Ephesians · chapter 5 · verse 21
Ephesians 5:21 in Kannada
ಇದಲ್ಲದೆ ದೇವರಿಗೆ ಭಯಪಡುವವರಾಗಿದ್ದು ಒಬ್ಬರಿ ಗೊಬ್ಬರು ವಿಧೇಯರಾಗಿ ನಡೆದುಕೊಳ್ಳಿರಿ.
Idallade devarige bhayapaduvavaraagiddu obbari gobbaru vidheyaraagi nadedukolliri.
Ephesians 5:21 in English
- King James Version (KJV)
- Submitting yourselves one to another in the fear of God.
- World English Bible (WEB)
- subjecting yourselves to one another in the fear of Christ.
- American Standard Version (ASV)
- subjecting yourselves one to another in the fear of Christ.
- Bible in Basic English (BBE)
- Letting yourselves be ruled by one another in the fear of Christ.
- Darby Translation (DBY)
- submitting yourselves to one another in [the] fear of Christ.
- Webster's Bible (WBS)
- Submitting yourselves one to another in the fear of God.
- Young's Literal Translation (YLT)
- subjecting yourselves to one another in the fear of God.
Read in context
- 19ಕೀರ್ತನೆಗಳಿಂದಲೂ ಸಂಗೀತ ಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮಗೆ ನೀವೇ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯದಲ್ಲಿ ಕರ್ತನಿಗೆ ಗಾನಮಾಡುತ್ತಾ ಇಂಪಾಗಿ ಹಾಡುತ್ತಾ ಇರ್ರಿ.
- 20ಯಾವಾಗಲೂ ಎಲ್ಲಾ ಕಾರ್ಯಗಳಿ ಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ.
- 21ಇದಲ್ಲದೆ ದೇವರಿಗೆ ಭಯಪಡುವವರಾಗಿದ್ದು ಒಬ್ಬರಿ ಗೊಬ್ಬರು ವಿಧೇಯರಾಗಿ ನಡೆದುಕೊಳ್ಳಿರಿ.
- 22ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.
- 23ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ,
Cross references
- Philippians 2:3 ಫಿಲಿಪ್ಪಿಯವರಿಗೆ 2:3ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
- Ephesians 5:24 ಎಫೆಸದವರಿಗೆ 5:24ಆದದರಿಂದ ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನ ರಾಗಿರಬೇಕು.
- Ephesians 5:22 ಎಫೆಸದವರಿಗೆ 5:22ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.
- Hebrews 13:17 ಇಬ್ರಿಯರಿಗೆ 13:17ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರ್ರಿ. ಯಾಕಂದರೆ ಅವರು ಲೆಕ್ಕ ಒಪ್ಪಿಸಬೇಕಾ ದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.
- 1 Peter 5:5 1 ಪೇತ್ರನು 5:5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- 1 Timothy 3:4 1 ತಿಮೊಥೆಯನಿಗೆ 3:4ಪೂರ್ಣ ಗೌರವದಿಂದ ತನ್ನ ಮಕ್ಕಳನ್ನೂ ಅಧೀನದಲ್ಲಿ ಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವ ನಾಗಿರಬೇಕು.
- 1 Peter 2:17 1 ಪೇತ್ರನು 2:17ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ.
- Galatians 5:13 ಗಲಾತ್ಯದವರಿಗೆ 5:13ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
- 1 Timothy 2:11 1 ತಿಮೊಥೆಯನಿಗೆ 2:11ಸ್ತ್ರೀಯು ಮೌನವಾಗಿದ್ದು ಪೂರ್ಣ ವಿಧೇಯಳಾಗಿ ಕಲಿಯಬೇಕು.
- 1 Corinthians 16:16 1 ಕೊರಿಂಥದವರಿಗೆ 16:16ಆದದರಿಂದ ಅಂಥವರಿಗೂ ನಮ್ಮೊಂದಿಗೆ ಸಹಾಯ ಮಾಡುತ್ತಾ ಪ್ರಯಾಸಪಡುವ ಪ್ರತಿಯೊಬ್ಬನಿಗೂ ನೀವು ಅಧೀನರಾಗಬೇಕೆಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
- Proverbs 24:21 ಜ್ಞಾನೋಕ್ತಿಗಳು 24:21ನನ್ನ ಮಗನೇ, ಕರ್ತನಿಗೂ ಅರಸನಿಗೂ ಭಯಪಡು; ಭಯಪಡದವರ ಗೊಡವೆಗೆ ಹೋಗ ಬೇಡ.
- Romans 13:1–5 ರೋಮಾಪುರದವರಿಗೆ 13:1–5ಪ್ರತಿಯೊಬ್ಬನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವ ರಿಂದ ನೇಮಿಸಲ್ಪಟ್ಟವರು. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ; ಎದುರಿಸುವವರು ಶಿಕ್ಷೆಗೊಳಗಾಗು ವರು. ಕೆಟ್ಟಕೆಲಸ ಮಾಡುವವನಿಗೆ ಅಧಿಕಾರಿಗಳ ಭಯವಿರುವದೇ ಹೊರತು ಒಳ್ಳೇಕೆಲಸ ಮಾಡುವವ ನಿಗೆ ಇರುವದಿಲ್ಲ; ನೀನು ಅಧಿಕಾರಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ? ಒಳ್ಳೆಯದನ್ನು ಮಾಡು; ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗ ಳಿಕೆಯುಂಟಾಗುವದು. ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ; ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದಂಡನೆಯನ್ನು ವಿಧಿಸುತ್ತಾನೆ. ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿನ ನಿಮಿತ್ತವಾಗಿಯೂ (ಅವನಿಗೆ) ಅಧೀನ ನಾಗುವದು ಅವಶ್ಯ.