Deuteronomy · chapter 7 · verse 12
Deuteronomy 7:12 in Kannada
ನೀವು ಈ ನ್ಯಾಯಗಳನ್ನು ಕೇಳಿ ಕಾಪಾಡಿ ನಡೆದು ಕೊಂಡರೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗ ಳಿಗೆ ಪ್ರಮಾಣಮಾಡಿದ ಒಡಂಬಡಿಕೆಯನ್ನೂ ಕರುಣೆ ಯನ್ನೂ ನಿನಗೋಸ್ಕರ ನೆರವೇರಿಸುವನು.
Neevu ee nyaayagalannu keli kaapaadi nadedu kondare ninna devaraada kartanu ninna pitruga lige pramaanamaadida odambadikeyannoo karune yannoo ninagoskara neraverisuvanu.
Deuteronomy 7:12 in English
- King James Version (KJV)
- Wherefore it shall come to pass, if ye hearken to these judgments, and keep, and do them, that the LORD thy God shall keep unto thee the covenant and the mercy which he sware unto thy fathers:
- World English Bible (WEB)
- It shall happen, because you listen to these ordinances and keep and do them, that the LORD your God will keep with you the covenant and the loving kindness which he swore to your fathers.
- American Standard Version (ASV)
- And it shall come to pass, because ye hearken to these ordinances, and keep and do them, that Jehovah thy God will keep with thee the covenant and the lovingkindness which he sware unto thy fathers:
- Bible in Basic English (BBE)
- And it will be, that if you give attention to these decisions and keep and do them, then the Lord will keep his agreement with you and his mercy, as he said in his oath to your fathers.
- Darby Translation (DBY)
- And it shall come to pass, if ye hearken to these ordinances, and keep and do them, that Jehovah thy God will keep with thee the covenant and the mercy which he swore unto thy fathers;
- Webster's Bible (WBS)
- Wherefore it shall come to pass, if ye hearken to these judgments, and keep, and do them, that the LORD thy God will keep to thee the covenant and the mercy which he swore to thy fathers:
- Young's Literal Translation (YLT)
- 'And it hath been, because ye hear these judgments, and have kept, and done them, that Jehovah thy God hath kept to thee the covenant and the kindness which He hath sworn to thy fathers,
Read in context
- 10ತನ್ನನ್ನು ಹಗೆ ಮಾಡುವವರಿಗೆ ಮುಖಾಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸಿ ಅವರನ್ನು ನಾಶಮಾಡುತ್ತಾನೆ; ಆತನು ತನ್ನನ್ನು ಹಗೆಮಾಡುವವರಿಗೆ ತಡಮಾಡದೆ ಮುಖಾ ಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ ಎಂದು ತಿಳಿದುಕೋ.
- 11ಹೀಗಿರುವದರಿಂದ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆಜ್ಞೆ ನಿಯಮ ನ್ಯಾಯಗಳನ್ನು ಕೈಕೊಳ್ಳಬೇಕು.
- 12ನೀವು ಈ ನ್ಯಾಯಗಳನ್ನು ಕೇಳಿ ಕಾಪಾಡಿ ನಡೆದು ಕೊಂಡರೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗ ಳಿಗೆ ಪ್ರಮಾಣಮಾಡಿದ ಒಡಂಬಡಿಕೆಯನ್ನೂ ಕರುಣೆ ಯನ್ನೂ ನಿನಗೋಸ್ಕರ ನೆರವೇರಿಸುವನು.
- 13ಆತನು ನಿನ್ನನ್ನು ಪ್ರೀತಿಮಾಡಿ ಆಶೀರ್ವದಿಸಿ ಹೆಚ್ಚಿಸುವನು; ನಿನಗೆ ಕೊಡುತ್ತೇನೆಂದು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನ ಗರ್ಭದ ಫಲ ವನ್ನೂ ಭೂಮಿಯ ಹುಟ್ಟುವಳಿಯನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಪಶುಗಳನ್ನೂ ನಿನ್ನ ಕುರಿಮಂದೆಗಳನ್ನೂ ಆಶೀರ್ವದಿಸುವನು.
- 14ಎಲ್ಲಾ ಜನಗಳಿಗಿಂತಲೂ ನೀನು ಆಶೀರ್ವದಿಸಲ್ಪಟ್ಟವನಾ ಗಿರುವಿ; ನಿಮ್ಮೊಳಗೆ ಸ್ತ್ರೀಯರಲ್ಲಾಗಲಿ ಪುರುಷರ ಲ್ಲಾಗಲಿ ಪಶುಗಳಲ್ಲಾಗಲಿ ಬಂಜೆತನವು ಇರುವದಿಲ್ಲ.
Cross references
- Deuteronomy 7:9 ಧರ್ಮೋಪದೇಶಕಾಂಡ 7:9ಹೀಗಿರುವದರಿಂದ ನಿನ್ನ ದೇವರಾದ ಕರ್ತನು ಆತನೇ ದೇವರು; ಆತನೇ ನಂಬಿಗಸ್ತನಾದ ದೇವರು; ಆತನು ತನ್ನನ್ನು ಪ್ರೀತಿಮಾಡಿ ತನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಒಡಂಬಡಿಕೆಯನ್ನೂ ಕರುಣೆಯನ್ನೂ ಸಾವಿರ ತಲೆಗಳ ವರೆಗೂ ಕಾಪಾಡಿ
- Deuteronomy 28:1–14 ಧರ್ಮೋಪದೇಶಕಾಂಡ 28:1–14ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು. ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳಿದರೆ ಈ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ. ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು. ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು. ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು. ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು; ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು. ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ. ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ. ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು.
- Leviticus 26:3–13 ಯಾಜಕಕಾಂಡ 26:3–13ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳಂತೆ ಮಾಡಿದರೆ ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು. ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ. ನಾನು ದೇಶದಲ್ಲಿ ಸಮಾಧಾನವನ್ನು ಕೊಡುವೆನು. ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ; ದೇಶದಲ್ಲಿ ದುಷ್ಟ ಮೃಗಗಳು ಇಲ್ಲದಂತೆ ಮಾಡುವೆನು. ಇಲ್ಲವೆ ಕತ್ತಿ ನಿಮ್ಮ ದೇಶದಲ್ಲಿ ಹಾದುಹೋಗುವದಿಲ್ಲ. ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು. ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ನಿಮ್ಮ ಮುಂದೆ ಕತ್ತಿಯಿಂದ ಬೀಳುವರು. ನಾನು ನಿಮ್ಮನ್ನು ಲಕ್ಷಿಸಿ ಅಭಿವೃದ್ಧಿಮಾಡಿ ಹೆಚ್ಚಿಸಿ ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ. ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು. ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ. ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ.
- Psalm 105:8–10 ಕೀರ್ತನೆಗಳು 105:8–10ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ. ಅದನ್ನು ಯಾಕೋಬನಿಗೆ ದೃಢ ಮಾಡಿದನು ಮತ್ತು ಇಸ್ರಾಯೇಲಗೆ ನಿತ್ಯ ಒಡಂಬಡಿಕೆ ಯಾಗಿ ಸ್ಥಾಪಿಸಿ ಹೇಳಿದ್ದೇನಂದರೆ--
- Luke 1:72–73 ಲೂಕನು 1:72–73ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆ
- Micah 7:20 ಮೀಕ 7:20ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Luke 1:55 ಲೂಕನು 1:55ಇದಲ್ಲದೆ ನಮ್ಮ ಪಿತೃಗಳಿಗೂ ಅಬ್ರ ಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೆ ಆತನು ಹೇಳಿದಂತೆ ಮಾಡಿದ್ದಾನೆ ಅಂದಳು.