Skip to content
ThuthiThuthiThuthi
Ecclesiastes · chapter 11 of 12 · 10 verses

Ecclesiastes 11 in Kannada

ಪ್ರಸಂಗಿ 11

  1. ನಿನ್ನ ರೊಟ್ಟಿಯನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು.

    Cast thy bread upon the waters: for thou shalt find it after many days.

  2. ನಿನ್ನ ಭಾಗವನ್ನು ಏಳು ಮತ್ತು ಎಂಟು ಮಂದಿಗೆ ಸಹ ಕೊಡು; ಭೂಮಿಯ ಮೇಲೆ ಯಾವ ಕೇಡು ಬರುವದೋ ನಿನಗೆ ತಿಳಿಯದು.

    Give a portion to seven, and also to eight; for thou knowest not what evil shall be upon the earth.

  3. ಮೋಡ ಗಳು ಮಳೆಯಿಂದ ತುಂಬಿದ್ದರೆ ಅವು ತಾವಾಗಿಯೇ ಭೂಮಿಯ ಮೇಲೆ ಬರಿದುಮಾಡಿಕೊಳ್ಳುತ್ತವೆ; ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವದು.

    If the clouds be full of rain, they empty [themselves] upon the earth: and if the tree fall toward the south, or toward the north, in the place where the tree falleth, there it shall be.

  4. ಯಾವನು ಗಾಳಿಯನ್ನು ಲಕ್ಷಿಸುವನೋ ಅವನು ಬಿತ್ತುವದಿಲ್ಲ; ಮೋಡಗಳನ್ನು ಗಮನಿಸುವವನು ಕೊಯ್ಯುವದಿಲ್ಲ.

    He that observeth the wind shall not sow; and he that regardeth the clouds shall not reap.

  5. ಹೇಗೆ ನೀನು ಆತ್ಮೀಯ ಮಾರ್ಗವು ಯಾವದೆಂದೂ ಮತ್ತು ಮಗು ವಿರುವ ಅವಳ ಗರ್ಭದಲ್ಲಿ ಎಲುಬುಗಳು ಹೇಗೆ ಬೆಳೆಯುವವೆಂದೂ ತಿಳಿದುಕೊಳ್ಳಲಾರಿಯೋ ಹಾಗೆ ಯೇ ಎಲ್ಲವನ್ನೂ ಮಾಡುವ ದೇವರ ಕೆಲಸವನ್ನೂ ತಿಳಿದುಕೊಳ್ಳಲಾರಿ.

    As thou knowest not what [is] the way of the spirit, [nor] how the bones [do grow] in the womb of her that is with child: even so thou knowest not the works of God who maketh all.

  6. ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು, ಸಂಜೆ ತನಕ ನಿನ್ನ ಕೈಯನ್ನು ಹಿಂತೆಗೆಯಬೇಡ; ಇದೋ, ಅದೋ ಯಾವದೋ ಕೈಗೂಡಿ ಬರು ವದೋ ಇಲ್ಲವೆ ಎರಡೂ ಒಂದೇ ರೀತಿ ಒಳ್ಳೆಯದಾ ಗುವವೋ ಎಂದು ನಿನಗೆ ತಿಳಿಯದು.

    In the morning sow thy seed, and in the evening withhold not thine hand: for thou knowest not whether shall prosper, either this or that, or whether they both [shall be] alike good.

  7. ನಿಜವಾಗಿ ಬೆಳಕು ಹಿತವಾಗಿಯೂ ಮತ್ತು ಸೂರ್ಯನನ್ನು ನೋಡುವದು ಕಣ್ಣುಗಳಿಗೆ ಮೆಚ್ಚಿಕೆಯಾಗಿಯೂ ಇರು ವದು.

    Truly the light [is] sweet, and a pleasant [thing it is] for the eyes to behold the sun:

  8. ಆದರೆ ಅನೇಕ ವರುಷಗಳು ಒಬ್ಬ ಮನುಷ್ಯನು ಬದುಕಿ ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಅವನು ಕತ್ತಲೆಯ ದಿನಗಳನ್ನು ಜ್ಞಾಪಿಸಿಕೊಳ್ಳಲಿ. ಅವು ಅತಿ ಯಾಗಿರುವವು, ಬರುವವುಗಳೆಲ್ಲವು ವ್ಯರ್ಥವಾಗಿವೆ.

    But if a man live many years, [and] rejoice in them all; yet let him remember the days of darkness; for they shall be many. All that cometh [is] vanity.

  9. ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.

    Rejoice, O young man, in thy youth; and let thy heart cheer thee in the days of thy youth, and walk in the ways of thine heart, and in the sight of thine eyes: but know thou, that for all these [things] God will bring thee into judgment.

  10. ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.

    Therefore remove sorrow from thy heart, and put away evil from thy flesh: for childhood and youth [are] vanity.

All chapters of Ecclesiastes · Kannada Bible · Ecclesiastes 11 in Tamil

Kannada Bible: Kannada Old Version, public domain.

King James Version: public domain.