Deuteronomy · chapter 29 · verse 4
Deuteronomy 29:4 in Kannada
ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
Aadaagyoo kartanu nimage indina varegoo tilukolluva hrudaya vannoo noduva kannugalannoo keluva kivigalannoo kodalilla.
Deuteronomy 29:4 in English
- King James Version (KJV)
- Yet the LORD hath not given you an heart to perceive, and eyes to see, and ears to hear, unto this day.
- World English Bible (WEB)
- But the LORD has not given you a heart to know, eyes to see, and ears to hear, to this day.
- American Standard Version (ASV)
- but Jehovah hath not given you a heart to know, and eyes to see, and ears to hear, unto this day.
- Bible in Basic English (BBE)
- But even to this day the Lord has not given you a mind open to knowledge, or seeing eyes or hearing ears.
- Darby Translation (DBY)
- But Jehovah hath not given you a heart to perceive, and eyes to see, and ears to hear, to this day.
- Webster's Bible (WBS)
- Yet the LORD hath not given you a heart to perceive, and eyes to see, and ears to hear, to this day.
- Young's Literal Translation (YLT)
- and Jehovah hath not given to you a heart to know, and eyes to see, and ears to hear, till this day,
Read in context
- 2ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ನಿಮ್ಮ ಕಣ್ಣುಗಳ ಮುಂದೆ ಫರೋಹನಿಗೂ ಅವನ ಎಲ್ಲಾ ಸೇವಕ ರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
- 3ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ?
- 4ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
- 5ನಾನು ನಾಲ್ವತ್ತು ವರುಷ ನಿಮ್ಮನ್ನು ಅರಣ್ಯದಲ್ಲಿ ನಡಿಸಿದೆನು; ನಿಮ್ಮ ಮೇಲಿರುವ ವಸ್ತ್ರ ಗಳು ಹಳೇವಾಗಲಿಲ್ಲ; ನಿಮ್ಮ ಪಾದಗಳಲ್ಲಿರುವ ಕೆರಗಳು ಹಳೇವಾಗಲಿಲ್ಲ.
- 6ನಾನೇ ನಿಮ್ಮ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವ ಹಾಗೆ ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸ ಇಲ್ಲವೆ ಮದ್ಯಗಳನ್ನು ಕುಡಿಯಲಿಲ್ಲ.
Cross references
- Ephesians 4:18 ಎಫೆಸದವರಿಗೆ 4:18ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕುರುಡುತನದ ನಿಮಿತ್ತದಿಂದಲೂ ತಮ್ಮಲ್ಲಿರುವ ಆಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.
- Isaiah 6:9–10 ಯೆಶಾಯ 6:9–10ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು. ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗ ದಂತೆಯೂ ಈ ಜನರ ಹೃದಯವನ್ನು ಕೊಬ್ಬಿಸಿ ಕಿವಿ ಯನ್ನು ಮಂದಗೊಳಿಸಿ ಅವರ ಕಣ್ಣುಗಳನ್ನು ಮುಚ್ಚು ಎಂದು ನನಗೆ ಹೇಳಿದನು.
- John 8:43 ಯೋಹಾನನು 8:43ನೀವು ನನ್ನ ಮಾತನ್ನು ಯಾಕೆ ಗ್ರಹಿ ಸದೆ ಇದ್ದೀರಿ? ನೀವು ನನ್ನ ವಾಕ್ಯವನ್ನು ಕೇಳದೆ ಇರುವದರಿಂದಲೇ.
- Proverbs 20:12 ಜ್ಞಾನೋಕ್ತಿಗಳು 20:12ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.
- Isaiah 63:17 ಯೆಶಾಯ 63:17ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು.
- Matthew 13:11–15 ಮತ್ತಾಯನು 13:11–15ಆತನು ಪ್ರತ್ಯುತ್ತರವಾಗಿ ಅವ ರಿಗೆ--ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ. ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಮತ್ತು ಅವನಿಗೆ ಹೆಚ್ಚು ಸಮೃದ್ಧಿಯಾಗುವದು; ಆದರೆ ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು. ಆದದರಿಂದ ನಾನು ಅವರಿಗೆ ಸಾಮ್ಯಗಳಲ್ಲಿ ಮಾತ ನಾಡುತ್ತೇನೆ; ಯಾಕಂದರೆ ಅವರು ನೋಡಿದರೂ ಕಾಣುವದಿಲ್ಲ ಮತ್ತು ಕೇಳಿದರೂ ತಿಳುಕೊಳ್ಳುವದಿಲ್ಲ; ಇಲ್ಲವೆ ಅವರು ಗ್ರಹಿಸುವದು ಇಲ್ಲ ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನಂದರೆ -- ನೀವು ಕೇಳುತ್ತೀರಿ, ಕೇಳಿದರೂ ತಿಳು ಕೊಳ್ಳುವದೇ ಇಲ್ಲ; ಮತ್ತು ನೋಡುತ್ತೀರಿ, ನೋಡಿ ದರೂ ಗ್ರಹಿಸುವದೇ ಇಲ್ಲ. ಯಾಕಂದರೆ ಇವರು ತಮ್ಮ ಕಣ್ಣುಗಳಿಂದ ನೋಡಿ ತಮ್ಮ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದ ಹಾಗೆಯೂ ನಾನು ಇವರನ್ನು ಸ್ವಸ್ಥಮಾಡದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಮತ್ತು ಇವರ ಕಿವಿಗಳು ಕೇಳದ ಹಾಗೆ ಮಂದವಾದವು; ಇದಲ್ಲದೆ ಇವರು ತಮ್ಮ ಕಣ್ಣುಗ
- Ezekiel 36:26 ಯೆಹೆಜ್ಕೇಲನು 36:26ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
- Romans 11:7–10 ರೋಮಾಪುರದವರಿಗೆ 11:7–10ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು ಅದನ್ನು ಹೊಂದಿಕೊಂಡರು. (ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ.
- 2 Corinthians 3:15 2 ಕೊರಿಂಥದವರಿಗೆ 3:15ಆದರೆ ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ.
- John 12:38–40 ಯೋಹಾನನು 12:38–40ಇದರಿಂದ--ಕರ್ತನೇ, ನಮ್ಮ ವರ್ತ ಮಾನವನ್ನು ಯಾರು ನಂಬಿದ್ದಾರೆ? ಕರ್ತನ ಬಾಹುವು ಯಾರಿಗೆ ಪ್ರಕಟವಾಯಿತು ಎಂದು ಪ್ರವಾದಿಯಾದ ಯೆಶಾಯನು ನುಡಿದದ್ದು ನೆರವೇರುವ ಹಾಗೆ ಇದಾಯಿತು. ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ-- ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡು ಮಾಡಿ ಅವರ ಹೃದಯವನ್ನು ಕಠಿಣ ಮಾಡಿದನು ಎಂಬದು.
- 2 Thessalonians 2:10–12 2 ಥೆಸಲೊನೀಕದವರಿಗೆ 2:10–12ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- James 1:13–17 ಯಾಕೋಬನು 1:13–17ಯಾವನಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ--ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಯಾಕಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರನು; ಆತನು ಯಾರನ್ನೂ ಶೋಧಿಸುವದೂ ಇಲ್ಲ. ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ; ಪಾಪವು ಸಂಪೂರ್ಣವಾದ ಮೇಲೆ ಮರಣ ವನ್ನು ಹಡೆಯುತ್ತದೆ. ನನ್ನ ಪ್ರಿಯ ಸಹೋದರರೇ, ತಪ್ಪು ಮಾಡಬೇಡಿರಿ. ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.