Ecclesiastes · chapter 7 · verse 19
Ecclesiastes 7:19 in Kannada
ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ.
Pattanadalliruva hattu mandi balishthariginta jnyaanavu jnyaanigalannu balapadisuttade.
Ecclesiastes 7:19 in English
- King James Version (KJV)
- Wisdom strengtheneth the wise more than ten mighty [men] which are in the city.
- World English Bible (WEB)
- Wisdom is a strength to the wise man more than ten rulers who are in a city.
- American Standard Version (ASV)
- Wisdom is a strength to the wise man more than ten rulers that are in a city.
- Bible in Basic English (BBE)
- Wisdom makes a wise man stronger than ten rulers in a town.
- Darby Translation (DBY)
- Wisdom strengtheneth the wise more than ten mighty [men] that are in a city.
- Webster's Bible (WBS)
- Wisdom strengtheneth the wise more than ten mighty [men] who are in the city.
- Young's Literal Translation (YLT)
- The wisdom giveth strength to a wise man, more than wealth the rulers who have been in a city.
Read in context
- 17ನೀನು ಅತಿ ಯಾಗಿ ದುಷ್ಟನಾಗಿರಬೇಡ; ಇಲ್ಲವೆ ಮೂರ್ಖನಾಗಿರ ಬೇಡ; ನಿನ್ನ ಸಮಯಕ್ಕಿಂತ ಮೊದಲು ನೀನು ಯಾಕೆ ಸಾಯುವಿ?
- 18ನೀನು ಇದನ್ನು ಹಿಡಿದುಕೊಳ್ಳುವದು ಒಳ್ಳೇದು. ಹೌದು, ಇದರಿಂದ ನಿನ್ನ ಕೈಯನ್ನು ಹಿಂತೆ ಗೆಯಬೇಡ; ದೇವರಿಗೆ ಭಯಪಡುವವನು ಅವೆಲ್ಲವು ಗಳಿಂದ ಹೊರಗೆ ಬರುವನು.
- 19ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ.
- 20ಪಾಪ ಮಾಡದೆ ಒಳ್ಳೇದನ್ನೇ ನಡಿಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ.
- 21ನಿನ್ನ ಸೇವಕನು ನಿನ್ನನ್ನು ಶಪಿಸುವದನ್ನು ನೀನು ಕೇಳದಂತೆ ಆಡಿದ ಎಲ್ಲಾ ಮಾತುಗಳನ್ನು ನೀನು ಸಹ ಲಕ್ಷಿಸಬೇಡ;
Cross references
- Proverbs 21:22 ಜ್ಞಾನೋಕ್ತಿಗಳು 21:22ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ ಅದರಲ್ಲಿ ಭರವಸವಿಟ್ಟು ಬಲವನ್ನು ಕೆಡವಿ ಹಾಕು ತ್ತಾನೆ.
- Colossians 1:9–11 ಕೊಲೊಸ್ಸೆಯವರಿಗೆ 1:9–11ಆದಕಾರಣ ನಾವು ಸಹ ಅದನ್ನು ಕೇಳಿದ ದಿವಸ ದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲಜ್ಞಾನವನ್ನೂ ಆತ್ಮೀಯ ಗ್ರಹಿಕೆಯನ್ನೂ ಹೊಂದಿ ಆತನ ಚಿತ್ತದ ವಿಷಯವಾದ ತಿಳುವಳಿಕೆ ಯಿಂದ ತುಂಬಿಕೊಂಡು ಕರ್ತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿ ಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯ ವೆಂಬ ಫಲವನ್ನು ಕೊಡುತ್ತಾ ದೇವರ ಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿರಬೇಕೆಂತಲೂ ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ
- Proverbs 24:5 ಜ್ಞಾನೋಕ್ತಿಗಳು 24:5ಜ್ಞಾನಿಯು ಬಲವುಳ್ಳವನು; ಹೌದು, ತಿಳುವಳಿಕೆಯು ಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
- Ecclesiastes 9:13–18 ಪ್ರಸಂಗಿ 9:13–18ನಾನು ಈ ಜ್ಞಾನವನ್ನೂ ಸಹ ಸೂರ್ಯನ ಕೆಳಗೆ ನೋಡಿದೆನು; ಇದು ನನಗೆ ದೊಡ್ಡದಾಗಿ ಕಾಣಿಸಿತು. ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು. ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ. ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು. ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ.ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ. ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
- 2 Samuel 20:16–22 2 ಸಮುವೇಲನು 20:16–22ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ--ಕೇಳಿರಿ, ಕೇಳಿರಿ, ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸವಿಾಪಿ ಸಲು ಬರಹೇಳಿರಿ ಎಂದು ಕೂಗಿ ಬೇಡಿಕೊಂಡಳು. ಅವನು ಸವಿಾಪ ಬಂದಾಗ ಆ ಸ್ತ್ರೀಯು--ನೀನು ಯೋವಾಬನೋ ಅಂದಳು. ಅವನು--ನಾನೇ ಅಂದನು. ಅವಳು ಅವನಿಗೆ--ನಿನ್ನ ಸೇವಕಳ ಮಾತು ಗಳನ್ನು ಕೇಳು ಅಂದಳು. ಅವನು--ನಾನು ಕೇಳುತ್ತೇನೆ ಅಂದನು. ಆಗ ಅವಳು ಮಾತನಾಡಿ--ಪೂರ್ವ ದಲ್ಲಿ ಮಾತನಾಡುವ ಮಾತು ಏನಂದರೆ, ಅವರು ಆಬೇಲಿನಲ್ಲಿ ನಿಶ್ಚಯವಾಗಿ ಕೇಳಿ ಹಾಗೆಯೇ ಕಾರ್ಯ ತೀರಿಸಿಕೊಳ್ಳುವರು. ನಾನು ಇಸ್ರಾಯೇಲಿನ ಸಮಾ ಧಾನವುಳ್ಳವರಲ್ಲಿಯೂ ನಂಬಿಗಸ್ತರಲ್ಲಿಯೂ ಒಬ್ಬ ಳಾಗಿದ್ದೇನೆ. ನೀನು ಇಸ್ರಾಯೇಲಿನಲ್ಲಿ ತಾಯಿಯಂತಿ ರುವ ಈ ಪಟ್ಟಣವನ್ನು ನಾಶಮಾಡಲು ಹುಡುಕುತ್ತೀ. ನೀನು ಕರ್ತನ ಬಾಧ್ಯತೆಯನ್ನು ನುಂಗುವದೇಕೆ ಅಂದಳು. ಅದಕ್ಕೆ ಯೋವಾಬನು ಪ್ರತ್ಯುತ್ತರವಾಗಿ--ನನಗೆ ಅದು ದೂರವಾಗಿರಲಿ, ನುಂಗುವದೂ ಕೆಡಿಸುವದೂ ನನಗೆ ದೂರವಾಗಿರಲಿ. ಕಾರ್ಯವು ಹಾಗಲ್ಲ; ಬಿಕ್ರೀಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯಾಮ್ ಬೆಟ್ಟದವನಾದ ಒಬ್ಬ ಮನುಷ್ಯನು ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ; ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು ಅಂದನು. ಆ ಸ್ತ್ರೀಯು ಯೋವಾಬನಿಗೆ--ಇಗೋ, ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಬಳಿಗೆ ಹಾಕಲ್ಪಡುವದು ಅಂದಳು. ಆ ಸ್ತ್ರೀಯು ತನ್ನ ಜ್ಞಾನದಿಂದ ಎಲ್ಲಾ ಜನರ ಬಳಿಗೆ ಹೋದಳು. ಆಗ ಅವರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕಡಿದು ಯೋವಾಬನ ಬಳಿಗೆ ಹಾಕಿದರು. ಅವನು ತುತೂರಿಯನ್ನು ಊದಿದ್ದರಿಂದ ಅವರು ಪಟ್ಟಣದಿಂದ ಚದರಿ ಪ್ರತಿ ಮನುಷ್ಯನು ತನ್ನ ತನ್ನ ಡೇರೆಗೆ ಹೋದನು. ಯೋವಾಬನು ಯೆರೂಸಲೇಮಿನಲ್ಲಿರುವ ಅರಸನ ಬಳಿಗೆ ಹಿಂತಿರುಗಿ ಬಂದನು.