Exodus · chapter 12 · verse 25
Exodus 12:25 in Kannada
ಕರ್ತನು ಕೊಡುವೆನೆಂದು ಪ್ರಮಾಣಮಾಡಿದ ದೇಶಕ್ಕೆ ನೀವು ಬಂದಾಗ ಈ ಆಚರಣೆಯನ್ನು ನೀವು ಕೈಕೊಳ್ಳಬೇಕು.
Kartanu koduvenendu pramaanamaadida deshakke neevu bandaaga ee aacharaneyannu neevu kaikollabeku.
Exodus 12:25 in English
- King James Version (KJV)
- And it shall come to pass, when ye be come to the land which the LORD will give you, according as he hath promised, that ye shall keep this service.
- World English Bible (WEB)
- It shall happen when you have come to the land which the LORD will give you, as he has promised, that you shall keep this service.
- American Standard Version (ASV)
- And it shall come to pass, when ye are come to the land which Jehovah will give you, according as he hath promised, that ye shall keep this service.
- Bible in Basic English (BBE)
- And when you come into the land which the Lord will make yours, as he gave his word, you are to keep this act of worship.
- Darby Translation (DBY)
- And it shall come to pass, when ye are come into the land that Jehovah will give you, as he has promised, that ye shall keep this service.
- Webster's Bible (WBS)
- And it shall come to pass, when ye shall have come to the land which the LORD will give you, according as he hath promised, that ye shall keep this service.
- Young's Literal Translation (YLT)
- and it hath been, when ye come in unto the land which Jehovah giveth to you, as He hath spoken, that ye have kept this service;
Read in context
- 23ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.
- 24ಇದನ್ನು ಒಂದು ಶಾಸನವಾಗಿ ನೀವೂ ನಿಮ್ಮ ಕುಮಾರರೂ ಸದಾಕಾಲಕ್ಕೂ ಇದನ್ನು ಆಚರಿಸತಕ್ಕದ್ದು.
- 25ಕರ್ತನು ಕೊಡುವೆನೆಂದು ಪ್ರಮಾಣಮಾಡಿದ ದೇಶಕ್ಕೆ ನೀವು ಬಂದಾಗ ಈ ಆಚರಣೆಯನ್ನು ನೀವು ಕೈಕೊಳ್ಳಬೇಕು.
- 26ನಿಮ್ಮ ಮಕ್ಕಳು ಈ ಆಚಾರದ ಅರ್ಥವೇನು ಎಂದು ಕೇಳಿದಾಗ
- 27ನೀವು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ಐಗುಪ್ತ್ಯರನ್ನು ಸಂಹರಿಸಿ ನಮ್ಮ ಮನೆಗಳನ್ನು ಕಾಪಾಡುವದಕ್ಕಾಗಿ ಇಸ್ರಾಯೇಲ್ ಮಕ್ಕಳ ಮನೆಗಳನ್ನು ದಾಟಿಹೋದ ಕರ್ತನ ಪಸ್ಕವೇ ಇದು ಎಂದು ನೀವು ಹೇಳಬೇಕು ಅಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.
Cross references
- Exodus 3:8 ವಿಮೋಚನಕಾಂಡ 3:8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.
- Exodus 3:17 ವಿಮೋಚನಕಾಂಡ 3:17ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.
- Deuteronomy 12:8–9 ಧರ್ಮೋಪದೇಶಕಾಂಡ 12:8–9ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ. ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ವಿಶ್ರಾಂತಿಗೂ ಸ್ವಾಸ್ತ್ಯಕ್ಕೂ ನೀವು ಇನ್ನೂ ಸೇರಲಿಲ್ಲ;
- Psalm 105:44–45 ಕೀರ್ತನೆಗಳು 105:44–45ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ. ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
- Deuteronomy 4:5 ಧರ್ಮೋಪದೇಶಕಾಂಡ 4:5ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.
- Deuteronomy 16:5–9 ಧರ್ಮೋಪದೇಶಕಾಂಡ 16:5–9ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದ್ವಾರಗಳ ಯಾವದೊಂದರಲ್ಲಾದರೂ ನೀನು ಪಸ್ಕವನ್ನು ಅರ್ಪಿಸ ಬಾರದು. ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀನು ಪಸ್ಕವನ್ನು ಸಾಯಂಕಾಲದಲ್ಲಿ ಸೂರ್ಯನು ಅಸ್ತಮಿಸುವಾಗ ನೀನು ಐಗುಪ್ತವನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು. ನಿನ್ನ ದೇವರಾದ ಕರ್ತನು ಆದು ಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು; ಮರುದಿವಸದಲ್ಲಿ ತಿರುಗಿಕೊಂಡು ನಿನ್ನ ಗುಡಾರಗಳಿಗೆ ಹೋಗಬೇಕು; ಆರು ದಿವಸ ಹುಳಿ ಇಲ್ಲದ ರೊಟ್ಟಿ ಗಳನ್ನು ತಿನ್ನಬೇಕು; ಏಳನೇ ದಿನದಲ್ಲಿ ನಿನ್ನ ದೇವರಾದ ಕರ್ತನಿಗೆ ವಿಶೇಷ ಸಭೆ ಸೇರಬೇಕು; ಅದರಲ್ಲಿ ಕೆಲಸ ಮಾಡಬಾರದು. ಏಳು ವಾರಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು; ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವದಕ್ಕೆ ಪ್ರಾರಂಭಿಸ ಬೇಕು.
- Joshua 5:10–12 ಯೆಹೋಶುವ 5:10–12ಇಸ್ರಾಯೇಲ್ ಮಕ್ಕಳು ಗಿಲ್ಗಾಲಿನಲ್ಲಿ ಇಳು ಕೊಂಡ ತಿಂಗಳಿನ ಹದಿನಾಲ್ಕನೇ ದಿನದ ಸಾಯಂಕಾಲ ದಲ್ಲಿ ಯೆರಿಕೋವಿನ ಬೈಲುಗಳಲ್ಲಿ ಪಸ್ಕವನ್ನು ಆಚರಿಸಿ ದರು. ಪಸ್ಕದ ಎರಡನೇ ದಿವಸವಾದ ಆ ದಿನದಲ್ಲಿ ಅವರು ಆ ದೇಶದ ಹಳೆಯ ಧಾನ್ಯದಿಂದ ಮಾಡಿದ ಹುಳಿ ಇಲ್ಲದ ರೊಟ್ಟಿಗಳನ್ನೂ ಹುರಿದ ಧಾನ್ಯಗಳನ್ನೂ ತಿಂದರು. ಅವರು ಆ ದೇಶದ ಹಳೆಯ ಧಾನ್ಯವನ್ನು ತಿಂದ ಮರು ದಿನದಲ್ಲೇ ಮನ್ನವು ನಿಂತುಹೋಯಿತು; ಇಸ್ರಾಯೇಲ್ ಮಕ್ಕಳಿಗೆ ಮನ್ನ ತಿರಿಗಿ ಸಿಕ್ಕಲಿಲ್ಲ; ಆ ವರುಷದಲ್ಲೆಲ್ಲಾ ಕಾನಾನ್ ದೇಶದ ಫಲವನ್ನು ತಿಂದರು.