Ecclesiastes · chapter 11 · verse 2
Ecclesiastes 11:2 in Kannada
ನಿನ್ನ ಭಾಗವನ್ನು ಏಳು ಮತ್ತು ಎಂಟು ಮಂದಿಗೆ ಸಹ ಕೊಡು; ಭೂಮಿಯ ಮೇಲೆ ಯಾವ ಕೇಡು ಬರುವದೋ ನಿನಗೆ ತಿಳಿಯದು.
Ninna bhaagavannu elu mattu entu mandige saha kodu; bhoomiya mele yaava kedu baruvado ninage tiliyadu.
Ecclesiastes 11:2 in English
- King James Version (KJV)
- Give a portion to seven, and also to eight; for thou knowest not what evil shall be upon the earth.
- World English Bible (WEB)
- Give a portion to seven, yes, even to eight; for you don’t know what evil will be on the earth.
- American Standard Version (ASV)
- Give a portion to seven, yea, even unto eight; for thou knowest not what evil shall be upon the earth.
- Bible in Basic English (BBE)
- Give a part to seven or even to eight, because you have no knowledge of the evil which will be on the earth.
- Darby Translation (DBY)
- Give a portion to seven, and also to eight; for thou knowest not what evil shall be upon the earth.
- Webster's Bible (WBS)
- Give a portion to seven, and also to eight; for thou knowest not what evil shall be upon the earth.
- Young's Literal Translation (YLT)
- Give a portion to seven, and even to eight, For thou knowest not what evil is on the earth.
Read in context
- 1ನಿನ್ನ ರೊಟ್ಟಿಯನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು.
- 2ನಿನ್ನ ಭಾಗವನ್ನು ಏಳು ಮತ್ತು ಎಂಟು ಮಂದಿಗೆ ಸಹ ಕೊಡು; ಭೂಮಿಯ ಮೇಲೆ ಯಾವ ಕೇಡು ಬರುವದೋ ನಿನಗೆ ತಿಳಿಯದು.
- 3ಮೋಡ ಗಳು ಮಳೆಯಿಂದ ತುಂಬಿದ್ದರೆ ಅವು ತಾವಾಗಿಯೇ ಭೂಮಿಯ ಮೇಲೆ ಬರಿದುಮಾಡಿಕೊಳ್ಳುತ್ತವೆ; ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವದು.
- 4ಯಾವನು ಗಾಳಿಯನ್ನು ಲಕ್ಷಿಸುವನೋ ಅವನು ಬಿತ್ತುವದಿಲ್ಲ; ಮೋಡಗಳನ್ನು ಗಮನಿಸುವವನು ಕೊಯ್ಯುವದಿಲ್ಲ.
Cross references
- 1 Timothy 6:18–19 1 ತಿಮೊಥೆಯನಿಗೆ 6:18–19ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು. ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.
- Psalm 112:9 ಕೀರ್ತನೆಗಳು 112:9ಅವನು ಬಡವರಿಗೆ ಧಾರಾಳವಾಗಿ ಕೊಡುತ್ತಾನೆ; ಅವನ ನೀತಿ ಎಂದೆಂದಿಗೂ ನಿಲ್ಲು ತ್ತದೆ; ಅವನ ಕೊಂಬು ಘನದಿಂದ ಎತ್ತಲ್ಪಡುವದು.ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.
- Job 5:19 ಯೋಬನು 5:19ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವನು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
- Luke 6:30–35 ಲೂಕನು 6:30–35ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ. ಜನರು ನಿಮಗೆ ಏನು ಮಾಡಬೇಕೆಂದು ನೀವು ಕೋರುತ್ತೀರೋ ನೀವು ಸಹ ಅವರಿಗೆ ಅದ ರಂತೆಯೇ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ. ನಿಮಗೆ ಒಳ್ಳೇದನ್ನು ಮಾಡು ವವರಿಗೆ ನೀವು ಒಳ್ಳೇದನ್ನು ಮಾಡಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಅದರಂತೆಯೇ ಮಾಡುತ್ತಾರೆ. ಯಾರಿಂದ ತಿರಿಗಿ ಪಡಕೊಳ್ಳಬೇಕೆಂದು ನಿರೀಕ್ಷಿಸುತ್ತಿರೋ ಅಂಥವರಿಗೆ ಸಾಲಕೊಟ್ಟರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟಷ್ಟು ತಿರಿಗಿ ಪಡೆಯುವಂತೆ ಪಾಪಿಗಳಿಗೆ ಸಾಲ ಕೊಡುತ್ತಾರೆ. ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ,
- Proverbs 6:16 ಜ್ಞಾನೋಕ್ತಿಗಳು 6:16ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ:
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
- Esther 9:19 ಎಸ್ತೇರಳು 9:19ಆದಕಾರಣ ಗ್ರಾಮಗಳಲ್ಲಿಯೂ ಬೈಲು ಪ್ರಾಂತ್ಯಗಳ ಪಟ್ಟಣಗಳಲ್ಲಿಯೂ ವಾಸವಾಗಿ ರುವ ಯೆಹೂದ್ಯರು ಅಡಾರ್ ತಿಂಗಳ ಹದಿನಾಲ್ಕನೇ ದಿವಸವನ್ನು ಸಂತೋಷದ ದಿವಸವಾಗಿಯೂ ಹಬ್ಬದ ದಿವಸವಾಗಿಯೂ ಸುದಿನವಾಗಿಯೂ ಒಬ್ಬರಿಗೊಬ್ಬರು ಭಾಗಗಳನ್ನು ಕಳುಹಿಸುವ ದಿವಸವಾಗಿಯೂ ಮಾಡಿದರು.
- Micah 5:5 ಮೀಕ 5:5ಇದಲ್ಲದೆ ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದಾಗ ಈತನೇ ಸಮಾಧಾನವಾಗಿರುವನು; ನಮ್ಮ ಅರಮನೆಗಳಲ್ಲಿ ಅವನು ತುಳಿಯುವಾಗ ನಾವು ಆತನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಮುಖ್ಯ ಮನುಷ್ಯರನ್ನೂ ಎಬ್ಬಿಸುವೆವು.
- Nehemiah 8:10 ನೆಹೆಮೀಯ 8:10ಇದಲ್ಲದೆ ಅವನು ಅವರಿಗೆ--ನೀವು ಹೋಗಿ ಕೊಬ್ಬಿದ್ದನ್ನು ತಿಂದು ಸಿಹಿ ಯಾದದ್ದನ್ನು ಕುಡಿದು ಯಾರಿಗೆ ಸಿದ್ಧಮಾಡಿದ್ದು ಏನೂ ಇಲ್ಲವೋ ಅವರಿಗೆ ಭಾಗಗಳನ್ನು ಕಳುಹಿಸಿ ಕೊಡಿರಿ. ಯಾಕಂದರೆ ಈ ದಿನವು ನಮ್ಮ ಕರ್ತನಿಗೆ ಪರಿಶುದ್ಧ ವಾಗಿದೆ. ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ ನೀವು ವ್ಯಥೆಪಡಬೇಡಿರಿ.
- Acts 11:28–30 ಅಪೊಸ್ತಲರ ಕೃತ್ಯಗಳು 11:28–30ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಆತ್ಮನಿಂದ ಸೂಚಿಸಿದನು. ಅದು ಕ್ಲೌದ್ಯ ಕೈಸರನ ದಿವಸಗಳಲ್ಲಿ ಉಂಟಾಯಿತು. ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು. ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
- Luke 17:4 ಲೂಕನು 17:4ಅವನು ಒಂದು ದಿನದಲ್ಲಿ ಏಳು ಸಾರಿ ನಿನಗೆ ವಿರೋಧವಾಗಿ ತಪ್ಪು ಮಾಡಿ ಅದೇ ದಿನದಲ್ಲಿ ಏಳು ಸಾರಿ ನಿನ್ನ ಕಡೆಗೆ ತಿರುಗಿಕೊಂಡು-- ನಾನು ಮಾನಸಾಂತರಪಡುತ್ತೇನೆ ಎಂದು ಹೇಳಿದರೆ ನೀನು ಅವನನ್ನು ಕ್ಷಮಿಸಬೇಕು ಅಂದನು.
- Matthew 18:22 ಮತ್ತಾಯನು 18:22ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ;