Skip to content
ThuthiThuthiThuthi
Deuteronomy · chapter 17 of 34 · 20 verses

Deuteronomy 17 in Kannada

ಧರ್ಮೋಪದೇಶಕಾಂಡ 17

  1. ಊನತೆ ಯಾವದೊಂದು ಅವಲಕ್ಷಣ ಇರುವ ಹೋರಿಯನ್ನಾಗಲಿ ಕುರಿಯ ನ್ನಾಗಲಿ ನಿನ್ನ ದೇವರಾದ ಕರ್ತನಿಗೆ ಅರ್ಪಿಸಬಾರದು; ಅದು ನಿನ್ನ ದೇವರಾದ ಕರ್ತನಿಗೆ ಅಸಹ್ಯವೇ.

    Thou shalt not sacrifice unto the LORD thy God [any] bullock, or sheep, wherein is blemish, [or] any evilfavouredness: for that [is] an abomination unto the LORD thy God.

  2. ನಿನ್ನ ದೇವರಾದ ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ಆತನ ಒಡಂಬಡಿಕೆಯನ್ನು ವಿಾರಿ ಬಿಟ್ಟು

    If there be found among you, within any of thy gates which the LORD thy God giveth thee, man or woman, that hath wrought wickedness in the sight of the LORD thy God, in transgressing his covenant,

  3. ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ಎಲ್ಲಾ ಸೈನ್ಯವನ್ನಾಗಲಿ, ಬೇರೆ ದೇವರುಗಳನ್ನಾಗಲಿ ನನ್ನ ಆಜ್ಞೆಗೆ ವಿರೋಧವಾಗಿ ಸೇವಿಸಿ ಅವುಗಳಿಗೆ ಅಡ್ಡಬಿದ್ದ ಗಂಡಸಾದರೂ ಹೆಂಗಸಾದರೂ ನಿನ್ನ ದೇವ ರಾದ ಕರ್ತನು ನಿನಗೆ ಕೊಡುವ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಬಳಿಯಲ್ಲಿ ಸಿಕ್ಕಿದರೆ

    And hath gone and served other gods, and worshipped them, either the sun, or moon, or any of the host of heaven, which I have not commanded;

  4. ಅದು ನಿನಗೆ ತಿಳಿಯಬಂದದರಿಂದ ನೀನು ಕೇಳಿ ಚೆನ್ನಾಗಿ ವಿಚಾರಿಸಿದ ಮೇಲೆ ಇಗೋ, ಈ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ ಈ ಅಸಹ್ಯ ಕಾರ್ಯವು ಇಸ್ರಾಯೇಲಿನಲ್ಲಿ ನಡೆದದ್ದಾದರೆ

    And it be told thee, and thou hast heard [of it], and enquired diligently, and, behold, [it be] true, [and] the thing certain, [that] such abomination is wrought in Israel:

  5. ನೀನು ಆ ಗಂಡಸನ್ನಾದರೂ ಹೆಂಗಸ ನ್ನಾದರೂ ಆ ಕೆಟ್ಟ ಕಾರ್ಯವನ್ನು ಮಾಡಿದ ಗಂಡಸನ್ನೂ ಮತ್ತು ಹೆಂಗಸನ್ನೂ ನಿನ್ನ ಬಾಗಲುಗಳ ಬಳಿಗೆ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು.

    Then shalt thou bring forth that man or that woman, which have committed that wicked thing, unto thy gates, [even] that man or that woman, and shalt stone them with stones, till they die.

  6. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಆ ಸಾಯತಕ್ಕವನು ಸಾಯಬೇಕು; ಒಬ್ಬನ ಸಾಕ್ಷಿಯ ಮಾತಿನಿಂದ ಅವನು ಸಾಯಬಾರದು.

    At the mouth of two witnesses, or three witnesses, shall he that is worthy of death be put to death; [but] at the mouth of one witness he shall not be put to death.

  7. ಅಪರಾಧಿಯನ್ನು ಕೊಲ್ಲುವದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಹಾಕಬೇಕು; ತರುವಾಯ ಜನರೆಲ್ಲರೂ ಹಾಕಲಿ. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

    The hands of the witnesses shall be first upon him to put him to death, and afterward the hands of all the people. So thou shalt put the evil away from among you.

  8. ನಿನ್ನ ಬಾಗಲುಗಳಲ್ಲಿ ಉಂಟಾದ ವಿವಾದಗಳ ವಿಷ ಯವಾಗಿ ಅಂದರೆ ರಕ್ತರಕ್ತದ ಮಧ್ಯದಲ್ಲಿಯ ವ್ಯಾಜ್ಯ ವಾಗಲಿ, ವಾದಿ ಪ್ರತಿವಾದಿ ವ್ಯಾಜ್ಯವಾಗಲಿ, ಬಡಿದಾ ಟದ ವ್ಯಾಜ್ಯವಾಗಲಿ, ನೀನು ನ್ಯಾಯ ತೀರಿಸ ಕೂಡದ ಕಠಿಣವಾದ ಕಾರ್ಯ ಉಂಟಾದರೆ ನೀನು ಎದ್ದು ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಹೋಗಿ

    If there arise a matter too hard for thee in judgment, between blood and blood, between plea and plea, and between stroke and stroke, [being] matters of controversy within thy gates: then shalt thou arise, and get thee up into the place which the LORD thy God shall choose;

  9. ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು.

    And thou shalt come unto the priests the Levites, and unto the judge that shall be in those days, and enquire; and they shall shew thee the sentence of judgment:

  10. ಅವರು ನಿನಗೆ ಕರ್ತನು ಆದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀನು ಮಾಡಿ ಬೋಧಿಸುವಂಥದ್ದೆಲ್ಲಾ ಅನುಸ ರಿಸಬೇಕು.

    And thou shalt do according to the sentence, which they of that place which the LORD shall choose shall shew thee; and thou shalt observe to do according to all that they inform thee:

  11. ಅವರು ನಿನಗೆ ಬೋಧಿಸುವ ನ್ಯಾಯ ಪ್ರಮಾಣದ ಪ್ರಕಾರವೂ ಅವರು ನಿನಗೆ ಹೇಳುವ ತೀರ್ಪಿನ ಪ್ರಕಾರವೂ ನೀನು ಮಾಡಬೇಕು; ಅವರು ನಿನಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗಬಾರದು.

    According to the sentence of the law which they shall teach thee, and according to the judgment which they shall tell thee, thou shalt do: thou shalt not decline from the sentence which they shall shew thee, [to] the right hand, nor [to] the left.

  12. ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು;

    And the man that will do presumptuously, and will not hearken unto the priest that standeth to minister there before the LORD thy God, or unto the judge, even that man shall die: and thou shalt put away the evil from Israel.

  13. ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ.

    And all the people shall hear, and fear, and do no more presumptuously.

  14. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಪಡಿಸಿ ಕೊಂಡು ಅದರಲ್ಲಿ ವಾಸವಾಗಿರುವಾಗ--ನನ್ನ ಸುತ್ತ ಲಿರುವ ಎಲ್ಲಾ ಜನಾಂಗಗಳ ಹಾಗೆ ನನಗೆ ಅರಸ ನನ್ನು ಇಟ್ಟುಕೊಳ್ಳುತ್ತೇನೆಂದು ಹೇಳಿದರೆ

    When thou art come unto the land which the LORD thy God giveth thee, and shalt possess it, and shalt dwell therein, and shalt say, I will set a king over me, like as all the nations that [are] about me;

  15. ಹೇಗಾ ದರೂ ನಿನ್ನ ದೇವರಾದ ಕರ್ತನು ಆದುಕೊಳ್ಳು ವವನನ್ನು ನಿನಗೆ ಅರಸನನ್ನಾಗಿ ಇಟ್ಟು ಕೊಳ್ಳಬೇಕು; ನಿನ್ನ ಸಹೋದರರಲ್ಲಿಂದ ಒಬ್ಬನನ್ನು ನಿನಗೆ ಅರಸನ ನ್ನಾಗಿ ಇಟ್ಟುಕೊಳ್ಳಬೇಕು; ನಿನ್ನ ಸಹೋದರನಲ್ಲದ ಅನ್ಯನಾದ ಮನುಷ್ಯನನ್ನು ನಿನ್ನ ಮೇಲೆ ಇಟ್ಟು ಕೊಳ್ಳಬಾರದು.

    Thou shalt in any wise set [him] king over thee, whom the LORD thy God shall choose: [one] from among thy brethren shalt thou set king over thee: thou mayest not set a stranger over thee, which [is] not thy brother.

  16. ಆದರೆ ಅವನು ತನಗೆ ಕುದುರೆಗಳನ್ನು ಹೆಚ್ಚಿಸಿ ಕೊಳ್ಳಬಾರದು; ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನಗಳನ್ನು ಐಗುಪ್ತ ದೇಶಕ್ಕೆ ತಿರುಗಿಸಬಾರದು; ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗ ಬಾರದೆಂದು ಕರ್ತನು ನಿಮಗೆ ಹೇಳಿದನಲ್ಲಾ.

    But he shall not multiply horses to himself, nor cause the people to return to Egypt, to the end that he should multiply horses: forasmuch as the LORD hath said unto you, Ye shall henceforth return no more that way.

  17. ಅವನ ಹೃದಯವು ತೊಲಗದ ಹಾಗೆ ಅವನು ತನಗೆ ಅನೇಕ ಪತ್ನಿಯರನ್ನು ಮಾಡಿಕೊಳ್ಳಬಾರದು; ಅವನು ತನಗೆ ಬೆಳ್ಳಿ ಬಂಗಾರವನ್ನು ಬಹಳವಾಗಿ ಹೆಚ್ಚಿಸಿಕೊಳ್ಳಬಾರದು.

    Neither shall he multiply wives to himself, that his heart turn not away: neither shall he greatly multiply to himself silver and gold.

  18. ಅವನು ತನ್ನ ರಾಜ್ಯದ ಸಿಂಹಾಸನದಲ್ಲಿ ಕೂತು ಕೊಳ್ಳುವಾಗ ಲೇವಿಯರಾದ ಯಾಜಕರ ಮುಂದಿರುವ ಪುಸ್ತಕದಿಂದ ತನಗೆ ಈ ನ್ಯಾಯಪ್ರಮಾಣದ ಪ್ರತಿ ಯನ್ನು ಬರೆಯಿಸಿಕೊಳ್ಳಬೇಕು.

    And it shall be, when he sitteth upon the throne of his kingdom, that he shall write him a copy of this law in a book out of [that which is] before the priests the Levites:

  19. ಅದು ಅವನ ಸಂಗಡ ಇರಬೇಕು; ಅವನು ತನ್ನ ದೇವರಾದ ಕರ್ತನಿಗೆ ಭಯಪಟ್ಟು ಈ ನ್ಯಾಯಪ್ರಮಾಣದ ಎಲ್ಲಾ ಮಾತು ಗಳನ್ನೂ ಈ ನಿಯಮಗಳನ್ನೂ ಕಾಪಾಡಿ ಅನುಸರಿಸು ವದಕ್ಕೆ ಕಲಿಯುವ ಹಾಗೆಯೂಅವನ ಹೃದಯವು ಅವನ ಸಹೋದರರ ಮೇಲೆ ಹೆಚ್ಚಿಸಿಕೊಳ್ಳದ ಹಾಗೆಯೂ ಅವನು ಆಜ್ಞೆಯನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗದ ಹಾಗೆಯೂ ಅವನಿಗೂ ಅವನ ಮಕ್ಕಳಿಗೂ ಇಸ್ರಾಯೇಲಿನ ಮಧ್ಯದಲ್ಲಿ ಅವನ ರಾಜ್ಯದಲ್ಲಿ ದಿನಗಳು ಹೆಚ್ಚುವ ಹಾಗೆಯೂ ಅದನ್ನು ತನ್ನ ಜೀವಿತದ ದಿನಗಳಲ್ಲೆಲ್ಲಾ ಓದಬೇಕು.

    And it shall be with him, and he shall read therein all the days of his life: that he may learn to fear the LORD his God, to keep all the words of this law and these statutes, to do them:

  20. ಅವನ ಹೃದಯವು ಅವನ ಸಹೋದರರ ಮೇಲೆ ಹೆಚ್ಚಿಸಿಕೊಳ್ಳದ ಹಾಗೆಯೂ ಅವನು ಆಜ್ಞೆಯನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗದ ಹಾಗೆಯೂ ಅವನಿಗೂ ಅವನ ಮಕ್ಕಳಿಗೂ ಇಸ್ರಾಯೇಲಿನ ಮಧ್ಯದಲ್ಲಿ ಅವನ ರಾಜ್ಯದಲ್ಲಿ ದಿನಗಳು ಹೆಚ್ಚುವ ಹಾಗೆಯೂ ಅದನ್ನು ತನ್ನ ಜೀವಿತದ ದಿನಗಳಲ್ಲೆಲ್ಲಾ ಓದಬೇಕು.

    That his heart be not lifted up above his brethren, and that he turn not aside from the commandment, [to] the right hand, or [to] the left: to the end that he may prolong [his] days in his kingdom, he, and his children, in the midst of Israel.

All chapters of Deuteronomy · Kannada Bible · Deuteronomy 17 in Tamil

Kannada Bible: Kannada Old Version, public domain.

King James Version: public domain.