Deuteronomy · chapter 16 · verse 14
Deuteronomy 16:14 in Kannada
ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.
Aa habbadalli neenoo ninna maganoo magaloo daasanoo daasiyoo ninna baagalugalalliruva leviyanoo anyanoo dikkilladavanoo vidhaveyoo santoshapadabeku.
Deuteronomy 16:14 in English
- King James Version (KJV)
- And thou shalt rejoice in thy feast, thou, and thy son, and thy daughter, and thy manservant, and thy maidservant, and the Levite, the stranger, and the fatherless, and the widow, that [are] within thy gates.
- World English Bible (WEB)
- You shall rejoice in your feast, you, your son, your daughter, your male servant, your female servant, the Levite, the foreigner, the fatherless, and the widow who are within your gates.
- American Standard Version (ASV)
- and thou shalt rejoice in thy feast, thou, and thy son, and thy daughter, and thy man-servant, and thy maid-servant, and the Levite, and the sojourner, and the fatherless, and the widow, that are within thy gates.
- Bible in Basic English (BBE)
- You are to keep the feast with joy, you and your son and your daughter, your man-servant and your woman-servant, and the Levite, and the man from a strange country, and the child without a father, and the widow, who are living among you.
- Darby Translation (DBY)
- And thou shalt rejoice in thy feast, thou, and thy son, and thy daughter, and thy bondman, and thy handmaid, and the Levite, and the stranger, and the fatherless, and the widow, that are in thy gates.
- Webster's Bible (WBS)
- And thou shalt rejoice in thy feast, thou, and thy son, and thy daughter, and thy man-servant, and thy maid-servant, and the Levite, the stranger, and the fatherless, and the widow, that [are] within thy gates:
- Young's Literal Translation (YLT)
- and thou hast rejoiced in thy feast, thou, and thy son, and thy daughter, and thy man-servant, and thy handmaid, and the Levite, and the sojourner, and the fatherless, and the widow, who [are] within thy gates.
Read in context
- 12ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕಮಾಡಿಕೊಂಡು ಈ ನಿಯಮಗಳನ್ನು ಕೈಕೊಂಡು ನಡೆಯಬೇಕು.
- 13ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.
- 14ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.
- 15ನಿನ್ನ ದೇವರಾದ ಕರ್ತನಿಗೆ ಏಳು ದಿವಸ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು; ನಿನ್ನ ದೇವರಾದ ಕರ್ತನು ನಿನ್ನನ್ನು ಎಲ್ಲಾ ಆದಾಯದಲ್ಲಿಯೂ ಎಲ್ಲಾ ಕೈಕೆಲಸದಲ್ಲಿಯೂ ಆಶೀರ್ವದಿಸುವದರಿಂದ ನೀನು ನಿಜವಾಗಿಯೂ ಸಂತೋಷದಿಂದ ಇರಬೇಕು.
- 16ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.
Cross references
- Nehemiah 8:9–12 ನೆಹೆಮೀಯ 8:9–12ಇದಲ್ಲದೆ ತಿರ್ಷತನಾದ ನೆಹೆವಿಾಯನೂ ಶಾಸ್ತ್ರಿ ಯೂ, ಯಾಜಕನೂ ಆದ ಎಜ್ರನೂ ಜನರನ್ನು ಬೋಧಿಸಿದ ಲೇವಿಯರೂ ಜನರೆಲ್ಲರಿಗೆ ಹೇಳಿದ್ದೇ ನಂದರೆ--ಈ ದಿನವು ನಿಮ್ಮ ದೇವರಾಗಿರುವ ಕರ್ತನಿಗೆ ಪರಿಶುದ್ಧವಾದದರಿಂದ ದುಃಖಿಸದೆ, ಅಳದೆ ಇರ್ರಿ. ಯಾಕಂದರೆ ಜನರೆಲ್ಲರು ನ್ಯಾಯಪ್ರಮಾಣದ ಮಾತು ಗಳನ್ನು ಕೇಳಿದಾಗ ಅತ್ತರು. ಇದಲ್ಲದೆ ಅವನು ಅವರಿಗೆ--ನೀವು ಹೋಗಿ ಕೊಬ್ಬಿದ್ದನ್ನು ತಿಂದು ಸಿಹಿ ಯಾದದ್ದನ್ನು ಕುಡಿದು ಯಾರಿಗೆ ಸಿದ್ಧಮಾಡಿದ್ದು ಏನೂ ಇಲ್ಲವೋ ಅವರಿಗೆ ಭಾಗಗಳನ್ನು ಕಳುಹಿಸಿ ಕೊಡಿರಿ. ಯಾಕಂದರೆ ಈ ದಿನವು ನಮ್ಮ ಕರ್ತನಿಗೆ ಪರಿಶುದ್ಧ ವಾಗಿದೆ. ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ ನೀವು ವ್ಯಥೆಪಡಬೇಡಿರಿ. ಹೀಗೆಯೇ ಲೇವಿಯರು--ಈ ದಿನವು ಪರಿಶುದ್ಧವಾದದರಿಂದ ನೀವು ಮೌನವಾಗಿದ್ದು ವ್ಯಥೆಪಡಬೇಡಿರೆಂದು ಹೇಳಿ ಜನರನ್ನು ಸುಮ್ಮನಿರಿಸಿದರು. ಆಗ ಜನರೆಲ್ಲರೂ ಅವರಿಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ ಅವರು ತಿನ್ನಲೂ ಕುಡಿಯಲೂ ಭಾಗಗಳನ್ನು ಕಳುಹಿ ಸಲೂ ಸಂತೋಷಿಸಲೂ ಹೊರಟು ಹೋದರು.
- Deuteronomy 16:11 ಧರ್ಮೋಪದೇಶಕಾಂಡ 16:11ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.
- Deuteronomy 26:11 ಧರ್ಮೋಪದೇಶಕಾಂಡ 26:11ನಿನ್ನ ದೇವರಾದ ಕರ್ತನು ನಿನಗೂ ನಿನ್ನ ಮನೆಗೂ ಕೊಡುವ ಎಲ್ಲಾ ಒಳ್ಳೆ ವಸ್ತುಗಳಲ್ಲಿ ನೀನೂ ಲೇವಿಯರೂ ನಿನ್ನ ಸಂಗಡ ಇರುವ ಪರವಾಸಿಯೂ ಸಂತೋಷಪಡಬೇಕು.
- Isaiah 12:1–6 ಯೆಶಾಯ 12:1–6ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ. ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ. ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ. ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ. ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ. ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Ecclesiastes 9:7 ಪ್ರಸಂಗಿ 9:7ನೀನು ಹೋಗಿ ಸಂತೋಷದಿಂದ ನಿನ್ನ ರೊಟ್ಟಿ ಯನ್ನು ತಿಂದು ಹರ್ಷಹೃದಯದಿಂದ ನಿನ್ನ ದ್ರಾಕ್ಷಾ ರಸವನ್ನು ಕುಡಿ; ದೇವರು ಈಗ ನಿನ್ನ ಕೆಲಸಗಳನ್ನು ಒಪ್ಪಿಕೊಳ್ಳುತ್ತಾನೆ.
- Isaiah 25:6–8 ಯೆಶಾಯ 25:6–8ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು. ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ (ನಾಶ) ತೆಗೆದುಹಾಕುವನು. ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- 1 Thessalonians 5:16 1 ಥೆಸಲೊನೀಕದವರಿಗೆ 5:16ಯಾವಾಗಲೂ ಸಂತೋಷಿಸಿರಿ;
- Isaiah 35:10 ಯೆಶಾಯ 35:10ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
- Isaiah 30:29 ಯೆಶಾಯ 30:29ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಹೇಗೋ ಹಾಗೆ ನಿಮಗೆ ಹಾಡುವಿರಿ; ಕರ್ತನ ಪರ್ವತಕ್ಕೆ ಇಸ್ರಾಯೇಲಿನ ಬಂಡೆಯ ಬಳಿಗೆ ಬರುವದಕ್ಕೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವದು.
- Deuteronomy 12:12 ಧರ್ಮೋಪದೇಶಕಾಂಡ 12:12ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ಸಂತೋಷವಾಗಿರಬೇಕು; ನೀವೂ ನಿಮ್ಮ ಕುಮಾರ ಕುಮಾರ್ತೆಯರೂ ನಿಮ್ಮ ದಾಸದಾಸಿಯರೂ; ನಿಮ್ಮ ಬಾಗಲುಗಳಲ್ಲಿರುವ ಲೇವಿಯನು ಸಹ. ಅವನಿಗೆ ನಿಮ್ಮ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.