Daniel · chapter 3 · verse 8
Daniel 3:8 in Kannada
ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು
Heegiralu aa samayadalli kasdeeyaru yehoodyara mele dooru horisalu sannidhige bandu
Daniel 3:8 in English
- King James Version (KJV)
- Wherefore at that time certain Chaldeans came near, and accused the Jews.
- World English Bible (WEB)
- Therefore at that time certain Chaldeans came near and brought accusation against the Jews.
- American Standard Version (ASV)
- Wherefore at that time certain Chaldeans came near, and brought accusation against the Jews.
- Bible in Basic English (BBE)
- At that time certain Chaldaeans came near and made a statement against the Jews.
- Darby Translation (DBY)
- Whereupon at that time certain Chaldeans came near, and accused the Jews.
- Webster's Bible (WBS)
- Wherefore at that time certain Chaldeans came near, and accused the Jews.
- Young's Literal Translation (YLT)
- Therefore at that time drawn near have certain Chaldeans, and accused the Jews;
Read in context
- 6ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು.
- 7ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
- 8ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು
- 9ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
- 10ಓ ಅರಸನೇ, ನೀನು ಪ್ರತಿಯೊಬ್ಬ ಮನುಷ್ಯನು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ
Cross references
- Ezra 4:12–16 ಎಜ್ರನು 4:12–16ನಿಮ್ಮಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಯೆರೂಸಲೇಮಿಗೆ ಬಂದು ತಿರಿಗಿ ಬಿದ್ದ ಆ ಕೆಟ್ಟ ಪಟ್ಟಣವನ್ನು ಕಟ್ಟಿಸುತ್ತಾರೆ. ಅವರು ಅದರ ಗೋಡೆಗಳನ್ನು ಎಬ್ಬಿಸಿ ಅಸ್ತಿವಾರಗಳನ್ನು ಹೊಂದಿಸಿದ್ದಾರೆಂದು ಅರಸನಿಗೆ ತಿಳಿದಿರಲಿ. ಈ ಪಟ್ಟಣವು ಕಟ್ಟಿಸಲ್ಪಟ್ಟು ಅದರ ಗೋಡೆಕಟ್ಟಿ ತೀರಿಸ ಲ್ಪಟ್ಟರೆ ಅವರು ಸುಂಕವನ್ನೂ ಕಪ್ಪವನ್ನೂ ತೆರಿಗೆಯನ್ನೂ ಕೊಡದೆ ಇರುವರು. ಆಗ ನೀನು ಅರಸು ಗಳಿಗೆ ಬರುವ ಹುಟ್ಟುವಳಿಗೆ ನಷ್ಟಮಾಡುವಿ ಎಂದು ಅರಸನಿಗೆ ತಿಳಿದಿರಲಿ. ಆದರೆ ನಾವು ಅರಮನೆಯ ಉಪ್ಪನ್ನು ತಿಂದದ್ದರಿಂದ ಅರಸನ ಅವಮಾನವನ್ನು ನೋಡುವದು ನಮಗೆ ತಕ್ಕದ್ದಲ್ಲ; ಆದದರಿಂದ ನಾವು ಅರಸನ ಬಳಿಗೆ ಇದನ್ನು ಕಳುಹಿಸಿ ತಿಳಿಯಮಾಡಿ ದ್ದೇವೆ. ನಿನ್ನ ತಂದೆಗಳ ವೃತಾಂತಗಳ ಪುಸ್ತಕದಲ್ಲಿ ವಿಚಾರಿಸಿದರೆ ಈ ಪಟ್ಟಣವು ತಿರಿಗಿ ಬೀಳುವುದೆಂದೂ ಅರಸುಗಳಿಗೂ ದೇಶಗಳಿಗೂ ನಷ್ಟಮಾಡುವಂಥ ದೆಂದೂ ಪೂರ್ವ ಕಾಲದಲ್ಲಿ ಅದರೊಳಗಿದ್ದವರು ತಿರಿಗಿ ಬಿದ್ದಿದ್ದಾರೆಂದೂ ಅದರ ನಿಮಿತ್ತ ಈ ಪಟ್ಟಣವು ನಾಶವಾಯಿತೆಂದೂ ನೀನು ವೃತಾಂತಗಳ ಪುಸ್ತಕದಲ್ಲಿ ಕಂಡು ತಿಳಿಯುವಿ. ಈ ಪಟ್ಟಣವು ತಿರಿಗಿ ಕಟ್ಟಿಸಲ್ಪಟ್ಟು, ಅದರ ಗೋಡೆ ತೀರಿಸಲ್ಪಟ್ಟರೆ ನದಿಯ ಈಚೆಯಲ್ಲಿ ನಿನಗೆ ಭಾಗವಿರುವದಿಲ್ಲ ಎಂಬದಾಗಿ ನಾವು ಅರಸನಿಗೆ ತಿಳಿಯಮಾಡುತ್ತೇವೆ ಎಂದು ಬರೆದು ಕಳುಹಿಸಿದರು.
- Daniel 6:12–13 ದಾನಿಯೇಲನು 6:12–13ಅನಂತರ ಅವರು ಹತ್ತಿರ ಬಂದು ಅರಸನ ಮುಂದೆ ರಾಜಾಜ್ಞೆಯ ವಿಷಯವಾಗಿ ಮಾತನಾಡಿ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳ ವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡು ವರೋ ಅವರು ಸಿಂಹದ ಗವಿಯಲ್ಲಿ ಹಾಕಲ್ಪಡುವ ರೆಂಬ ನಿರ್ಣಯಕ್ಕೆ ನೀನು ರುಜುಹಾಕಲಿಲ್ಲವೇ ಅಂದರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ--ಮೇದ್ಯ ಯರ ಪಾರಸೀಯರ ಬದಲಾಗದಂತ ನ್ಯಾಯ ಪ್ರಮಾಣದ ಪ್ರಕಾರ ಅದು ಸತ್ಯವೇ ಅಂದನು. ಆಗ ಅವರು ಪ್ರತ್ಯುತ್ತರವಾಗಿ ಅರಸನ ಮುಂದೆ--ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ ನೀನು ರುಜುಹಾಕಿದ ನಿರ್ಣಯವನ್ನಾದರೂ ಲಕ್ಷಿಸದೆ ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ ಅಂದರು.
- Esther 3:8–9 ಎಸ್ತೇರಳು 3:8–9ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ. ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು.
- Acts 17:6–8 ಅಪೊಸ್ತಲರ ಕೃತ್ಯಗಳು 17:6–8ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ; ಯಾಸೋನನು ಅವರನ್ನು ಸೇರಿಸಿ ಕೊಂಡಿದ್ದಾನೆ; ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಕೈಸರನ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು. ಜನರೂ ಪಟ್ಟಣದ ಅಧಿಕಾರಿಗಳೂ ಈ ಮಾತು ಗಳನ್ನು ಕೇಳಿ ಕಳವಳಪಟ್ಟು
- Daniel 2:10 ದಾನಿಯೇಲನು 2:10ಆಗ ಕಸ್ದೀಯರು ಅರಸನಿಗೆ ಉತ್ತರವಾಗಿ--ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕ ದಲ್ಲಿಲ್ಲ; ಆದದರಿಂದ ಯಾವ ಅರಸನಾದರೂ ಯಾವ ಪ್ರಭುವಾದರೂ ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ ಜೋತಿಷ್ಯನಲ್ಲೂ ಕಸ್ದೀಯನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.
- Acts 16:20–22 ಅಪೊಸ್ತಲರ ಕೃತ್ಯಗಳು 16:20–22ಅವರನ್ನು ನ್ಯಾಯಾಧಿಪತಿಗಳ ಬಳಿಗೆ ಕರಕೊಂಡು ಹೋಗಿ--ಯೆಹೂದ್ಯರಾದ ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕಳವಳ ಪಡಿಸುತ್ತಾರೆ. ರೋಮಾಯರಾದ ನಾವು ಒಪ್ಪುವದ ಕ್ಕಾಗಲೀ ಕೈಕೊಳ್ಳುವದಕ್ಕಾಗಲೀ ನ್ಯಾಯವಲ್ಲದ ಆಚಾರ ಗಳನ್ನು ಬೋಧಿಸುತ್ತಾರೆ ಅಂದರು. ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು.
- 1 Peter 4:3–4 1 ಪೇತ್ರನು 4:3–4ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು. ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ.
- Acts 28:22 ಅಪೊಸ್ತಲರ ಕೃತ್ಯಗಳು 28:22ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.
- Esther 3:6 ಎಸ್ತೇರಳು 3:6ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು.