Exodus · chapter 1 · verse 9
Exodus 1:9 in Kannada
ಅವನು ತನ್ನ ಜನರಿಗೆ--ಇಗೋ, ಇಸ್ರಾಯೇಲ್ ಮಕ್ಕಳಾದ ಈ ಜನರು ನಮಗಿಂತ ಹೆಚ್ಚಿ ಬಲವುಳ್ಳವರಾಗಿದ್ದಾರೆ;
Avanu tanna janarige--igo, israayel makkalaada ee janaru namaginta hechchi balavullavaraagiddaare;
Exodus 1:9 in English
- King James Version (KJV)
- And he said unto his people, Behold, the people of the children of Israel [are] more and mightier than we:
- World English Bible (WEB)
- He said to his people, “Behold, the people of the children of Israel are more and mightier than we.
- American Standard Version (ASV)
- And he said unto his people, Behold, the people of the children of Israel are more and mightier than we:
- Bible in Basic English (BBE)
- And he said to his people, See, the people of Israel are greater in number and in power than we are:
- Darby Translation (DBY)
- And he said to his people, Behold, the people of the children of Israel are more numerous and stronger than we.
- Webster's Bible (WBS)
- And he said to his people, Behold, the people of the children of Israel [are] more and mightier than we.
- Young's Literal Translation (YLT)
- and he saith unto his people, 'Lo, the people of the sons of Israel [is] more numerous and mighty than we;
Read in context
- 7ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.
- 8ಆಗ ಯೋಸೇಫನನ್ನು ಅರಿಯದ ಬೇರೊಬ್ಬನು ಐಗುಪ್ತಕ್ಕೆ ಅರಸನಾದನು.
- 9ಅವನು ತನ್ನ ಜನರಿಗೆ--ಇಗೋ, ಇಸ್ರಾಯೇಲ್ ಮಕ್ಕಳಾದ ಈ ಜನರು ನಮಗಿಂತ ಹೆಚ್ಚಿ ಬಲವುಳ್ಳವರಾಗಿದ್ದಾರೆ;
- 10ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು.
- 11ಆಗ ಅವರನ್ನು ತಮ್ಮ ಬಿಟ್ಟೀಕೆಲಸಗಳಿಂದ ಶ್ರಮೆಪಡಿಸುವ ಹಾಗೆ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
Cross references
- Psalm 105:24–25 ಕೀರ್ತನೆಗಳು 105:24–25ಆತನು ತನ್ನ ಜನರನ್ನು ಬಹಳ ಅಭಿವೃದ್ಧಿಮಾಡಿ ಅವರ ವೈರಿಗಳಿಗಿಂತ ಬಲಿಷ್ಠ ರನ್ನಾಗಿ ಮಾಡಿದನು. ಆತನು ಆ ದೇಶದವರ ಹೃದಯವನ್ನು ಮಾರ್ಪ ಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು.
- Ecclesiastes 4:4 ಪ್ರಸಂಗಿ 4:4ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
- James 3:14–16 ಯಾಕೋಬನು 3:14–16ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯ ಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧ ವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು. ಹೊಟ್ಟೇಕಿಚ್ಚೂ ಜಗಳವೂ ಇರುವ ಕಡೆ ಗಲಿಬಿಲಿಯೂ ಸಕಲವಿಧವಾದ ಕೆಟ್ಟ ಕೃತ್ಯವೂ ಇರುವವು.
- Proverbs 14:28 ಜ್ಞಾನೋಕ್ತಿಗಳು 14:28ಜನ ಸಮೂಹದಲ್ಲಿ ಅರಸನ ಘನತೆ ಇದೆ; ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
- Numbers 22:4–5 ಅರಣ್ಯಕಾಂಡ 22:4–5ಆದದರಿಂದ ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ ಹೇಳಿದ್ದೇನಂದರೆ--ಈಗ ಈ ಸಮೂಹವು ನಮ್ಮ ಸುತ್ತಲಿರುವದನ್ನೆಲ್ಲಾ ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ ಮೇಯುವದು. ಆ ಕಾಲದಲ್ಲಿ ಚಿಪ್ಪೋ ರನ ಮಗನಾದ ಬಾಲಾಕನು ಮೋವಾಬ್ಯರ ಅರಸ ನಾಗಿದ್ದನು. ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.
- Proverbs 27:4 ಜ್ಞಾನೋಕ್ತಿಗಳು 27:4ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು?
- Titus 3:3 ತೀತನಿಗೆ 3:3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- Job 5:2 ಯೋಬನು 5:2ಮೂಢನನ್ನು ಕೋಪವು ಕೊಲ್ಲು ವದು; ಬುದ್ಧಿಹೀನನನ್ನು ರೋಷವು ಸಾಯುವಂತೆ ಮಾಡುವದು.
- James 4:5 ಯಾಕೋಬನು 4:5ಇದಲ್ಲದೆ--ನಮ್ಮಲ್ಲಿ ವಾಸವಾಗಿರುವ ಆತ್ಮನು ಅಭಿಮಾನತಾಪದಿಂದ ಹಂಬಲಿಸುತ್ತಾನೆಂಬ ಬರಹವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸು ತ್ತೀರೋ?