Exodus · chapter 40 · verse 18
Exodus 40:18 in Kannada
ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ ಅದರ ಕಾಲುಗಳನ್ನು ಬಿಗಿದು ಅದರ ಹಲಗೆಗಳನ್ನು ಇರಿಸಿ ಅಗುಳಿಗಳನ್ನು ಹಾಕಿ ಅದರ ಸ್ತಂಭಗಳನ್ನು ನಿಲ್ಲಿಸಿದನು.
Aaga mosheyu gudaaravannu nillisi adara kaalugalannu bigidu adara halagegalannu irisi aguligalannu haaki adara stambhagalannu nillisidanu.
Exodus 40:18 in English
- King James Version (KJV)
- And Moses reared up the tabernacle, and fastened his sockets, and set up the boards thereof, and put in the bars thereof, and reared up his pillars.
- World English Bible (WEB)
- Moses raised up the tabernacle, and laid its sockets, and set up its boards, and put in its bars, and raised up its pillars.
- American Standard Version (ASV)
- And Moses reared up the tabernacle, and laid its sockets, and set up the boards thereof, and put in the bars thereof, and reared up its pillars.
- Bible in Basic English (BBE)
- Moses put up the House; placing its bases in position and lifting up its uprights, putting in the rods and planting the pillars in their places;
- Darby Translation (DBY)
- And Moses set up the tabernacle, and put in its bases, and fixed its boards, and put in its bars, and set up its pillars.
- Webster's Bible (WBS)
- And Moses reared up the tabernacle, and fastened its sockets, and set up its boards, and put in its bars, and reared up its pillars.
- Young's Literal Translation (YLT)
- and Moses raiseth up the tabernacle, and setteth its sockets, and placeth its boards, and placeth its bars, and raiseth its pillars,
Read in context
- 16ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
- 17ಎರಡನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಗುಡಾರವು ನಿಲ್ಲಿಸಲ್ಪಟ್ಟಿತು.
- 18ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ ಅದರ ಕಾಲುಗಳನ್ನು ಬಿಗಿದು ಅದರ ಹಲಗೆಗಳನ್ನು ಇರಿಸಿ ಅಗುಳಿಗಳನ್ನು ಹಾಕಿ ಅದರ ಸ್ತಂಭಗಳನ್ನು ನಿಲ್ಲಿಸಿದನು.
- 19ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.
- 20ಅವನು ಪ್ರಮಾಣವನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿ ಇಟ್ಟು ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ ಮಂಜೂಷದ ಮೇಲೆ ಕರುಣಾ ಸನವನ್ನು ಇಟ್ಟನು.
Cross references
- Leviticus 26:11 ಯಾಜಕಕಾಂಡ 26:11ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು.
- Matthew 16:18 ಮತ್ತಾಯನು 16:18ನಾನು ಸಹ ನಿನಗೆ ಹೇಳುವದೇ ನಂದರೆ--ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
- Ezekiel 37:27–28 ಯೆಹೆಜ್ಕೇಲನು 37:27–28ನನ್ನ ಗುಡಾರವು ಸಹ ಅವರೊಂದಿಗಿರುವದು; ಹೌದು, ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು. ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.
- Exodus 36:20–34 ವಿಮೋಚನಕಾಂಡ 36:20–34ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು. ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು. ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು. ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು. ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು. ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು. ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು. ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು. ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು. ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು. ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಹಾದು ಹೋಗುವ ಹಾಗೆ ಮಾಡಿದನು. ಆ ಹಲಗೆಗಳನ್ನು ಚಿನ್ನದಿಂದ ಹೊದಿಸಿ ಅಗುಳಿಗಳಿಗೆ ಬಳೆಗಳಾಗಿರುವ ಉಂಗುರಗಳನ್ನು ಚಿನ್ನದಿಂದ ಮಾಡಿ ಅಗುಳಿಗಳನ್ನು ಚಿನ್ನದಿಂದ ಹೊದಿಸಿದನು.
- 1 Peter 1:5 1 ಪೇತ್ರನು 1:5ಅಂತ್ಯ ಕಾಲದಲ್ಲಿ ಪ್ರಕಟವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ನಂಬಿಕೆಯ ಮುಖಾಂತರ ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.
- Revelation 21:3 ಪ್ರಕಟನೆ 21:3ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
- 1 Timothy 3:15 1 ತಿಮೊಥೆಯನಿಗೆ 3:15ಆದರೆ ಒಂದು ವೇಳೆ ನಾನು ತಡಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಬೇಕು.ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ
- Exodus 40:2 ವಿಮೋಚನಕಾಂಡ 40:2ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.
- Exodus 26:15–30 ವಿಮೋಚನಕಾಂಡ 26:15–30ಗುಡಾರಕ್ಕೆ ಜಾಲೀ ಮರದಿಂದ ನಿಲ್ಲುವ ಹಲಿಗೆ ಗಳನ್ನು ಮಾಡಬೇಕು. ಹಲಿಗೆಯ ಉದ್ದವು ಹತ್ತು ಮೊಳ, ಅದರ ಅಗಲ ಒಂದುವರೆ ಮೊಳ ಇರಬೇಕು. ಒಂದು ಹಲಗೆಗೆ ಎರಡು ಕೂರುಗಳು ಇರಬೇಕು. ಅವುಗಳನ್ನು ಕ್ರಮವಾಗಿ ಇರಿಸುವಂತೆ ಅವು ಎದುರು ಬದುರಾಗಿ ಇರಬೇಕು. ಹೀಗೆ ಗುಡಾರದ ಎಲ್ಲಾ ಹಲಗೆ ಗಳಿಗೂ ನೀನು ಮಾಡಬೇಕು. ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು. ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು. ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು. ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು. ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು. ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು. ಜಾಲೀ ಮರದಿಂದ ಅಗುಳಿಗಳನ್ನೂ ಮಾಡಬೇಕು. ಗುಡಾರದ ಒಂದು ಪಾರ್ಶ್ವದ ಹಲಗೆಗಳಿಗೆ ಐದು ಗುಡಾರದ ಇನ್ನೊಂದು ಪಾರ್ಶ್ವದ ಹಲಗೆಗಳಿಗೆ ಐದು ಅಗುಳಿ ಗಳನ್ನೂ ಗುಡಾರ ಹಿಂಭಾಗದ ಪಶ್ಚಿಮದ ಎರಡು ಕಡೆಗಳಲ್ಲಿ ಇರುವ ಹಲಗೆಗಳಿಗೆ ಐದು ಅಗುಳಿಗಳನ್ನೂ ಮಾಡಬೇಕು. ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ಮುಟ್ಟಿರಬೇಕು. ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು. ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು.
- Isaiah 33:24 ಯೆಶಾಯ 33:24ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಅಕ್ರಮವು ಕ್ಷಮಿಸಲ್ಪಡುವದು.
- Galatians 4:4 ಗಲಾತ್ಯದವರಿಗೆ 4:4ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
- John 1:14 ಯೋಹಾನನು 1:14ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).