Exodus · chapter 25 · verse 7
Exodus 25:7 in Kannada
ಎಫೋದಿ ಗಾಗಿ ಮತ್ತು ಪದಕಕ್ಕಾಗಿ ಗೋಮೇಧಿಕಗಳೂ ಕೆತ್ತಿದ ರತ್ನಗಳೂ ಇವೇ.
Ephodi gaagi mattu padakakkaagi gomedhikagaloo kettida ratnagaloo ive.
Exodus 25:7 in English
- King James Version (KJV)
- Onyx stones, and stones to be set in the ephod, and in the breastplate.
- World English Bible (WEB)
- onyx stones, and stones to be set for the ephod and for the breastplate.
- American Standard Version (ASV)
- onyx stones, and stones to be set, for the ephod, and for the breastplate.
- Bible in Basic English (BBE)
- Beryls and stones of value to be put on the ephod and on the priest's bag.
- Darby Translation (DBY)
- onyx stones, and stones to be set in the ephod, and in the breastplate.
- Webster's Bible (WBS)
- Onyx stones, and stones to be set in the ephod, and in the breast-plate.
- Young's Literal Translation (YLT)
- shoham stones, and stones for setting for an ephod, and for a breastplate.
Read in context
- 5ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು ಕಡಲು ಹಂದಿಯ ಚರ್ಮಗಳು ಜಾಲಿ ಮರಗಳು.
- 6ದೀಪಕ್ಕಾಗಿ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರವೂ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳೂ
- 7ಎಫೋದಿ ಗಾಗಿ ಮತ್ತು ಪದಕಕ್ಕಾಗಿ ಗೋಮೇಧಿಕಗಳೂ ಕೆತ್ತಿದ ರತ್ನಗಳೂ ಇವೇ.
- 8ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
- 9ಗುಡಾರದ ಮಾದರಿಯನ್ನೂ ಅದರ ಎಲ್ಲಾ ಸಾಮಾನುಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
Cross references
- Exodus 28:4 ವಿಮೋಚನಕಾಂಡ 28:4ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು.
- Exodus 28:6–30 ವಿಮೋಚನಕಾಂಡ 28:6–30ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು. ಅದರ ಎರಡೂ ಅಂಚುಗಳಲ್ಲಿ ಜೋಡಿಸುವದಕ್ಕೆ ಅದಕ್ಕೆ ಎರಡು ಹೆಗಲು ಭಾಗಗಳಿರಬೇಕು, ಅವು ಜೋಡಿಸಲ್ಪಡಬೇಕು. ಅದರ ಮೇಲಿರುವ ವಿಚಿತ್ರ ವಾದ ಎಫೋದಿನ ನಡುಕಟ್ಟು ಅದೇ ಕೆಲಸದ್ದಾಗಿ ಅಂದರೆ ಬಂಗಾರದಿಂದಲೂ ನೀಲಿ ಧೂಮ್ರ ರಕ್ತ ವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಮಾಡಿದ್ದಾಗಿರಬೇಕು. ನೀನು ಎರಡು ಗೋಮೇಧಿಕ ಕಲ್ಲುಗಳನ್ನು ತೆಗೆದುಕೊಂಡು ಇಸ್ರಾ ಯೇಲ್ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು. ಒಂದು ಕಲ್ಲಿನ ಮೇಲೆ ಆರು ಹೆಸರು ಗಳನ್ನೂ ಇನ್ನೊಂದು ಕಲ್ಲಿನ ಮೇಲೆ ಉಳಿದ ಆರು ಹೆಸರುಗಳನ್ನೂ ಅವರವರ ಜನನದ ಪ್ರಕಾರ ಕೆತ್ತಬೇಕು. ಕಲ್ಲು ಕೆತ್ತುವವರ ಕೆಲಸದಿಂದ ಮುದ್ರೆ ಕೆತ್ತುವ ಪ್ರಕಾರ ಆ ಎರಡು ಕಲ್ಲುಗಳನ್ನು ಇಸ್ರಾಯೇಲ್ ಮಕ್ಕಳ ಹೆಸರುಗಳಿಗನುಸಾರವಾಗಿ ಕೆತ್ತಿಸಿ ಅವುಗಳನ್ನು ಬಂಗಾ ರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು. ಆ ಎರಡು ಕಲ್ಲುಗಳನ್ನು ಎಫೋದಿನ ಹೆಗಲು ಭಾಗದ ಮೇಲೆ ಇಸ್ರಾಯೇಲ್ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಕರ್ತನ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು. ನೀನು ಬಂಗಾರದ ಜವೆಗಳನ್ನು ಮಾಡಬೇಕು. ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿ ಆ ಹೆಣೆದ ಸರಪಣಿಗಳ ಕೊನೆ ಗಳನ್ನು ಜವೆಗಳಿಗೆ ಸೇರಿಸಬೇಕು. ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು. ಅದು ಚಚ್ಚೌಕವಾಗಿಯೂ ಇಮ್ಮಡಿ ಸಿದ್ದಾಗಿಯೂ ಇದ್ದು ಗೇಣುದ್ದವಾಗಿಯೂ ಗೇಣಗಲ ವಾಗಿಯೂ ಇರಬೇಕು. ನೀನು ಅದರಲ್ಲಿ ನಾಲ್ಕು ಕಲ್ಲುಗಳ ನಾಲ್ಕು ಸಾಲುಗಳಾಗಿ ಕಲ್ಲು ಜವೆಗಳನ್ನು ಮಾಡಬೇಕು; ಮೊದಲನೆಯ ಸಾಲಿನಲ್ಲಿ ಪದ್ಮರಾಗ ಗೋಮೇಧಕ ಮಾಣಿಕ್ಯಗಳಿರಬೇಕು. ಇದೇ ಮೊದಲ ನೆಯ ಸಾಲು. ಎರಡನೆಯ ಸಾಲಿನಲ್ಲಿ ಪಚ್ಚೆ ನೀಲ ವಜ್ರ ಇರಬೇಕು. ಮೂರನೆಯ ಸಾಲಿನಲ್ಲಿ ಸುವರ್ಣ ವೈದೂರ್ಯ ಸುಗಂಧಿಗಳಿರಬೇಕು. ನಾಲ್ಕನೆಯ ಸಾಲಿನಲ್ಲಿ ಬೆರುಲ್ಲ ಗೋಮೇಧಕ ವಜ್ರಗಳಿರಬೇಕು. ಇವು ಚಿನ್ನದ ಜವೆಗಳಲ್ಲಿ ಸೇರಿಸಿದವುಗಳಾಗಿರಬೇಕು. ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳ ಹೆಸರುಗಳು ಳ್ಳವುಗಳಾಗಿ ಅವರ ಹೆಸರುಗಳ ಪ್ರಕಾರ ಅವು ಹನ್ನೆರಡಾ ಗಿರಬೇಕು. ಅವು ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಕುಲಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು. ಎದೆಪದಕದ ಮೇಲಿನ ಕೊನೆಯಲ್ಲಿ ಶುದ್ಧ ಬಂಗಾರದಿಂದ ಹೆಣೆದ ಸರಪಣಿಗಳನ್ನು ಮಾಡಬೇಕು. ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆ ಗಳನ್ನು ಮಾಡಿ ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು. ಚಿನ್ನದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳ ಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು. ಹೆಣೆದ ಆ ಎರಡು ಸರಪಣಿಗಳ ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಯಲ್ಲಿ ಇರಿಸಬೇಕು. ಬಂಗಾರದಿಂದ ಎರಡು ಬಳೆ ಗಳನ್ನು ಮಾಡಿ ಎದೆಪದಕದ ಎರಡು ಅಂಚುಗಳಲ್ಲಿ ಸೇರಿಸಿ ಎಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು. ಚಿನ್ನದ ಬೇರೆ ಎರಡು ಬಳೆಗಳನ್ನು ಮಾಡಿ ಎಫೋದಿನ ಎರಡು ಹೆಗಲ ಭಾಗಗಳಲ್ಲಿ ಕೆಳಗೆ ಮುಂದುಗಡೆಯಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಣೆಯ ಎದುರಾಗಿ ಇರಿಸಬೇಕು. ಆ ಎದೆ ಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದಂತೆಯೂ ಅದರ ಬಳೆಗಳನ್ನು ಎಫೋ ದಿನ ಉಂಗುರಗಳಿಗೆ ನೀಲಿ ನೂಲಿನ ದಾರದಿಂದ ಕಟ್ಟಬೇಕು. ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲ್ ಮಕ್ಕಳ ಹೆಸರುಗಳನ್ನು ಯಾವಾಗಲೂ ಕರ್ತನ ಮುಂದೆ ಜ್ಞಾಪಕಮಾಡುವದಕ್ಕಾಗಿ ನ್ಯಾಯದ ಎದೆ ಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು. ನ್ಯಾಯದ ಎದೆಪದಕದಲ್ಲಿ ಊರೀಮ್ ತುವ್ಮೆಾಮ್ ಗಳನ್ನು ಇಡಬೇಕು. ಆರೋನನು ಕರ್ತನ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಕರ್ತನ ಮುಂದೆ ಯಾವಾಗಲೂ ಇಸ್ರಾಯೇಲ್ ಮಕ್ಕಳ ನ್ಯಾಯವನ್ನು ತನ್ನ ಹೃದಯದ ಮೇಲೆ ಹೊರಬೇಕು.