Deuteronomy · chapter 31 · verse 11
Deuteronomy 31:11 in Kannada
ನಿನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ, ಆತನು ಆದು ಕೊಳ್ಳುವ ಸ್ಥಳದಲ್ಲಿ ಇಸ್ರಾಯೇಲಿನವರೆಲ್ಲರು ಕಾಣಿಸಿ ಕೊಳ್ಳುವದಕ್ಕೆ ಬಂದಾಗ ನೀನು ಈ ನ್ಯಾಯಪ್ರಮಾಣ ವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಅವರು ಕೇಳುವಹಾಗೆ ಓದಬೇಕು.
Ninna devaraada kartana sannidhiyalli, aatanu aadu kolluva sthaladalli israayelinavarellaru kaanisi kolluvadakke bandaaga neenu ee nyaayapramaana vannu israayelinavarellara munde avaru keluvahaage odabeku.
Deuteronomy 31:11 in English
- King James Version (KJV)
- When all Israel is come to appear before the LORD thy God in the place which he shall choose, thou shalt read this law before all Israel in their hearing.
- World English Bible (WEB)
- when all Israel has come to appear before the LORD your God in the place which he will choose, you shall read this law before all Israel in their hearing.
- American Standard Version (ASV)
- when all Israel is come to appear before Jehovah thy God in the place which he shall choose, thou shalt read this law before all Israel in their hearing.
- Bible in Basic English (BBE)
- When all Israel has come before the Lord your God in the place named by him, let a reading be given of this law in the hearing of all Israel.
- Darby Translation (DBY)
- when all Israel cometh to appear before Jehovah thy God in the place which he will choose, thou shalt read this law before all Israel in their ears.
- Webster's Bible (WBS)
- When all Israel is come to appear before the LORD thy God in the place which he shall choose, thou shalt read this law before all Israel in their hearing.
- Young's Literal Translation (YLT)
- in the coming in of all Israel to see the face of Jehovah in the place which He chooseth, thou dost proclaim this law before all Israel, in their ears.
Read in context
- 9ಇದಲ್ಲದೆ ಮೋಶೆಯು ಈ ನ್ಯಾಯಪ್ರಮಾಣವನ್ನು ಬರೆದು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಕುಮಾರರಾದ ಯಾಜಕರಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.
- 10ಮೋಶೆಯು ಅವರಿಗೆ--ಪ್ರತಿ ಏಳು ವರುಷಗಳ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರುಷದಲ್ಲಿ, ಅಂದರೆ ಗುಡಾರಗಳ ಹಬ್ಬದಲ್ಲಿ
- 11ನಿನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ, ಆತನು ಆದು ಕೊಳ್ಳುವ ಸ್ಥಳದಲ್ಲಿ ಇಸ್ರಾಯೇಲಿನವರೆಲ್ಲರು ಕಾಣಿಸಿ ಕೊಳ್ಳುವದಕ್ಕೆ ಬಂದಾಗ ನೀನು ಈ ನ್ಯಾಯಪ್ರಮಾಣ ವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಅವರು ಕೇಳುವಹಾಗೆ ಓದಬೇಕು.
- 12ಜನರನ್ನೂ ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಗಳನ್ನೂ ಅವರು ಕೇಳಿ ಕಲಿತು ನಿಮ್ಮ ದೇವರಾದ ಕರ್ತನಿಗೆ ಭಯಪಟ್ಟು ಈ ನ್ಯಾಯಪ್ರಮಾಣದ ವಾಕ್ಯಗಳನ್ನೆಲ್ಲಾ ಕಾಪಾಡಿ ಮಾಡುವ ಹಾಗೆ ಕೂಡಿಸು.
- 13ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವ ದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ನೀವು ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಕರ್ತನಿಗೆ ಭಯಪಡುವದಕ್ಕೆ ಕಲಿತುಕೊಳ್ಳಲಿ ಎಂದು ಆಜ್ಞಾಪಿಸಿ ಹೇಳಬೇಕು.
Cross references
- 2 Kings 23:2 2 ಅರಸುಗಳು 23:2ಆಗ ಅರಸನೂ ಅವನ ಸಂಗಡ ಯೆಹೂದದ ಜನರೆಲ್ಲರೂ ಯೆರೂ ಸಲೇಮಿನ ನಿವಾಸಿಗಳೆಲ್ಲರೂ ಯಾಜಕರೂ ಪ್ರವಾದಿ ಗಳೂ ಹಿರಿಕಿರಿಯರಾದ ಎಲ್ಲಾ ಜನರೂ ಕರ್ತನ ಆಲಯಕ್ಕೆ ಹೋದರು. ಅವರು ಕೇಳುವ ಹಾಗೆ ಕರ್ತನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಪುಸ್ತಕದ ಮಾತುಗಳನೆಲ್ಲಾ ಅವನು ಓದಿದನು.
- Joshua 8:34–35 ಯೆಹೋಶುವ 8:34–35ತರುವಾಯ ಅವನು ನ್ಯಾಯಪ್ರಮಾಣದ ಎಲ್ಲಾ ಮಾತುಗಳನ್ನು ಅಂದರೆ ಆಶೀರ್ವಾದಗಳನ್ನೂ ಶಾಪಗಳನ್ನೂ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆದಿರುವ ಪ್ರಕಾರ ಓದಿದನು.ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಇಸ್ರಾಯೇಲಿನ ಸಭೆಗೆಲ್ಲಾ ಅಂದರೆ ಸ್ತ್ರೀಯ ರಿಗೂ ಚಿಕ್ಕವರಿಗೂ ಅವರಲ್ಲಿ ಪರಿಚಯವಿರುವ ಅವರ ಪರಕೀಯರಿಗೂ ಓದಿದನು. ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಇಸ್ರಾಯೇಲಿನ ಸಭೆಗೆಲ್ಲಾ ಅಂದರೆ ಸ್ತ್ರೀಯ ರಿಗೂ ಚಿಕ್ಕವರಿಗೂ ಅವರಲ್ಲಿ ಪರಿಚಯವಿರುವ ಅವರ ಪರಕೀಯರಿಗೂ ಓದಿದನು.
- Deuteronomy 16:16–17 ಧರ್ಮೋಪದೇಶಕಾಂಡ 16:16–17ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಆಶೀರ್ವಾದದ ಪ್ರಕಾರ ಒಬ್ಬೊಬ್ಬನು ತನ್ನ ಕೈಯಿಂದ ಆಗುವಷ್ಟು ಕೊಡಬೇಕು.
- Exodus 34:24 ವಿಮೋಚನಕಾಂಡ 34:24ನಾನು ಜನಾಂಗಗಳನ್ನು ನಿಮ್ಮ ಎದುರಿನಿಂದ ಹೊರ ಡಿಸಿಬಿಟ್ಟು ನಿಮ್ಮ ಮೇರೆಗಳನ್ನು ವಿಸ್ತಾರಮಾಡುವೆನು. ವರುಷಕ್ಕೆ ಮೂರು ಸಾರಿ ನೀವು ನಿಮ್ಮ ದೇವರಾದ ಕರ್ತನ ಸನ್ನಿಧಿಗೆ ಹೋಗುವ ಸಮಯದಲ್ಲಿ ಯಾರೂ ನಿಮ್ಮ ದೇಶವನ್ನು ಆಶಿಸರು.
- Deuteronomy 12:5 ಧರ್ಮೋಪದೇಶಕಾಂಡ 12:5ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.
- Nehemiah 8:1–8 ನೆಹೆಮೀಯ 8:1–8ಜನರೆಲ್ಲರು ಏಕವಾಗಿ ನೀರು ಬಾಗಲಿಗೆ ಎದುರಾಗಿರುವ ಬೀದಿಯಲ್ಲಿ ಕೊಡಿ ಕೊಂಡು ಕರ್ತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ ಮೋಶೆಯ ನ್ಯಾಯ ಪ್ರಮಾಣದ ಪುಸ್ತಕವನ್ನು ತಕ್ಕೊಂಡು ಬರಲು ಶಾಸ್ತ್ರಿಯಾದ ಎಜ್ರನಿಗೆ ಹೇಳಿದರು. ಹೀಗೆಯೇ ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ಸಭೆಯ ಸ್ತ್ರೀ ಪುರುಷರ ಮುಂದೆಯೂ ಗ್ರಹಿಕೆಯಿಂದ ಕೇಳುವವರೆಲ್ಲರ ಮುಂದೆಯೂ ಎಜ್ರನು ನ್ಯಾಯ ಪ್ರಮಾಣವನ್ನು ತಕ್ಕೊಂಡು ಬಂದು ನೀರಿನ ಬಾಗಲ ಮುಂಭಾಗದಲ್ಲಿರುವ ಬೀದಿಯಲ್ಲಿ ಸ್ತ್ರೀ ಪುರುಷರ ಮುಂದೆಯೂ ಗ್ರಹಿಕೆಯುಳ್ಳ ಎಲ್ಲರ ಮುಂದೆಯೂ ಬೆಳಗಿನಿಂದ ಮಧ್ಯಾಹ್ನದ ವರೆಗೆ ಓದಿದನು. ಜನರೆ ಲ್ಲರೂ ನ್ಯಾಯಪ್ರಮಾಣಕ್ಕೆ ಕಿವಿಗೊಟ್ಟರು. ಆಗ ಶಾಸ್ತ್ರಿಯಾದ ಎಜ್ರನು ಅದಕ್ಕೋಸ್ಕರ ಮಾಡ ಲ್ಪಟ್ಟ ಒಂದು ಮರದ ಪೀಠದ ಮೇಲೆ ನಿಂತನು. ಅವನ ಬಳಿಯಲ್ಲಿ ಅವನಿಗೆ ಬಲಗಡೆಯಲ್ಲಿ ಮತ್ತಿತ್ಯನೂ ಶೇಮವನೂ ಅನಾಯನೂ ಊರೀಯನೂ ಹಿಲ್ಕೀ ಯನೂ ಮಾಸೇಯನೂ ಅವನಿಗೆ ಎಡಗಡೆಯಲ್ಲಿ ಪೆದಾಯನೂ ವಿಾಷಾಯೇಲನೂ ಮಲ್ಕೀಯನೂ ಹಾಷುಮನೂ ಹಷ್ಬದ್ದಾನನೂ ಜೆಕರ್ಯನೂ ಮೆಷು ಲ್ಲಾಮನೂ ನಿಂತಿದ್ದರು. ಎಜ್ರನು ಸಕಲ ಜನರ ಕಣ್ಣುಗಳ ಮುಂದೆ ಪುಸ್ತಕವನ್ನು ತೆರೆದನು; (ಯಾಕಂದರೆ ಸಕಲ ಜನರಿಗಿಂತ ಎತ್ತರವಾದ ಸ್ಥಳದಲ್ಲಿ ಇದ್ದನು;) ಅವನು ಅದನ್ನು ತೆರೆದಾಗ ಜನರೆಲ್ಲರೂ ಎದ್ದು ನಿಂತರು. ಆಗ ಎಜ್ರನು ಮಹಾ ದೇವಾರಾಗಿರುವ ಕರ್ತನನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಪ್ರತ್ಯುತ್ತರವಾಗಿ--ಆಮೆನ್, ಆಮೆನ್ ಎಂದು ಹೇಳಿ ನೆಲದ ವರೆಗೂ ತಮ್ಮ ತಲೆಗಳನ್ನು ಬೊಗ್ಗಿಸಿ ಕರ್ತ ನನ್ನು ಆರಾಧಿಸಿದರು ಇದಲ್ಲದೆ ಯೇಷೂವನೂ ಬಾನೀಯೂ ಶೇರೇಬ್ಯನೂ ಯಾವಿಾನನೂ ಅಕ್ಕೂ ಬನೂ ಶಬ್ಬೆತೈನೂ ಹೋದೀಯನೂ ಮಾಸೇಯನೂ ಕೆಲೀಟನೂ ಅಜರ್ಯನೂ ಯೋಜಾಬಾದನೂ ಹಾನಾನನೂ ಪೆಲಾಯನೂ ಲೇವಿಯರೂ ಜನರಿಗೆ ನ್ಯಾಯಪ್ರಮಾಣವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು. ಹೀಗೆಯೇ ಅವರು ದೇವರ ನ್ಯಾಯಪ್ರಮಾಣದ ಪುಸ್ತಕವನ್ನು ಸ್ಪಷ್ಟವಾಗಿ ಓದಿ ಅದರ ಅರ್ಥವನ್ನು ಹೇಳಿ ಓದಿದ್ದನ್ನು ಜನರಿಗೆ ತಿಳಿಯುವಂತೆ ಮಾಡಿದರು.
- Exodus 23:16–17 ವಿಮೋಚನಕಾಂಡ 23:16–17ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು. ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
- Nehemiah 8:13 ನೆಹೆಮೀಯ 8:13ಎರಡನೇ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿ ರುವ ಮುಖ್ಯರಾದವರೂ ಯಾಜಕರೂ ಲೇವಿಯರೂ ನ್ಯಾಯಪ್ರಮಾಣದ ಮಾತುಗಳನ್ನು ತಿಳುಕೊಳ್ಳುವ ಹಾಗೆ ಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.
- Luke 4:16–17 ಲೂಕನು 4:16–17ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರ ದೊಳಕ್ಕೆ ಹೋಗಿ ಓದುವದಕ್ಕಾಗಿ ಎದ್ದುನಿಂತನು. ಆಗ ಪ್ರವಾದಿಯಾದ ಯೆಶಾಯನ ಪುಸ್ತಕವು ಆತನಿಗೆ ಕೊಡಲ್ಪಟ್ಟಿತು. ಆತನು ಆ ಪುಸ್ತಕವನ್ನು ತೆರೆದು--
- Nehemiah 9:3 ನೆಹೆಮೀಯ 9:3ಅವರು ತಮ್ಮ ಸ್ಥಳಗಳಲ್ಲಿ ನಿಂತು ಒಂದು ಜಾವ ತಮ್ಮ ದೇವರಾಗಿರುವ ಕರ್ತನ ನ್ಯಾಯ ಪ್ರಮಾಣದ ಪುಸ್ತಕವನ್ನು ಓದಿ ಮತ್ತೊಂದು ಜಾವ ತಮ್ಮ ಪಾಪಗಳನ್ನು ಅರಿಕೆಮಾಡಿ ತಮ್ಮ ದೇವರಾಗಿ ರುವ ಕರ್ತನನ್ನು ಆರಾಧಿಸಿದರು.
- Acts 15:21 ಅಪೊಸ್ತಲರ ಕೃತ್ಯಗಳು 15:21ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
- Psalm 84:7 ಕೀರ್ತನೆಗಳು 84:7ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.