Deuteronomy · chapter 23 · verse 9
Deuteronomy 23:9 in Kannada
ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಸೈನ್ಯ ದೊಡನೆ ಹೊರಟರೆ ದುಷ್ಟ ಕಾರ್ಯಗಳಿಗೆಲ್ಲಾ ದೂರ ವಾಗಿರುವಂತೆ ನಿನ್ನನ್ನು ಕಾಪಾಡಿಕೋ.
Neenu ninna shatrugalige virodhavaagi sainya dodane horatare dushta kaaryagaligellaa doora vaagiruvante ninnannu kaapaadiko.
Deuteronomy 23:9 in English
- King James Version (KJV)
- When the host goeth forth against thine enemies, then keep thee from every wicked thing.
- World English Bible (WEB)
- When you go out and camp against your enemies, then you shall keep yourselves from every evil thing.
- American Standard Version (ASV)
- When thou goest forth in camp against thine enemies, then thou shalt keep thee from every evil thing.
- Bible in Basic English (BBE)
- When you go out to war and put your tents in position, keep from every evil thing.
- Darby Translation (DBY)
- When thou goest forth into camp against thine enemies, then keep thee from every evil thing.
- Webster's Bible (WBS)
- When the host goeth forth against thy enemies, then keep thee from every wicked thing.
- Young's Literal Translation (YLT)
- 'When a camp goeth out against thine enemies, then thou hast kept from every evil thing.
Read in context
- 7ಎದೋಮ್ಯನನ್ನು ಅಸಹ್ಯಿಸಬೇಡ; ಅವನು ನಿನ್ನ ಸಹೋದರನು; ಐಗುಪ್ತ್ಯನನ್ನು ಅಸಹ್ಯಿಸಬೇಡ; ಅವನ ದೇಶದಲ್ಲಿ ನೀನು ಪರವಾಸಿಯಾಗಿದ್ದಿ.
- 8ಅವರಿಗೆ ಹುಟ್ಟುವ ಮಕ್ಕಳು ಮೂರನೇ ತಲಾಂತರದಲ್ಲಿ ಕರ್ತನ ಸಭೆಯಲ್ಲಿ ಸೇರಬಹುದು.
- 9ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಸೈನ್ಯ ದೊಡನೆ ಹೊರಟರೆ ದುಷ್ಟ ಕಾರ್ಯಗಳಿಗೆಲ್ಲಾ ದೂರ ವಾಗಿರುವಂತೆ ನಿನ್ನನ್ನು ಕಾಪಾಡಿಕೋ.
- 10ರಾತ್ರಿಯಲ್ಲಿ ಸಂಭವಿಸಿದ ಕಾರ್ಯದ ದೆಸೆಯಿಂದ ಶುದ್ಧವಲ್ಲದ ಮನುಷ್ಯನು ನಿಮ್ಮಲ್ಲಿದ್ದರೆ ಅವನು ಪಾಳೆಯದ ಹೊರಗೆ ಹೋಗಬೇಕು; ಪಾಳೆಯದ ಒಳಗೆ ಬರಬಾರದು.
- 11ಸಂಜೆ ಆಗುತ್ತಿರುವಾಗ ಅವನು ನೀರಿನಲ್ಲಿ ತೊಳ ಕೊಳ್ಳಲಿ; ಸೂರ್ಯನು ಮುಣುಗಿದಾಗ ಪಾಳೆಯದ ಒಳಗೆ ತಿರಿಗಿ ಬರಲಿ.
Cross references
- Joshua 6:18 ಯೆಹೋಶುವ 6:18ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.
- Revelation 19:11–14 ಪ್ರಕಟನೆ 19:11–14ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ; ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು; ಆತನ ತಲೆಯ ಮೇಲೆ ಅನೇಕ ಕಿರೀಟಗಳು ಇದ್ದವು. ಬರೆಯಲ್ಪಟ್ಟ ಹೆಸರು ಆತನಿಗೆ ಇತ್ತು. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿದಿರಲಿಲ್ಲ. ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ. ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು.
- 2 Chronicles 20:3–13 2 ಪೂರ್ವಕಾಲವೃತ್ತಾಂತ 20:3–13ಆಗ ಯೆಹೋಷಾಫಾಟನು ಭಯಪಟ್ಟು ಕರ್ತನನ್ನು ಹುಡುಕಲು ನಿರ್ಣಯಿಸಿ ಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸಮಾಡ ಬೇಕೆಂದು ಸಾರಿಸಿದನು. ಆದದರಿಂದ ಯೆಹೂದ ದವರು ಕರ್ತನನ್ನು ಹುಡುಕಲು ಕೂಡಿಕೊಂಡರು. ನಿಶ್ಚಯವಾಗಿ ಸಮಸ್ತ ಯೆಹೂದದ ಪಟ್ಟಣಗಳಿಂದ ಕರ್ತನನ್ನು ಹುಡುಕಲು ಬಂದರು. ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ ಓ ಕರ್ತನೇ, ಪರಲೋಕದಲ್ಲಿರುವ ದೇವರು ನೀನಲ್ಲವೋ? ನೀನು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀಯಲ್ಲವೋ? ಯಾವನೂ ನಿನ್ನನ್ನು ಎದುರಿಸಕೂಡದ ಹಾಗೆ ನಿನ್ನ ಕೈಯಲ್ಲಿ ಶಕ್ತಿಯೂ ಪರಾಕ್ರಮವೂ ಇಲ್ಲವೋ? ನೀನು ನಿನ್ನ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗ ಳನ್ನು ಓಡಿಸಿಬಿಟ್ಟು ಅದನ್ನು ನಿನ್ನ ಸ್ನೇಹಿತನಾದ ಅಬ್ರ ಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀನು ನಮ್ಮ ದೇವರಲ್ಲವೋ? ಅವರು ಅದರಲ್ಲಿ ನಿವಾಸ ಮಾಡಿ ನಿನ್ನ ಹೆಸರಿಗೆ ಪರಿಶುದ್ಧವಾದ ಸ್ಥಾನವನ್ನು ಕಟ್ಟಿಸಿ ನಿನ್ನ ಹೆಸರು ಈ ಆಲಯದಲ್ಲಿರುವದರಿಂದ ಕತ್ತಿಯೂ ನ್ಯಾಯತೀರಿಸುವ ಶಿಕ್ಷೆಯೂ ಜಾಡ್ಯವೂ ಬರವೂ ಏನಾದರೂ ನಮ್ಮ ಮೇಲೆ ಬಂದರೆ ನಾವು ಈ ಆಲಯದ ಮುಂದೆಯೂ ನಿನ್ನ ಸಮ್ಮುಖದಲ್ಲಿಯೂ ನಿಂತು ನಮ್ಮ ಇಕ್ಕಟ್ಟಿನಲ್ಲಿ ನಿನ್ನನ್ನು ಕೂಗುವಾಗ ನೀನು ಕೇಳಿ ರಕ್ಷಿಸುವವನಾಗಿದ್ದೀ ಎಂದು ಹೇಳಿದರು. ಈಗ ಇಗೋ, ಅಮ್ಮೋನ್ ಮೋವಾಬ್, ಸೇಯಾರ್ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು. ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ. ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು. ಹೀಗೆಯೇ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಕರ್ತನ ಮುಂದೆ ನಿಂತರು.
- Judges 20:26 ನ್ಯಾಯಸ್ಥಾಪಕರು 20:26ಆಗ ಇಸ್ರಾಯೇಲ್ ಮಕ್ಕಳೆಲ್ಲರೂ ಸಮಸ್ತ ಜನರೂ ಹೊರಟು ದೇವರ ಮನೆಗೆ ಬಂದು ಅತ್ತು ಅಲ್ಲಿ ಕರ್ತನ ಮುಂದೆ ಕುಳಿತುಕೊಂಡು ಆ ಸಾಯಂಕಾಲದ ವರೆಗೆ ಉಪವಾಸವಾಗಿದ್ದು ಕರ್ತ ನಿಗೆ ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಕರ್ತನ ಮುಂದೆ ಅರ್ಪಿಸಿದರು. ಯಾಕಂದರೆ ಆ ದಿವಸಗಳಲ್ಲಿ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ
- 2 Chronicles 19:4 2 ಪೂರ್ವಕಾಲವೃತ್ತಾಂತ 19:4ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸ ವಾಗಿದ್ದನು. ಅವನು ತಿರಿಗಿ ಹೊರಟು ಬೇರ್ಷೆಬ ಮೊದಲುಗೊಂಡು ಎಫ್ರಾಯಾಮಿನ ಬೆಟ್ಟದ ಮಟ್ಟಿಗೂ ಜನರಲ್ಲಿ ಸಂಚರಿಸಿ ತಮ್ಮ ಪಿತೃಗಳ ದೇವ ರಾದ ಕರ್ತನ ಕಡೆಗೆ ಅವರನ್ನು ತಿರುಗಿಸಿ
- Joshua 7:11–13 ಯೆಹೋಶುವ 7:11–13ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ. ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್ ಕರ್ತನಾದ ದೇವರು ಹೇಳುತ್ತಾನೆ.
- 2 Chronicles 31:20–22 2 ಪೂರ್ವಕಾಲವೃತ್ತಾಂತ 31:20–22ಹೀಗೆಯೇ ಹಿಜ್ಕೀಯನು ಸಮಸ್ತ ಯೆಹೂದದಲ್ಲಿ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಉತ್ತಮವಾದ ದ್ದನ್ನೂ ಸರಿಯಾದದ್ದನ್ನೂ ಸತ್ಯವಾದದ್ದನ್ನೂ ನಡಿಸಿ ದನು.ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು. ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು.