Exodus · chapter 18 · verse 15
Exodus 18:15 in Kannada
ಅದಕ್ಕೆ ಮೋಶೆಯು ತನ್ನ ಮಾವನಿಗೆ--ದೇವರ ವಿಷಯದಲ್ಲಿ ಕೇಳುವದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.
Adakke mosheyu tanna maavanige--devara vishayadalli keluvadakkaagi janaru nanna balige baruttaare.
Exodus 18:15 in English
- King James Version (KJV)
- And Moses said unto his father in law, Because the people come unto me to enquire of God:
- World English Bible (WEB)
- Moses said to his father-in-law, “Because the people come to me to inquire of God.
- American Standard Version (ASV)
- And Moses said unto his father-in-law, Because the people come unto me to inquire of God:
- Bible in Basic English (BBE)
- And Moses said to his father-in-law, Because the people come to me to get directions from God:
- Darby Translation (DBY)
- And Moses said to his father-in-law, Because the people come to me to enquire of God.
- Webster's Bible (WBS)
- And Moses said to his father-in-law, Because the people come to me to inquire of God:
- Young's Literal Translation (YLT)
- And Moses saith to his father-in-law, 'Because the people come unto me to seek God;
Read in context
- 13ಮರುದಿನದಲ್ಲಿ ಮೋಶೆಯು ಜನರಿಗೆ ನ್ಯಾಯತೀರಿಸುವದಕ್ಕೆ ಕೂತುಕೊಂಡಾಗ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ಮೋಶೆಯ ಬಳಿಯಲ್ಲಿ ನಿಂತಿ ದ್ದರು.
- 14ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು.
- 15ಅದಕ್ಕೆ ಮೋಶೆಯು ತನ್ನ ಮಾವನಿಗೆ--ದೇವರ ವಿಷಯದಲ್ಲಿ ಕೇಳುವದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.
- 16ಅವರಿಗೆ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ ಆತನ ನ್ಯಾಯ ಪ್ರಮಾಣಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ ಅಂದನು.
- 17ಮೋಶೆಯ ಮಾವನು ಅವನಿಗೆ--ನೀನು ಮಾಡುವ ಈ ಕಾರ್ಯವು ಸರಿಯಲ್ಲ;
Cross references
- Numbers 15:34 ಅರಣ್ಯಕಾಂಡ 15:34ಅವ ನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅವನನ್ನು ಕಾವಲಲ್ಲಿ ಹಾಕಿದರು.
- Numbers 27:5 ಅರಣ್ಯಕಾಂಡ 27:5ಮೋಶೆಯು ಅವರ ವ್ಯಾಜ್ಯವನ್ನು ಕರ್ತನ ಮುಂದೆ ತಂದನು.
- Numbers 9:8 ಅರಣ್ಯಕಾಂಡ 9:8ಮೋಶೆ ಅವ ರಿಗೆ--ಸುಮ್ಮನೆ ನಿಲ್ಲಿರಿ, ಕರ್ತನು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುವನೋ ನಾನು ವಿಚಾರಿಸುತ್ತೇನೆ ಅಂದನು.
- Leviticus 24:12–14 ಯಾಜಕಕಾಂಡ 24:12–14ಅವನ ವಿಷಯವಾಗಿ ಅವರು ಕರ್ತನ ತೀರ್ಪನ್ನು ತಿಳಿದು ಕೊಳ್ಳುವದಕೋಸ್ಕರ ಅವನನ್ನು ಕಾವಲಲ್ಲಿ ಇಟ್ಟರು. ಆಗ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ; ಅವನಿಂದ ಕೇಳಿದ ವರೆಲ್ಲರು ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.
- Deuteronomy 17:8–13 ಧರ್ಮೋಪದೇಶಕಾಂಡ 17:8–13ನಿನ್ನ ಬಾಗಲುಗಳಲ್ಲಿ ಉಂಟಾದ ವಿವಾದಗಳ ವಿಷ ಯವಾಗಿ ಅಂದರೆ ರಕ್ತರಕ್ತದ ಮಧ್ಯದಲ್ಲಿಯ ವ್ಯಾಜ್ಯ ವಾಗಲಿ, ವಾದಿ ಪ್ರತಿವಾದಿ ವ್ಯಾಜ್ಯವಾಗಲಿ, ಬಡಿದಾ ಟದ ವ್ಯಾಜ್ಯವಾಗಲಿ, ನೀನು ನ್ಯಾಯ ತೀರಿಸ ಕೂಡದ ಕಠಿಣವಾದ ಕಾರ್ಯ ಉಂಟಾದರೆ ನೀನು ಎದ್ದು ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಹೋಗಿ ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು. ಅವರು ನಿನಗೆ ಕರ್ತನು ಆದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀನು ಮಾಡಿ ಬೋಧಿಸುವಂಥದ್ದೆಲ್ಲಾ ಅನುಸ ರಿಸಬೇಕು. ಅವರು ನಿನಗೆ ಬೋಧಿಸುವ ನ್ಯಾಯ ಪ್ರಮಾಣದ ಪ್ರಕಾರವೂ ಅವರು ನಿನಗೆ ಹೇಳುವ ತೀರ್ಪಿನ ಪ್ರಕಾರವೂ ನೀನು ಮಾಡಬೇಕು; ಅವರು ನಿನಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗಬಾರದು. ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು; ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ.
- Exodus 18:19–20 ವಿಮೋಚನಕಾಂಡ 18:19–20ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು. ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು.
- Numbers 9:6 ಅರಣ್ಯಕಾಂಡ 9:6ಆಗ ಶವದ ದೆಸೆಯಿಂದ ಅಶುದ್ಧರಾಗಿ ಪಸ್ಕವನ್ನು ಆ ದಿವಸದಲ್ಲಿ ಆಚರಿಸಲಿಕ್ಕಾಗದ ಕೆಲವು ಮನುಷ್ಯ ರಿದ್ದರು; ಅವರು ಆ ದಿವಸದಲ್ಲಿ ಮೋಶೆ ಆರೋನರ ಮುಂದೆ ಬಂದರು.