Daniel · chapter 12 · verse 6
Daniel 12:6 in Kannada
ಅವರು ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು ಹೇಳಿದ್ದೇನಂದರೆ--ಈ ಆಶ್ಚರ್ಯದ ಅಂತ್ಯವು ಎಷ್ಟರ ವರೆಗೆ ಇರುವದು ಎಂದು ಅಂದಾಗ
Avaru nadiya neerina mele nintu naaru batteyannu dharisidda obbanige innobbanu heliddenandare--ee aashcharyada antyavu eshtara varege iruvadu endu andaaga
Daniel 12:6 in English
- King James Version (KJV)
- And [one] said to the man clothed in linen, which [was] upon the waters of the river, How long [shall it be to] the end of these wonders?
- World English Bible (WEB)
- One said to the man clothed in linen, who was above the waters of the river, “How long will it be to the end of these wonders?”
- American Standard Version (ASV)
- And one said to the man clothed in linen, who was above the waters of the river, How long shall it be to the end of these wonders?
- Bible in Basic English (BBE)
- And I said to the man clothed in linen, who was over the waters of the river, How long will it be to the end of these wonders?
- Darby Translation (DBY)
- And he said to the man clothed in linen, who was above the waters of the river, How long [is it to] the end of these wonders?
- Webster's Bible (WBS)
- And [one] said to the man clothed in linen, who [was] upon the waters of the river, How long [shall it be to] the end of these wonders?
- Young's Literal Translation (YLT)
- and he saith to the one clothed in linen, who [is] upon the waters of the flood, 'Till when [is] the end of these wonders?'
Read in context
- 4ಆದರೆ ಓ ದಾನಿಯೇಲನೇ, ನೀನು ಅಂತ್ಯ ಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆಯುವ ಆ ಗ್ರಂಥಕ್ಕೆ ಮುದ್ರೆಹಾಕು; ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು.
- 5ಆಗ ದಾನಿಯೇಲನೆಂಬ ನಾನು ನೋಡಿದೆನು; ಇಗೋ, ಬೇರೆ ಇಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ ಮತ್ತೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು.
- 6ಅವರು ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು ಹೇಳಿದ್ದೇನಂದರೆ--ಈ ಆಶ್ಚರ್ಯದ ಅಂತ್ಯವು ಎಷ್ಟರ ವರೆಗೆ ಇರುವದು ಎಂದು ಅಂದಾಗ
- 7ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತವಾಗಿರುವಾತನ ಮೇಲೆ ಆಣೆ ಇಟ್ಟು--ಅದು ಕಾಲ, ಕಾಲಗಳು, ಅರ್ಧಕಾಲ ಇರುವದೆಂದೂ ಆತನು ಪರಿಶುದ್ಧ ಜನರ ಬಲವನ್ನು ಚದರಿಸಿದ ಮೇಲೆ ಇವೆಲ್ಲವುಗಳು ಈಡೇರುವವೆಂದೂ ಅಂದದ್ದನ್ನು ನಾನು ಕೇಳಿದೆನು.
- 8ಆದರೆ ಗ್ರಹಿಸಲಿಲ್ಲ; ಆಗ ನಾನು--ಓ ನನ್ನ ಕರ್ತನೇ, ಈ ಸಂಗತಿಗಳ ಅಂತ್ಯವೇನು ಎಂದು ಕೇಳಿದೆನು.
Cross references
- Zechariah 1:12–13 ಜೆಕರ್ಯ 1:12–13ಆಗ ಕರ್ತನ ದೂತನು ಉತ್ತರಕೊಟ್ಟು ಹೀಗಂ ದನು--ಓ ಸೈನ್ಯಗಳ ಕರ್ತನೇ, ನೀನು ಯೆರೂಸಲೇ ಮನ್ನೂ ಯೆಹೂದದ ಪಟ್ಟಣಗಳನ್ನೂ ಎಷ್ಟರ ವರೆಗೆ ಕನಿಕರಿಸದೆ ಇರುವಿ? ಅವುಗಳ ಮೇಲೆ ಈ ಎಪ್ಪತ್ತು ವರುಷಗಳು ಸಿಟ್ಟು ಮಾಡಿದ್ದೀಯಲ್ಲವೋ ಅಂದನು. ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು.
- Ezekiel 9:2 ಯೆಹೆಜ್ಕೇಲನು 9:2ಇಗೋ, ಆರು ಮಂದಿ ಮನುಷ್ಯರು ಉತ್ತರ ದಿಕ್ಕಿನ ಮೇಲ್ಭಾಗದ ಆ ಮಾರ್ಗದಿಂದ ಬಂದರು ಮತ್ತು ಪ್ರತಿ ಮನುಷ್ಯನ ಕೈಯಲ್ಲಿ ಕೊಲ್ಲುವ ಆಯುಧವು ಇತ್ತು; ಅವರಲ್ಲಿ ಒಬ್ಬನು ನಾರುಮಡಿಯನ್ನು ಧರಿಸಿಕೊಂಡು ತನ್ನ ಪಕ್ಕೆಯಲ್ಲಿ ಲೇಖಕನ ದೌತಿಯನ್ನು ಇಟ್ಟುಕೊಂಡಿ ದ್ದನು. ಇವರೆಲ್ಲರೂ ಕಂಚಿನ ಯಜ್ಞವೇದಿಯ ಬಳಿ ಯಲ್ಲಿ ನಿಂತರು.
- Daniel 8:13 ದಾನಿಯೇಲನು 8:13ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ
- Daniel 8:16 ದಾನಿಯೇಲನು 8:16ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ--ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.
- Daniel 10:5–6 ದಾನಿಯೇಲನು 10:5–6ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು, ಆಗ ಇಗೋ, ನಾರುಮಡಿ ಯನ್ನು ಧರಿಸಿದ್ದ ಒಬ್ಬ ಮನುಷ್ಯನಿಗೆ ಆತನು ನಡುವು ಊಫಜಿನ ಉತ್ತಮ ಬಂಗಾರದಿಂದ ಕಟ್ಟಲ್ಪಟ್ಟಿತ್ತು. ಆತನ ದೇಹವು ತಾರ್ಷೀಷ್ ಕಲ್ಲಿನ ಹಾಗೆಯೂ ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಪೀತರತ್ನದ ಹಾಗೆ ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ ಆತನ ಮಾತುಗಳ ಶಬ್ದವು ಜನಸಮೂಹದ ಹಾಗೆಯೂ ಇದ್ದವು.
- Revelation 19:14 ಪ್ರಕಟನೆ 19:14ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು.
- Psalm 74:9 ಕೀರ್ತನೆಗಳು 74:9ನಮ್ಮ ಗುರುತುಗಳನ್ನು ನೋಡದೆ ಇದ್ದೇವೆ; ಇನ್ನು ಮೇಲೆ ಯಾವ ಪ್ರವಾದಿಯೂ ಇರುವದಿಲ್ಲ ಇಲ್ಲವೆ ಇದು ಎಷ್ಟರವರೆಗೆ ಎಂದು ತಿಳಿದವನು ನಮ್ಮಲ್ಲಿ ಯಾರೂ ಇಲ್ಲ.
- 1 Peter 1:12 1 ಪೇತ್ರನು 1:12ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.
- Revelation 10:2–5 ಪ್ರಕಟನೆ 10:2–5ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು. ಆ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟಾಗ ನಾನು ಬರೆಯ ಬೇಕೆಂದಿದ್ದೆನು. ಅದಕ್ಕೆ--ಆ ಏಳು ಗುಡುಗುಗಳು ನುಡಿದವುಗಳನ್ನು ನೀನು ಬರೆಯದೆ ಮುದ್ರಿಸು ಎಂದು ಪರಲೋಕದಿಂದ ಬಂದ ಶಬ್ದವು ನನಗೆ ಹೇಳುವದನ್ನು ಕೇಳಿದೆನು. ಅನಂತರ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿದ್ದ ದೂತನನ್ನು ನಾನು ಕಂಡೆನು. ಅವನು ತನ್ನ ಕೈಯನ್ನು ಪರಲೋಕದ ಕಡೆಗೆ ಎತ್ತಿ--
- Revelation 15:6 ಪ್ರಕಟನೆ 15:6ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.
- Ephesians 3:10 ಎಫೆಸದವರಿಗೆ 3:10ನಾನಾ ವಿಧವಾದ ದೇವರ ಜ್ಞಾನವು ಪರಲೋಕದಲ್ಲಿ ಈಗ ರಾಜತ್ವಗಳಿಗೂ ಅಧಿಕಾರಗಳಿಗೂ ಸಭೆಯ ಮೂಲಕ ಗೊತ್ತಾಗಬೇಕೆಂಬದಾಗಿಯೂ ಆತನು ಉದ್ದೇಶಿಸಿದ್ದನು.
- Revelation 6:10 ಪ್ರಕಟನೆ 6:10ಅವರು--ಓ ಕರ್ತನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂಮಿಯ ಮೇಲೆ ವಾಸಿಸುವವರು ನಮ್ಮ ರಕ್ತವನ್ನು ಸುರಿಸಿದ್ದಕ್ಕಾಗಿ ನೀನು ಎಷ್ಟು ಕಾಲದವರೆಗೆ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ ಎಂದು ಮಹಾಶಬ್ದದಿಂದ ಕೂಗುತ್ತಾ ಹೇಳಿದರು.