Deuteronomy · chapter 14 · verse 22
Deuteronomy 14:22 in Kannada
ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
Neenu bittuvadarinda holadalli varusha varushakke baruva huttuvaliyinda dashamaanshavannu tappade kodabeku.
Deuteronomy 14:22 in English
- King James Version (KJV)
- Thou shalt truly tithe all the increase of thy seed, that the field bringeth forth year by year.
- World English Bible (WEB)
- You shall surely tithe all the increase of your seed, that which comes out of the field year by year.
- American Standard Version (ASV)
- Thou shalt surely tithe all the increase of thy seed, that which cometh forth from the field year by year.
- Bible in Basic English (BBE)
- Put on one side a tenth of all the increase of your seed, produced year by year.
- Darby Translation (DBY)
- Thou shalt truly tithe all the increase of thy seed, the produce of the field, year by year.
- Webster's Bible (WBS)
- Thou shalt truly tithe all the increase of thy seed, that the field bringeth forth year by year.
- Young's Literal Translation (YLT)
- 'Thou dost certainly tithe all the increase of thy seed which the field is bringing forth year by year;
Read in context
- 20ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
- 21ತಾನೇ ಸತ್ತ ಯಾವದನ್ನಾದರೂ ತಿನ್ನಬಾರದು, ನಿಮ್ಮ ಬಾಗಲುಗಳಲ್ಲಿರುವ ಅನ್ಯನಿಗೆ ಅವನು ತಿನ್ನುವ ಹಾಗೆ ಕೊಡಬೇಕು; ಇಲ್ಲವೆ ಪರದೇಶದವನಿಗೆ ಮಾರಬಹುದು. ಯಾಕಂದರೆ ನೀನು ನಿನ್ನ ದೇವರಾದ ಕರ್ತ ನಿಗೆ ಪರಿಶುದ್ಧ ಜನವೇ. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಕುದಿಸಬಾರದು.
- 22ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
- 23ನೀನು ನಿನ್ನ ದೇವರಾದ ಕರ್ತ ನಿಗೆ ಎಂದೆಂದಿಗೂ ಭಯಪಡುವದನ್ನು ಕಲಿಯುವ ಹಾಗೆ ನಿನ್ನ ಧಾನ್ಯ ದ್ರಾಕ್ಷರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳಲ್ಲಿ ಚೊಚ್ಚಲುಗಳನ್ನೂ ನಿನ್ನ ದೇವರಾದ ಕರ್ತನ ಮುಂದೆ ಆತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳದಲ್ಲಿ ತಿನ್ನಬೇಕು.
- 24ನೀನು ಅವುಗಳನ್ನು ತೆಗೆದುಕೊಂಡು ಹೋಗದ ಹಾಗೆ ನಿನಗೆ ದಾರಿ ದೂರವಾದರೆ ಇಲ್ಲವೆ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಮೇಲೆ
Cross references
- Deuteronomy 12:6 ಧರ್ಮೋಪದೇಶಕಾಂಡ 12:6ಅಲ್ಲಿಗೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಬಲಿಗಳನ್ನೂ ನಿಮ್ಮ ಕೈಗಳು ಎತ್ತುವ ಅರ್ಪಣೆಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಕಾಣಿಕೆಗಳನ್ನೂ ನಿಮ್ಮ ಪಶು ಕುರಿಗಳ ಚೊಚ್ಚಲಾದವುಗಳನ್ನೂ ತರಬೇಕು.
- Nehemiah 10:37 ನೆಹೆಮೀಯ 10:37ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು.
- Deuteronomy 26:12–15 ಧರ್ಮೋಪದೇಶಕಾಂಡ 26:12–15ಹತ್ತನೆಯ ಪಾಲನ್ನು ಕೊಡುವ ವರುಷವಾಗಿರುವ ಮೂರನೆಯ ವರುಷದಲ್ಲಿ ನೀನು ನಿನ್ನ ಎಲ್ಲಾ ಹುಟ್ಟು ವಳಿಯ ಹತ್ತನೇ ಪಾಲನ್ನು ಕೊಟ್ಟು ತೀರಿಸಿದ ಮೇಲೆ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಡಬೇಕು; ಅವನು ನಿನ್ನ ಬಾಗಲುಗಳಲ್ಲಿ ತಿಂದು ತೃಪ್ತಿ ಹೊಂದಲಿ. ಆಗ ನೀನು ನಿನ್ನ ದೇವರಾದ ಕರ್ತನ ಮುಂದೆ--ನಾನು ಪರಿಶುದ್ಧವಾದವುಗಳನ್ನು ನನ್ನ ಮನೆಯೊಳಗಿಂದ ತಕ್ಕೊಂಡು ನೀನು ನನಗೆ ಆಜ್ಞಾಪಿಸಿದ ಎಲ್ಲಾ ಆಜ್ಞೆಗಳ ಹಾಗೆಯೇ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಟ್ಟಿ ದ್ದೇನೆ; ನಿನ್ನ ಆಜ್ಞೆಗಳನ್ನು ವಿಾರಲಿಲ್ಲ, ಮರೆಯಲಿಲ್ಲ. ದುಃಖದಲ್ಲಿರುವಾಗ ಅದರಲ್ಲಿ ತಿನ್ನಲಿಲ್ಲ, ಅದರಲ್ಲಿ ತಕ್ಕೊಂಡು ಅಶುದ್ಧವಾದದ್ದಕ್ಕೂ ಉಪಯೋಗಿಸಲಿಲ್ಲ. ಅದರಲ್ಲಿ ಸತ್ತವರಿಗೋಸ್ಕರ ಏನೂ ಕೊಡಲಿಲ್ಲ; ನನ್ನ ದೇವರಾದ ಕರ್ತನ ಮಾತನ್ನು ಕೇಳಿದ್ದೇನೆ; ನೀನು ನನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದೇನೆ. ಆಕಾಶದೊಳಗಿಂದ, ನಿನ್ನ ಪರಿಶುದ್ಧ ನಿವಾಸದೊ ಳಗಿಂದ ಕಣ್ಣಿಡು; ನಿನ್ನ ಜನರಾದ ಇಸ್ರಾಯೇಲನ್ನೂ ನೀನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ಪ್ರಕಾರ ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ದೇಶವಾಗಿರುವಂಥ ದೇಶವನ್ನೂ ಆಶೀರ್ವದಿಸು ಎಂದು ಹೇಳಬೇಕು.
- Deuteronomy 12:17 ಧರ್ಮೋಪದೇಶಕಾಂಡ 12:17ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳ ಚೊಚ್ಚಲಾದವುಗಳನ್ನೂ ನೀನು ಮಾಡುವ ಎಲ್ಲಾ ಪ್ರಮಾಣಗಳನ್ನೂ ಉಚಿತ ವಾದ ಕಾಣಿಕೆಗಳನ್ನೂ ಕೈ ಎತ್ತುವ ಅರ್ಪಣೆಯನ್ನೂ ನಿನ್ನ ಬಾಗಲುಗಳಲ್ಲಿ ತಿನ್ನಬೇಡ.
- Numbers 18:21 ಅರಣ್ಯಕಾಂಡ 18:21ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ.
- Leviticus 27:30–33 ಯಾಜಕಕಾಂಡ 27:30–33ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು. ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು. ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು. ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.