Exodus · chapter 28 · verse 17
Exodus 28:17 in Kannada
ನೀನು ಅದರಲ್ಲಿ ನಾಲ್ಕು ಕಲ್ಲುಗಳ ನಾಲ್ಕು ಸಾಲುಗಳಾಗಿ ಕಲ್ಲು ಜವೆಗಳನ್ನು ಮಾಡಬೇಕು; ಮೊದಲನೆಯ ಸಾಲಿನಲ್ಲಿ ಪದ್ಮರಾಗ ಗೋಮೇಧಕ ಮಾಣಿಕ್ಯಗಳಿರಬೇಕು. ಇದೇ ಮೊದಲ ನೆಯ ಸಾಲು.
Neenu adaralli naalku kallugala naalku saalugalaagi kallu javegalannu maadabeku; modalaneya saalinalli padmaraaga gomedhaka maanikyagalirabeku. Ide modala neya saalu.
Exodus 28:17 in English
- King James Version (KJV)
- And thou shalt set in it settings of stones, [even] four rows of stones: [the first] row [shall be] a sardius, a topaz, and a carbuncle: [this shall be] the first row.
- World English Bible (WEB)
- You shall set in it settings of stones, four rows of stones: a row of ruby, topaz, and beryl shall be the first row;
- American Standard Version (ASV)
- And thou shalt set in it settings of stones, four rows of stones: a row of sardius, topaz, and carbuncle shall be the first row;
- Bible in Basic English (BBE)
- And on it you are to put four lines of jewels; the first line is to be a cornelian, a chrysolite, and an emerald;
- Darby Translation (DBY)
- And thou shalt set in it settings of stones — four rows of stones: [one] row, a sardoin, a topaz, and an emerald — the first row;
- Webster's Bible (WBS)
- And thou shalt set in it settings of stones, [even] four rows of stones: [the first] row [shall be] a sardius, a topaz, and a carbuncle: [this shall be] the first row.
- Young's Literal Translation (YLT)
- 'And thou hast set in it settings of stone, four rows of stone; a row of sardius, topaz, and carbuncle [is] the first row;
Read in context
- 15ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.
- 16ಅದು ಚಚ್ಚೌಕವಾಗಿಯೂ ಇಮ್ಮಡಿ ಸಿದ್ದಾಗಿಯೂ ಇದ್ದು ಗೇಣುದ್ದವಾಗಿಯೂ ಗೇಣಗಲ ವಾಗಿಯೂ ಇರಬೇಕು.
- 17ನೀನು ಅದರಲ್ಲಿ ನಾಲ್ಕು ಕಲ್ಲುಗಳ ನಾಲ್ಕು ಸಾಲುಗಳಾಗಿ ಕಲ್ಲು ಜವೆಗಳನ್ನು ಮಾಡಬೇಕು; ಮೊದಲನೆಯ ಸಾಲಿನಲ್ಲಿ ಪದ್ಮರಾಗ ಗೋಮೇಧಕ ಮಾಣಿಕ್ಯಗಳಿರಬೇಕು. ಇದೇ ಮೊದಲ ನೆಯ ಸಾಲು.
- 18ಎರಡನೆಯ ಸಾಲಿನಲ್ಲಿ ಪಚ್ಚೆ ನೀಲ ವಜ್ರ ಇರಬೇಕು.
- 19ಮೂರನೆಯ ಸಾಲಿನಲ್ಲಿ ಸುವರ್ಣ ವೈದೂರ್ಯ ಸುಗಂಧಿಗಳಿರಬೇಕು.
Cross references
- Ezekiel 28:13 ಯೆಹೆಜ್ಕೇಲನು 28:13ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
- Exodus 39:10–21 ವಿಮೋಚನಕಾಂಡ 39:10–21ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು. ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು. ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು. ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು. ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು. ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು. ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು. ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು. ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು. ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು. ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು. ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಆ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.
- Proverbs 8:11 ಜ್ಞಾನೋಕ್ತಿಗಳು 8:11ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು.
- Revelation 21:19–21 ಪ್ರಕಟನೆ 21:19–21ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲವಿಧವಾದ ಅಮೂಲ್ಯವಾದ ಕಲ್ಲುಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿ ವಾರವು ಸೂರ್ಯಕಾಂತ, ಎರಡನೆಯದು ನೀಲಮಣಿ, ಮೂರನೆಯದು ಕೆಂಪು, ನಾಲ್ಕನೆಯದು ಪಚ್ಚೆ. ಐದನೆಯದು ಗೋಮೇಧಿಕ. ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಕೆಂಗಿತ್ತಳೆ, ಹನ್ನೆರಡನೆ ಯದು ನೀಲಸ್ಪಟಿಕ. ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಒಂದೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಸೋಸಿದ ಬಂಗಾರವಾಗಿತ್ತು.
- Job 28:18–19 ಯೋಬನು 28:18–19ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು. ಕೂಷಿನ ಪುಷ್ಯರಾಗ ಅದಕ್ಕೆ ಈಡಾಗಿರುವದಿಲ್ಲ; ಶುದ್ಧ ಬಂಗಾರಕ್ಕೆ ಅದನ್ನು ತೂಗಿಸುವದಿಲ್ಲ.
- Proverbs 20:15 ಜ್ಞಾನೋಕ್ತಿಗಳು 20:15ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.
- Lamentations 4:7 ಪ್ರಲಾಪಗಳು 4:7ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು.
- Proverbs 3:15 ಜ್ಞಾನೋಕ್ತಿಗಳು 3:15ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ.
- Exodus 28:9 ವಿಮೋಚನಕಾಂಡ 28:9ನೀನು ಎರಡು ಗೋಮೇಧಿಕ ಕಲ್ಲುಗಳನ್ನು ತೆಗೆದುಕೊಂಡು ಇಸ್ರಾ ಯೇಲ್ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.
- Malachi 3:17 ಮಲಾಕಿಯ 3:17ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Exodus 28:11 ವಿಮೋಚನಕಾಂಡ 28:11ಕಲ್ಲು ಕೆತ್ತುವವರ ಕೆಲಸದಿಂದ ಮುದ್ರೆ ಕೆತ್ತುವ ಪ್ರಕಾರ ಆ ಎರಡು ಕಲ್ಲುಗಳನ್ನು ಇಸ್ರಾಯೇಲ್ ಮಕ್ಕಳ ಹೆಸರುಗಳಿಗನುಸಾರವಾಗಿ ಕೆತ್ತಿಸಿ ಅವುಗಳನ್ನು ಬಂಗಾ ರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು.
- Proverbs 31:10 ಜ್ಞಾನೋಕ್ತಿಗಳು 31:10ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.