Exodus · chapter 36 · verse 8
Exodus 36:8 in Kannada
ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು.
Heegiralaagi kelasadavaralli jnyaana hrudayavulla pratiyobbanoo gudaaravannu hattu teregalinda maadi hoseda naarinindaloo neeli, dhoomra, raktavarnada hoseda nayavaada noolinindaloo kaushalyada kelasadindaloo keroobigalannu maadi danu.
Exodus 36:8 in English
- King James Version (KJV)
- And every wise hearted man among them that wrought the work of the tabernacle made ten curtains [of] fine twined linen, and blue, and purple, and scarlet: [with] cherubims of cunning work made he them.
- World English Bible (WEB)
- All the wise-hearted men among those who did the work made the tabernacle with ten curtains of fine twined linen, blue, purple, and scarlet. They made them with cherubim, the work of a skillful workman.
- American Standard Version (ASV)
- And all the wise-hearted men among them that wrought the work made the tabernacle with ten curtains; of fine twined linen, and blue, and purple, and scarlet, with cherubim, the work of the skilful workman, [Bezalel] made them.
- Bible in Basic English (BBE)
- Then all the expert workmen among them made the House with its ten curtains; of the best linen, blue and purple and red, they made them, with winged ones worked by expert designers.
- Darby Translation (DBY)
- And every wise-hearted man among those that wrought the work of the tabernacle made ten curtains of twined byssus, and blue, and purple, and scarlet: [with] cherubim of artistic work did he make them.
- Webster's Bible (WBS)
- And every wise-hearted man among them that wrought the work of the tabernacle made ten curtains [of] fine twined linen, and blue, and purple, and scarlet: he made them [with] cherubim of curious work.
- Young's Literal Translation (YLT)
- And all the wise-hearted ones among the doers of the work make the tabernacle; ten curtains of twined linen, and blue, and purple, and scarlet, [with] cherubs, work of a designer, he hath made them.
Read in context
- 6ಆಗ ಮೋಶೆಯು ಇನ್ನು ಮೇಲೆ ಪರಿಶುದ್ಧ ಸ್ಥಳದ ಕಾಣಿಕೆ ಗೋಸ್ಕರ ಯಾವ ಗಂಡಸಾಗಲಿ ಹೆಂಗಸಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸ ಬೇಕೆಂಬದಾಗಿ ಆಜ್ಞಾಪಿಸಬೇಕು ಎಂದು ಹೇಳಿದನು. ಹೀಗೆ ಜನರು ತರುವದನ್ನು ನಿಲ್ಲಿಸಿಬಿಟ್ಟರು.
- 7ಅವರಿಗೆ ಎಲ್ಲಾ ಕೆಲಸವನ್ನು ಮಾಡುವದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಾನು ಇತ್ತು.
- 8ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು.
- 9ಒಂದು ತೆರೆಯು ಇಪ್ಪತ್ತೆಂಟು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ತೆರೆಗಳೆಲ್ಲಾ ಒಂದೇ ಅಳತೆಯವುಗಳಾಗಿದ್ದವು.
- 10ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು.
Cross references
- Ezekiel 1:5–28 ಯೆಹೆಜ್ಕೇಲನು 1:5–28ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರ ಟಿತು. ಅವುಗಳ ಆಕಾರವೇನಂದರೆ--ಅವುಗಳಿಗೆ ಮನುಷ್ಯನ ರೂಪವಿತ್ತು. ಪ್ರತಿಯೊಂದಕ್ಕೂ ನಾಲ್ಕು ಮುಖಗಳು ನಾಲ್ಕು ರೆಕ್ಕೆಗಳು ಇದ್ದವು. ಅವುಗಳ ಕಾಲುಗಳು ನೆಟ್ಟಗಿದ್ದವು; ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು ಹಿತ್ತಾಳೆಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು. ಅವುಗಳಿಗೆ ರೆಕ್ಕೆಗಳ ಕೆಳಗೆ ಅವುಗಳ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು; ಮತ್ತು ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು. ಅವುಗಳ ರೆಕ್ಕೆಗಳು ಒಂದಕ್ಕೊಂದು ಜೋಡಿಸಲ್ಪಟ್ಟು ಅವು ಹೋಗುವಾಗ ತಿರುಗಿಕೊಳ್ಳದೆ ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು. ಅವು ಗಳ ಮುಖಗಳ ರೂಪದ ಪ್ರಕಾರ ಅವು ನಾಲ್ಕು ಜೀವಿಗಳು ಮನುಷ್ಯನ ರೂಪದ ಮುಖವನ್ನು ಹೊಂದಿದ್ದವು; ಬಲಗಡೆಯಲ್ಲಿ ಸಿಂಹದ ಮುಖವೂ ಎಡಗಡೆ ಯಲ್ಲಿ ಎತ್ತಿನ ಮುಖವೂ ಆ ನಾಲ್ಕಕ್ಕೆ ಹದ್ದಿನ ಮುಖವೂ ಇತ್ತು. ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು. ಅವು ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು; ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಹೋದವು; ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ. ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು. ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು. ಆಗ ನಾನು ಆ ಜೀವಿಗಳನ್ನು ನೋಡಲಾಗಿ ಇಗೋ, ಜೀವಿಗಳಿಂದ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖಗಳುಳ್ಳದ್ದಾಗಿ ರುವದನ್ನು ನೋಡಿದೆನು. ಆ ಚಕ್ರಗಳ ಆಕಾರವೂ ಅವುಗಳ ಕೆಲಸವೂ ಪೀತರತ್ನ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ರೂಪವಿದ್ದು ಅವುಗಳ ಆಕಾರವೂ ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು. ಅವು ಹೋಗುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು, ಅವು ಹೋಗುವಾಗ ಹಿಂತಿರುಗಲಿಲ್ಲ. ಅವುಗಳ ಚಕ್ರಗಳು ಎತ್ತರವಾ ಗಿಯೂ ಭಯಂಕರ ವಾಗಿಯೂ ಇದ್ದವು; ಆ ನಾಲ್ಕು ಚಕ್ರಗಳ ಸುತ್ತಲೂ ಕಣ್ಣುಗಳಿದ್ದವು. ಆ ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಮೇಲಕ್ಕೆ ಎತ್ತಲ್ಪಟ್ಟವು. ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಅವುಗಳು ಹೋದವು; ಆ ಸ್ಥಳಕ್ಕೆ ಅವುಗಳ ಆತ್ಮವು ಹೋಗಬೇಕೆಂದಿತ್ತು; ಚಕ್ರಗಳು ಸಹ ಅವುಗಳಿಗೆದು ರಾಗಿ ಮೇಲಕ್ಕೆ ಎತ್ತಲ್ಪ ಟ್ಟವು; ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು. ಅವುಗಳು ಹೋಗುವಾಗ ಇವುಗಳೂ ಹೋದವು; ಅವುಗಳು ನಿಲ್ಲುವಾಗ ಇವುಗಳೂ ನಿಂತವು; ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಅವುಗಳ ಸಂಗಡ ಎತ್ತಲ್ಪಟ್ಟವು; ಆ ಜೀವಿಯ ಆತ್ಮನು ಆ ಚಕ್ರಗಳಲ್ಲಿ ಇತ್ತು. ಜೀವಿಯ ತಲೆಗಳ ಮೇಲೆ ಗಗನಮಂಡಲ ವಿಶಾಲ ರೂಪವು ಭೀಕರ ವಜ್ರದ ಬಣ್ಣದ್ದಾಗಿತ್ತು; ಅದು ಅವುಗಳ ತಲೆಗಳ ಮೇಲೆ ಹರ ಡಿತ್ತು (ಹಾಸಲ್ಪಟ್ಟಿತ್ತು). ಆ ಗಗನಮಂಡಲದ (ರೂಪದ) ಕೆಳಗೆ ಅವುಗಳ ರೆಕ್ಕೆಗಳು ನೆಟ್ಟಗೆ (ನೇರ ವಾಗಿ) ಒಂದಕ್ಕೊಂದು ಸರಿಯಾಗಿದ್ದವು; ಅವುಗಳ ಶರೀರಗಳನ್ನು ಮುಚ್ಚಿಕೊಳ್ಳುವ ಎರಡೆರೆಡು ರೆಕ್ಕೆಗಳು ಎರಡು ಕಡೆಗಳಲ್ಲೂ ಇರುವ ಪ್ರತಿಯೊಂದನ್ನು ಮುಚ್ಚಿ ಕೊಂಡಿದ್ದವು. ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು. ಅವುಗಳು ನಿಂತು ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ ಅವುಗಳ ತಲೆಗಳ ಮೇಲಿರುವ ಗಗನಮಂಡಲದೊಳಗಿಂದ ಒಂದು ಶಬ್ದವಾಯಿತು. ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು. ಆತನ ನಡುವು ಕಾಣಿಸುವಂತೆ ಮೇಲೆಯೂ ಒಳಗೂ ಸುತ್ತಲೂ ಬೆಂಕಿಯಂತೆ ಇರುವ ಸುಂದರವಾದ ಒಂದು ಬಣ್ಣದ ರೂಪವು ಇರುವದನ್ನು ನಾನು ನೋಡಿದೆನು; ಆತನ ನಡುವು ಕಾಣಿಸುವಂತೆ ಕೆಳಗೆ ಬೆಂಕಿಯ ಹಾಗೆ ಅದರ ಸುತ್ತಲೂ ಪ್ರಕಾಶವಿರುವದನ್ನು ನೋಡಿದೆನು.ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು. ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.
- Exodus 25:18 ವಿಮೋಚನಕಾಂಡ 25:18ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು.
- 1 Kings 6:23 1 ಅರಸುಗಳು 6:23ಅವನು ದೈವೋಕ್ತಿಯ ಸ್ಥಾನದಲ್ಲಿ ಇಪ್ಪೇ ಮರಗಳಿಂದ ಎರಡು ಕೆರೂಬಿಗಳನ್ನು ಮಾಡಿದನು. ಒಂದೊಂದು ಹತ್ತು ಮೊಳ ಎತ್ತರವಾಗಿತ್ತು.
- Exodus 25:22 ವಿಮೋಚನಕಾಂಡ 25:22ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.
- Ezekiel 10:1–19 ಯೆಹೆಜ್ಕೇಲನು 10:1–19ಆಗ ನಾನು ನೋಡಲಾಗಿ ಇಗೋ,ಕೆರೂಬಿಯರ ತಲೆಯ ಮೇಲಿದ್ದ ವಿಶಾಲ ವಾದ ಆಕಾಶದಲ್ಲಿ ಅವರ ಮೇಲೆ ನೀಲಮಣಿಯಂತೆ ಸಿಂಹಾಸನಾಕಾರದಂತಿರುವ ರೂಪವು ತೋರಿತು. ಆತನು ನಾರುಮಡಿಯನ್ನು ಧರಿಸಿ ಕೊಂಡಿದ್ದ ಮನುಷ್ಯನಿಗೆ ಹೇಳಿದ್ದೇನಂದರೆ--ನೀನು ಕೆರೂಬಿಗಳ ಕೆಳಗೆ ಇರುವ ಚಕ್ರಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ನಡುವೆ ಇರುವ ಉರಿಕೆಂಡಗಳ ತಳದಲಿ ನಿನ್ನ ಕೈತುಂಬ ಎತ್ತಿ ಅದನ್ನು ಪಟ್ಟಣದ ಮೇಲೆ ಚೆಲ್ಲು ಅಂದನು. ಹಾಗೆಯೇ ನಾನು ಕಂಡಂತೆ ಒಳಗೆ ಪ್ರವೇಶಿಸಿದನು. ಆ ಮನುಷ್ಯನು ಒಳಗೆ ಹೋಗು ವಾಗ ಕೆರೂಬಿಯರು ಆಲಯದ ಬಳಿಯಲ್ಲಿ ನಿಂತಿ ದ್ದರು. ಮೇಘವು ಒಳಗಿನ ಅಂಗಳವನ್ನು ತುಂಬಿಸಿ ಕೊಂಡಿತ್ತು. ಆಗ ಕರ್ತನ ಮಹಿಮೆಯು ಕೆರೂಬಿಗಳನ್ನು ಬಿಟ್ಟು ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಲ್ಲಿ ನಿಂತಿತು, ಆಲಯವು ಮೇಘದಿಂದ ತುಂಬಿತ್ತು. ಆಗ ಕರ್ತನ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು. ಕೆರೂಬಿಗಳ ರೆಕ್ಕೆಗಳ ಶಬ್ದವು ಮಾತನಾಡುವ ಸರ್ವಶಕ್ತನ ದೇವರ ಹಾಗೆ ಹೊರಗಣ ಅಂಗಳದ ವರೆಗೂ ಕೇಳಿಬಂತು. ಆತನು ನಾರು ಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ--ಚಕ್ರಗಳ ಮಧ್ಯದಿಂದಲೂ ಕೆರೂಬಿಯರ ಮಧ್ಯದಿಂದಲೂ ಬೆಂಕಿ ಯನ್ನು ತೆಗೆದುಕೊಳ್ಳಲು ಆಜ್ಞಾಪಿಸಿದನು. ಅವನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು. ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಕೆರೂಬಿಯರ ಮಧ್ಯದೊಳಗಿರುವ ಬೆಂಕಿಗೆ ಚಾಚಿ, ತಕ್ಕೊಂಡು ನಾರುಮಡಿಯನ್ನು ಧರಿಸಿಕೊಂಡಿ ದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು. ಕೆರೂಬಿಯರಲ್ಲಿ ಅವರ ರೆಕ್ಕೆ ಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು. ನಾನು ನೋಡಿದಾಗ ಇಗೋ, ಒಬ್ಬೊಬ್ಬ ಕೆರೂ ಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ವರ್ಣವು ಪೀತರತ್ನದ ಹಾಗೆ ಇತ್ತು. ಅವುಗಳ ಆಕಾರವು ನಾಲ್ಕಕ್ಕೂ ಒಂದೇ ರೂಪ ವಿತ್ತು; ಚಕ್ರದಲ್ಲಿ ಚಕ್ರವು ಇದ್ದ ಹಾಗೆ ಇದ್ದವು. ಅವು ಹೋಗುತ್ತಿರುವಾಗ ಅವುಗಳು ನಾಲ್ಕು ಕಡೆಗಳಲ್ಲೂ ಹೋಗುತ್ತಿದ್ದವು. ಹೋಗುವಾಗ ತಿರುಗಿ ಕೊಳ್ಳಲಿಲ್ಲ. ಆದರೆ ಅವುಗಳ ತಲೆ ಯಾವ ಸ್ಥಳವನ್ನು ನೋಡುತ್ತಿತ್ತೋ ಅಲ್ಲಿಗೆ ಅದರ ಹಿಂದೆಯೇ ಹೋದವು, ಹೋಗುವಾಗ ತಿರುಗಲಿಲ್ಲ. ಅವುಗಳ ಪೂರ್ತಿ ದೇಹವು, ಬೆನ್ನುಗಳು, ಕೈಗಳು, ರೆಕ್ಕೆಗಳು, ಮತ್ತು ಚಕ್ರಗಳು, ಇವುಗಳಿಗೆ ಸುತ್ತಲೂ ಕಣ್ಣುಗಳು ಇದ್ದವು. ಅಲ್ಲಿ ನಾಲ್ಕೂ ಚಕ್ರಗಳ ಮೇಲೂ ಇದ್ದವು. ಚಕ್ರಗಳೋ ಅವುಗಳಿಗೆ ನಾನು ಕೇಳುವ ಹಾಗೆ ಓ ಚಕ್ರಗಳೇ ಎಂದು ಕೂಗಲ್ಪಟ್ಟಿತು. ಒಬ್ಬೊಬ್ಬ ನಿಗೆ ನಾಲ್ಕು ಮುಖಗಳಿದ್ದವು, ಮೊದಲನೆಯ ಮುಖವು ಕೆರೂಬಿಯನ ಮುಖ, ಎರಡನೆಯ ಮುಖವು ಮನು ಷ್ಯನ ಮುಖ ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು. ಆಗ ಕೆರೂಬಿಯರು ಮೇಲಕ್ಕೆತ್ತಲ್ಪಟ್ಟರು. ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಜೀವಿಯು ಇದೇ. ಕೆರೂಬಿಯರು ಹೋದಾಗ, ಚಕ್ರಗಳು ಅವರ ಸಂಗಡ ಹೋದವು. ಕೆರೂಬಿಯರು ಭೂಮಿಯನ್ನು ಬಿಟ್ಟು ಮೇಲೇರುವಾಗ ತಮ್ಮ ರೆಕ್ಕೆಗಳನ್ನು ಚಾಚಿದಾಗ, ಅವರ ಚಕ್ರಗಳು ಪಕ್ಕಕ್ಕೆ ತಿರುಗಲಿಲ್ಲ. ಅವು ನಿಂತಾಗ ಇವೂ ನಿಂತವು. ಅವು ಎತ್ತಲ್ಪಟ್ಟಾಗ ಇವೂ ಅವುಗಳ ಸಂಗಡ ಎತ್ತಲ್ಪಟ್ಟವು; ಯಾಕಂದರೆ ಇವುಗಳಲ್ಲಿ ಆ ಜೀವಿಗಳ ಆತ್ಮವು ಇತ್ತು. ಆಗ ಕರ್ತನ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು. ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿ ಕೊಂಡು ನಾನು ನೋಡುವಾಗಲೇ ಭೂಮಿಯನ್ನು ಬಿಟ್ಟು ಮೇಲೆಕ್ಕೇರಿ ಹೋದರು. ಅವು ಹೊರಟಾಗ ಚಕ್ರಗಳೂ ಅವರ ಸಂಗಡ ಇದ್ದವು, ಅವರು ಕರ್ತನ ಆಲಯದ ಮೂಡಣ ಬಾಗಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಮತ್ತು ಇಸ್ರಾಯೇಲಿನ ದೇವರ ಮಹಿ ಮೆಯು ಅವರ ಮೇಲೆ ಇತ್ತು.
- Exodus 31:6 ವಿಮೋಚನಕಾಂಡ 31:6ನಾನು ಇಗೋ, ನಾನೇ ಅವನೊಂದಿಗೆ ದಾನ್ ಕುಲದವನೂ ಅಹೀಸಾ ಮಾಕನ ಮಗನೂ ಆದ ಒಹೊಲೀಯಾಬನನ್ನು ಕೊಟ್ಟಿ ದ್ದೇನೆ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವ ದಕ್ಕೆ ಜಾಣನಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನು ಇಟ್ಟಿದ್ದೇನೆ.
- Exodus 26:1–37 ವಿಮೋಚನಕಾಂಡ 26:1–37ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು. ಒಂದು ತೆರೆಯ ಉದ್ದವು ಇಪ್ಪತ್ತೆಂಟು ಮೊಳ, ಅದರ ಅಗಲವು ನಾಲ್ಕು ಮೊಳ ವಾಗಿರಬೇಕು ಪ್ರತಿಯೊಂದು ತೆರೆಯು ಒಂದೇ ಅಳತೆ ಯುಳ್ಳದ್ದಾಗಿರಬೇಕು. ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು. ಒಂದು ತೆರೆಯ ಅಂಚಿನ ಕೊನೆಗೆ ಜೋಡಿಸುವ ಸ್ಥಳದಲ್ಲಿ ನೀಲಿ ನೂಲಿನ ಕುಣಿಕೆಗಳನ್ನು ಮಾಡಿ ಎರಡನೇ ಜೋಡನೆಯ ಕಡೇ ತೆರೆಯ ಕೊನೆಯಲ್ಲಿಯೂ ಹಾಗೆಯೇ ಮಾಡಬೇಕು. ಒಂದು ತೆರೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ತೆರೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಸರಿ ಯಾಗಿ ಹಿಡುಕೊಳ್ಳುವವುಗಳಾಗಿರಬೇಕು. ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ ಅವುಗಳಿಂದ ತೆರೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗುವದು. ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸು ವದಕ್ಕಾಗಿ ಮೇಕೆ ಕೂದಲಿನಿಂದ ಹನ್ನೊಂದು ತೆರೆಗಳನ್ನು ಮಾಡಬೇಕು. ಒಂದು ತೆರೆಯ ಉದ್ದವು ಮೂವತ್ತು ಮೊಳ, ಅದರ ಅಗಲವು ನಾಲ್ಕು ಮೊಳ, ಹನ್ನೊಂದು ತೆರೆಗಳಿಗೂ ಅದೇ ಅಳತೆ ಇರಬೇಕು. ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿ ಆರನೆಯ ತೆರೆಯನ್ನು ಗುಡಾರದ ಮುಂಭಾಗ ದಲ್ಲಿ ಇಮ್ಮಡಿ ಮಾಡಬೇಕು. ಜೋಡಿಸುವಾಗ ಕಡೇ ಒಂದು ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಜೋಡಣೆಯಲ್ಲಿರುವ ಎರಡನೇ ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಬೇಕು. ಇದಲ್ಲದೆ ಹಿತ್ತಾಳೆಯ ಐವತ್ತು ಕೊಂಡಿಗಳನ್ನು ಮಾಡಿ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಗುಡಾರವು ಒಂದಾಗುವ ಹಾಗೆ ಜೋಡಿಸಬೇಕು. ಗುಡಾರದ ತೆರೆಗಳಲ್ಲಿ ಮಿಕ್ಕಿ ಉಳಿದ ಅರ್ಧ ತೆರೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ. ಗುಡಾರದ ತೆರೆಗಳ ಉದ್ದದಲ್ಲಿ ಆಚೆ ಈಚೆ ಮಿಕ್ಕಿದ ಒಂದು ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವದಕ್ಕಾಗಿ ತೂಗಾಡಲಿ. ಕೆಂಪು ಬಣ್ಣದ ಟಗರಿನ ಚರ್ಮಗಳಿಂದ ಗುಡಾರಕ್ಕೆ ಹೊದಿಕೆಯನ್ನೂ ಕಡಲು ಹಂದಿಯ ಚರ್ಮ ಗಳಿಂದ ಮೇಲು ಹೊದಿಕೆಯನ್ನೂ ಮಾಡಬೇಕು. ಗುಡಾರಕ್ಕೆ ಜಾಲೀ ಮರದಿಂದ ನಿಲ್ಲುವ ಹಲಿಗೆ ಗಳನ್ನು ಮಾಡಬೇಕು. ಹಲಿಗೆಯ ಉದ್ದವು ಹತ್ತು ಮೊಳ, ಅದರ ಅಗಲ ಒಂದುವರೆ ಮೊಳ ಇರಬೇಕು. ಒಂದು ಹಲಗೆಗೆ ಎರಡು ಕೂರುಗಳು ಇರಬೇಕು. ಅವುಗಳನ್ನು ಕ್ರಮವಾಗಿ ಇರಿಸುವಂತೆ ಅವು ಎದುರು ಬದುರಾಗಿ ಇರಬೇಕು. ಹೀಗೆ ಗುಡಾರದ ಎಲ್ಲಾ ಹಲಗೆ ಗಳಿಗೂ ನೀನು ಮಾಡಬೇಕು. ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು. ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು. ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು. ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು. ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು. ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು. ಜಾಲೀ ಮರದಿಂದ ಅಗುಳಿಗಳನ್ನೂ ಮಾಡಬೇಕು. ಗುಡಾರದ ಒಂದು ಪಾರ್ಶ್ವದ ಹಲಗೆಗಳಿಗೆ ಐದು ಗುಡಾರದ ಇನ್ನೊಂದು ಪಾರ್ಶ್ವದ ಹಲಗೆಗಳಿಗೆ ಐದು ಅಗುಳಿ ಗಳನ್ನೂ ಗುಡಾರ ಹಿಂಭಾಗದ ಪಶ್ಚಿಮದ ಎರಡು ಕಡೆಗಳಲ್ಲಿ ಇರುವ ಹಲಗೆಗಳಿಗೆ ಐದು ಅಗುಳಿಗಳನ್ನೂ ಮಾಡಬೇಕು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ಮುಟ್ಟಿರಬೇಕು. ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು. ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು. ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು. ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು. ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು. ಅತಿಪರಿಶುದ್ಧ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮಂಜೂಷದ ಮೇಲೆ ಕರುಣಾಸನ ವನ್ನು ಇಡಬೇಕು. ತೆರೆಯ ಹೊರಗೆ ಮೇಜನ್ನು ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಡಬೇಕು. ಉತ್ತರ ಭಾಗದಲ್ಲಿ ಮೇಜನ್ನು ಇಡಬೇಕು. ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು. ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.
- 2 Chronicles 3:10 2 ಪೂರ್ವಕಾಲವೃತ್ತಾಂತ 3:10ಅತಿಪರಿಶುದ್ಧವಾದ ಆಲಯದಲ್ಲಿ ವಿಚಿತ್ರ ಕೆಲಸವಾದ ಎರಡು ಕೆರೂಬಿಗಳ ಪ್ರತಿಮೆ ಗಳನ್ನು ಮಾಡಿಸಿ ಬಂಗಾರದಿಂದ ಹೊದಿಸಿದನು.
- Exodus 35:10 ವಿಮೋಚನಕಾಂಡ 35:10ನಿಮ್ಮಲ್ಲಿ ಜ್ಞಾನದ ಹೃದಯವುಳ್ಳವರೆಲ್ಲರೂ ಬಂದು ಕರ್ತನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಲಿ.
- 1 Chronicles 15:1 1 ಪೂರ್ವಕಾಲವೃತ್ತಾಂತ 15:1ಇದಲ್ಲದೆ ದಾವೀದನ ಪಟ್ಟಣದಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿ ಕೊಂಡು ದೇವರ ಮಂಜೂಷಕ್ಕೋಸ್ಕರ ಸ್ಥಳವನ್ನು ಸಿದ್ಧಮಾಡಿ ಅದರ ನಿಮಿತ್ತ ಗುಡಾರ ಹಾಕಿಸಿದನು.
Original words (Hebrew)
- wise · H2450חָכָם châkâm
- man · H3820לֵב lêb
- wrought · H6213עָשָׂה ʻâsâh
- work · H4399מְלָאכָה mᵉlâʼkâh
- tabernacle · H4908מִשְׁכָּן mishkân
- made · H6213עָשָׂה ʻâsâh
- ten · H6235עֶשֶׂר ʻeser
- curtains · H3407יְרִיעָה yᵉrîyʻâh
- twined · H7806שָׁזַר shâzar
- linen · H8336שֵׁשׁ shêsh
- blue · H8504תְּכֵלֶת tᵉkêleth
- purple · H713אַרְגָּמָן ʼargâmân
- scarlet · H8144שָׁנִי shânîy
- cherubims · H3742כְּרוּב kᵉrûwb
- cunning · H2803חָשַׁב châshab
- work · H4639מַעֲשֶׂה maʻăseh
- made · H6213עָשָׂה ʻâsâh