನು 8:25ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.
- Amos 8:8 ಆಮೋಸ 8:8ಇದಕ್ಕಾಗಿ ದೇಶವು ನಡುಗುವದಿಲ್ಲವೇ? ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವದಿಲ್ಲವೇ? ಅದು ಪ್ರವಾಹದಂತೆ ಉಬ್ಬಿ ಐಗುಪ್ತದ ಪ್ರವಾಹದಂತೆ ಬಡುಕೊಂಡು ಇಳಿಯು ವದು.
- Nahum 1:8 ನಹೂಮ 1:8ಆದರೆ ಮೇರೆ ವಿಾರುವ ಪ್ರಳಯ ದಿಂದ ಅದರ ಸ್ಥಳವನ್ನು ಮುಗಿಸಿಬಿಡುವನು; ಕತ್ತಲೆ ಆತನ ಶತ್ರುಗಳನ್ನು ಹಿಂದಟ್ಟುವದು.
- Amos 9:5 ಆಮೋಸ 9:5ಸೈನ್ಯಗಳ ದೇವರಾದ ಕರ್ತನೇ, ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಐಗುಪ್ತದ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವದು.
- Isaiah 8:7–8 ಯೆಶಾಯ 8:7–8ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ ಯೆಹೂದ ದಲ್ಲಿಯೂ ನುಗ್ಗಿ ತುಂಬಿ ತುಳುಕಿ ಹಬ್ಬಿಕೊಂಡು ಕತ್ತಿ ನವರೆಗೂ ಏರುವದು; ಓ ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವವು.
- Revelation 12:15–16 ಪ್ರಕಟನೆ 12:15–16ಆ ಸ್ತ್ರೀಯನ್ನು ಪ್ರವಾಹವು ಬಡಕೊಂಡು ಹೋಗ ಬೇಕೆಂದು ಆಕೆಯ ಹಿಂದೆ ಸರ್ಪವು ತನ್ನ ಬಾಯೊಳಗಿಂದ ನೀರನ್ನು ಪ್ರವಾಹದಂತೆ ಬಿಟ್ಟಿತು. ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ಪ್ರವಾಹವನ್ನು ಕುಡಿದುಬಿಟ್ಟಿತು.ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟನು.