Exodus · chapter 31 · verse 2
Exodus 31:2 in Kannada
ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆಗಿರುವ ಬೆಚಲೇಲನನ್ನು ಹೆಸರು ಹೇಳಿ ಕರೆದಿದ್ದೇನೆ.
Nodu, naanu yehooda kuladavanaada hoorana mommaganoo ooriyana maganoo aagiruva bechalelanannu hesaru heli karediddene.
Exodus 31:2 in English
- King James Version (KJV)
- See, I have called by name Bezaleel the son of Uri, the son of Hur, of the tribe of Judah:
- World English Bible (WEB)
- “Behold, I have called by name Bezalel the son of Uri, the son of Hur, of the tribe of Judah.
- American Standard Version (ASV)
- See, I have called by name Bezalel the son of Uri, the son of Hur, of the tribe of Judah:
- Bible in Basic English (BBE)
- I have made selection of Bezalel, the son of Uri, by name, the son of Hur, of the tribe of Judah:
- Darby Translation (DBY)
- See, I have called by name Bezaleel the son of Uri, the son of Hur, of the tribe of Judah,
- Webster's Bible (WBS)
- See, I have called by name Bezaleel the son of Uri, the son of Hur, of the tribe of Judah:
- Young's Literal Translation (YLT)
- 'See, I have called by name Bezaleel, son of Uri, son of Hur, of the tribe of Judah,
Read in context
- 1ಕರ್ತನು ಮೋಶೆಯ ಸಂಗಡ ಮಾತನಾಡಿಅವನಿಗೆ--
- 2ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆಗಿರುವ ಬೆಚಲೇಲನನ್ನು ಹೆಸರು ಹೇಳಿ ಕರೆದಿದ್ದೇನೆ.
- 3ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕ ದಿಂದಲೂ ಎಲ್ಲಾ ತರವಾದ ಕೆಲಸದ ಕಲೆಯಿಂದಲೂ ತುಂಬಿಸಿದ್ದೇನೆ.
- 4ಅವನು ಚಿನ್ನ ಬೆಳ್ಳಿ ಹಿತ್ತಾಳೆಯ ಕೌಶಲ್ಯದ ಕೆಲಸವನ್ನು ಕಲ್ಪಿಸುವದಕ್ಕೂ
Cross references
- John 3:27 ಯೋಹಾನನು 3:27ಯೋಹಾನನು ಪ್ರತ್ಯುತ್ತರವಾಗಿ--ಪರಲೋಕ ದಿಂದ ಒಬ್ಬ ಮನುಷ್ಯನಿಗೆ ಕೊಡಲ್ಪಡದ ಹೊರತು ಅವನು ಯಾವದನ್ನೂ ಹೊಂದಲಾರನು.
- Exodus 36:1 ವಿಮೋಚನಕಾಂಡ 36:1ತರುವಾಯ ಬೆಚಲೇಲನೂ ಒಹೋಲಿ ಯಾಬನೂ ಪರಿಶುದ್ಧ ಸ್ಥಳದ ಸೇವೆ ಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಯುವ ಹಾಗೆ ಕರ್ತನಿಂದ ಜ್ಞಾನ ವಿವೇಕಗಳನ್ನು ಹೊಂದಿದ ಹೃದಯದವರೆಲ್ಲರೂ ಕರ್ತನು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡಿ ದರು. ತರುವಾಯ ಪರಿಶುದ್ಧ ಸ್ಥಳದ ಸೇವೆಗೋಸ್ಕರ ಪ್ರತಿ ವಿಧವಾದ ಕೆಲಸ ಮಾಡುವದನ್ನು ತಿಳುಕೊಳ್ಳುವ ದಕ್ಕಾಗಿ ಆತನು ಜ್ಞಾನ ವಿವೇಕಗಳನ್ನು ಅನುಗ್ರಹಿಸಿದ ಬೆಚಲೇಲನೂ ಒಹೋಲಿಯಾಬನೂ ಜ್ಞಾನ ವಿವೇಕ ವಿದ್ದವರೆಲ್ಲರೂ ಎಲ್ಲವನ್ನೂ ಕರ್ತನು ಆಜ್ಞಾಪಿಸಿದಂತೆ ಮಾಡಿದರು.
- Exodus 35:30 ವಿಮೋಚನಕಾಂಡ 35:30ಆಗ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ--ನೋಡಿರಿ, ಕರ್ತನು ಯೂದ ಕುಲದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲ ನನ್ನು ಹೆಸರು ಹೇಳಿ ಕರೆದು
- Isaiah 45:3–4 ಯೆಶಾಯ 45:3–4ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು. ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ.
- Exodus 33:17 ವಿಮೋಚನಕಾಂಡ 33:17ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.
- Exodus 37:1 ವಿಮೋಚನಕಾಂಡ 37:1ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
- 1 Chronicles 2:19–20 1 ಪೂರ್ವಕಾಲವೃತ್ತಾಂತ 2:19–20ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು. ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲ ನನ್ನು ಪಡೆದನು.
- Exodus 33:12 ವಿಮೋಚನಕಾಂಡ 33:12ಆಗ ಮೋಶೆಯು ಕರ್ತನಿಗೆ--ನೋಡು, ನೀನು ಜನರನ್ನು ಕರೆದುಕೊಂಡು ಹೋಗು ಎಂದು ನನಗೆ ಹೇಳಿದ್ದೀ ಯಾರನ್ನು ನನ್ನ ಸಂಗಡ ಕಳುಹಿಸುವಿ ಎಂದು ನೀನು ನನಗೆ ತಿಳಿಸಲಿಲ್ಲ. ಆದಾಗ್ಯೂ ನೀನು--ನಾನು ನಿನ್ನ ಹೆಸರಿನ ಮೂಲಕ ನಿನ್ನನ್ನು ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆ ಯಿತು ಎಂದು ಹೇಳಿದ್ದೀಯಲ್ಲಾ.
- Mark 3:16–19 ಮಾರ್ಕನು 3:16–19ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು. ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ. ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ, ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.