Ecclesiastes · chapter 12 · verse 10
Ecclesiastes 12:10 in Kannada
ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದನು: ಆ ಬರೆದವುಗಳು ಒಪ್ಪಿದ ಸತ್ಯವಾದ ಮಾತುಗಳು.
Prasangiyu oppikolluvantaha vaakyagalannu kanduhidiyalu hudukidanu: aa baredavugalu oppida satyavaada maatugalu.
Ecclesiastes 12:10 in English
- King James Version (KJV)
- The preacher sought to find out acceptable words: and [that which was] written [was] upright, [even] words of truth.
- World English Bible (WEB)
- The Preacher sought to find out acceptable words, and that which was written blamelessly, words of truth.
- American Standard Version (ASV)
- The Preacher sought to find out acceptable words, and that which was written uprightly, [even] words of truth.
- Bible in Basic English (BBE)
- The Preacher made search for words which were pleasing, but his writing was in words upright and true.
- Darby Translation (DBY)
- The Preacher sought to find out acceptable words; and that which was written is upright, words of truth.
- Webster's Bible (WBS)
- The preacher sought to find out acceptable words: and [that which was] written [was] upright, [even] words of truth.
- Young's Literal Translation (YLT)
- The preacher sought to find out pleasing words, and, written [by] the upright, words of truth.
Read in context
- 8ವ್ಯರ್ಥದ ವ್ಯರ್ಥಗಳೂ ಎಲ್ಲವೂ ವ್ಯರ್ಥವೇ ಎಂದು ಪ್ರಸಂಗಿ ಹೇಳುವನು.
- 9ಇದಲ್ಲದೆ ಪ್ರಸಂಗಿಯು ಜ್ಞಾನಿಯಾಗಿದ್ದು ಇನ್ನೂ ಜನಗಳಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು; ಹೌದು, ಅವನು ಪರೀಕ್ಷಿಸಿ, ವಿಚಾರಿಸಿ ಅನೇಕ ಜ್ಞಾನೋ ಕ್ತಿಗಳನ್ನು ಕ್ರಮವಾಗಿ ಹೊಂದಿಸಿದನು.
- 10ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದನು: ಆ ಬರೆದವುಗಳು ಒಪ್ಪಿದ ಸತ್ಯವಾದ ಮಾತುಗಳು.
- 11ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗೆಯೂ ಮತ್ತು ಸಭೆಗಳ ಯಜಮಾನರು ನೆಟ್ಟ ಮೊಳೆಗಳ ಹಾಗೆಯೂ ಒಬ್ಬ ಕುರುಬನಿಂದ ಕೊಡಲ್ಪ ಟ್ಟಿವೆ.
- 12ಕೊನೆಗೆ ನನ್ನ ಮಗನೇ, ಇವುಗಳಿಂದ ಎಚ್ಚರಿಕೆ ಯಾಗಿರು. ಬಹಳ ಪುಸ್ತಕಗಳನ್ನು ಮಾಡುವದಕ್ಕೆ ಅಂತ್ಯ ವಿಲ್ಲ; ಹೆಚ್ಚು ಅಭ್ಯಾಸವು ಶರೀರಕ್ಕೆ ಆಯಾಸವಾಗಿದೆ.
Cross references
- Colossians 1:5 ಕೊಲೊಸ್ಸೆಯವರಿಗೆ 1:5ಪರಲೋಕದಲ್ಲಿ ನಿಮಗೋಸ್ಕರ ಇಡಲ್ಪಟ್ಟಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯೆಂಬ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದಿರಿ.
- 1 Timothy 1:15 1 ತಿಮೊಥೆಯನಿಗೆ 1:15ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು.
- Proverbs 16:21–24 ಜ್ಞಾನೋಕ್ತಿಗಳು 16:21–24ಹೃದಯದಲ್ಲಿ ಜ್ಞಾನ ವಂತರು ಜಾಣರೆಂದು ಕರೆಯಲ್ಪಡುವರು; ತುಟಿಗಳ ಮಧುರವು ಜ್ಞಾನವನ್ನು ಹೆಚ್ಚಿಸುತ್ತದೆ. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ. ಬುದ್ಧಿಹೀನರ ಬೋಧ ನೆಯು ಮೂರ್ಖತನ. ಜ್ಞಾನಿಯ ಹೃದಯವು ಬಾಯಿಗೆ ಬೋಧಿಸಿ ತನ್ನ ತುಟಿಗಳಿಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.
- Proverbs 25:11–12 ಜ್ಞಾನೋಕ್ತಿಗಳು 25:11–12ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ. ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ.
- Proverbs 1:1–6 ಜ್ಞಾನೋಕ್ತಿಗಳು 1:1–6ಇಸ್ರಾಯೇಲ್ಯರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಸಾಮ ತಿಗಳು. ಜ್ಞಾನವನ್ನು ಶಿಕ್ಷಣವನ್ನು ತಿಳುಕೊಳ್ಳುವದಕ್ಕೂ ವಿವೇಕದ ಮಾತುಗಳನ್ನು ಗ್ರಹಿಸುವದಕ್ಕೂ ಜ್ಞಾನ ನ್ಯಾಯತೀರ್ಪು ನೀತಿ ಇವುಗಳ ಬೋಧನೆಯನ್ನು ಹೊಂದುವದಕ್ಕೂ ಇವು ಮೂಢರಿಗೆ ಜಾಣತನ ವನ್ನೂ ಯೌವನಸ್ಥನಿಗೆ ತಿಳುವಳಿಕೆಯನ್ನೂ ವಿವೇಕ ವನ್ನೂ ಕೊಡುವವುಗಳಾಗಿವೆ. ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು. ಸಾಮತಿಯನ್ನು ಅದರ ಅರ್ಥವನ್ನು ಜ್ಞಾನಿಗಳ ಮಾತು ಗಳನ್ನು ಅವರ ಗೂಢವಾದ ಮಾತುಗಳನ್ನು ಗ್ರಹಿಸು ವಂತೆ ಇವು ಮಾಡುವವುಗಳಾಗಿವೆ.
- Proverbs 22:17–21 ಜ್ಞಾನೋಕ್ತಿಗಳು 22:17–21ಕಿವಿಗೊಟ್ಟು ಜ್ಞಾನಿ ಗಳ ಮಾತನ್ನು ಕೇಳು; ನನ್ನ ತಿಳುವಳಿಕೆಗೆ ನಿನ್ನ ಹೃದಯ ವನ್ನು ಪ್ರಯೋಗಿಸು. ಅವುಗಳನ್ನು ನಿನ್ನೊಳಗೆ ಕಾಪಾಡಿದರೆ ಅದು ರಮ್ಯವಾಗಿದೆ; ಅವು ನಿನ್ನ ತುಟಿ ಗಳಲ್ಲಿ ಹೊಂದಿಕೊಂಡಿರುವವು. ನಿನ್ನ ಭರವಸವು ಕರ್ತನಲ್ಲಿ ಇರುವಂತೆ ನಿನಗೆ ಈ ದಿವಸ ತಿಳಿಯ ಪಡಿಸಿದ್ದೇನೆ. ಸತ್ಯದ ಮಾತುಗಳ ಸ್ಥಿರತೆಯನ್ನು ನಾನು ನಿನಗೆ ತಿಳಿಯಪಡಿಸುವಂತೆಯೂ ನಿನ್ನ ಕಡೆಗೆ ಕಳುಹಿ ಸಿದವರಿಗೆ ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ?
- Proverbs 15:26 ಜ್ಞಾನೋಕ್ತಿಗಳು 15:26ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ.
- Proverbs 8:6–10 ಜ್ಞಾನೋಕ್ತಿಗಳು 8:6–10ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು. ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ. ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ. ಗ್ರಹಿ ಸುವವನಿಗೆ ಅವು ಸ್ಪಷ್ಟವಾಗಿಯೂ ತಿಳುವಳಿಕೆಯನ್ನು ಕಂಡುಕೊಳ್ಳುವವನಿಗೆ ಅವು ನ್ಯಾಯವಾಗಿಯೂ ಇವೆ. ಬೆಳ್ಳಿಯನ್ನಲ್ಲ, ನನ್ನ ಶಿಕ್ಷಣವನ್ನೂ ಆಯಲ್ಪಟ್ಟ ಬಂಗಾ ರಕ್ಕಿಂತ ತಿಳುವಳಿಕೆಯನ್ನೂ ಪಡೆದುಕೋ.
- Ecclesiastes 1:1 ಪ್ರಸಂಗಿ 1:1ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.