Exodus · chapter 40 · verse 4
Exodus 40:4 in Kannada
ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪ ಸ್ತಂಭವನ್ನು ಒಳಗೆ ತಂದು ನೀನು ಅದರ ದೀಪಗಳನ್ನು ಅಂಟಿಸಬೇಕು.
Mejannu olage tandu adara melidabekaadaddannu sariyaagi idabeku. Deepa stambhavannu olage tandu neenu adara deepagalannu antisabeku.
Exodus 40:4 in English
- King James Version (KJV)
- And thou shalt bring in the table, and set in order the things that are to be set in order upon it; and thou shalt bring in the candlestick, and light the lamps thereof.
- World English Bible (WEB)
- You shall bring in the table, and set in order the things that are on it. You shall bring in the lamp stand, and light its lamps.
- American Standard Version (ASV)
- And thou shalt bring in the table, and set in order the things that are upon it; and thou shalt bring in the candlestick, and light the lamps thereof.
- Bible in Basic English (BBE)
- And put the table inside, placing all the things on it in order; and put in the support for the lights, and let its lights be burning.
- Darby Translation (DBY)
- And thou shalt bring in the table, and set in order the things that are to be set in order upon it. And thou shalt bring in the candlestick and light its lamps.
- Webster's Bible (WBS)
- And thou shalt bring in the table, and set in order the things that are to be set in order upon it; and thou shalt bring in the candlestick, and light its lamps.
- Young's Literal Translation (YLT)
- and hast brought in the table, and set its arrangement in order, and hast brought in the candlestick, and caused its lamps to go up.
Read in context
- 2ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.
- 3ಮಂಜೂಷದ ಸಾಕ್ಷಿಯ ಪೆಟ್ಟಿಗೆಯನ್ನು ಒಳಗಿಟ್ಟು ಅದನ್ನು ನೀನು ತೆರೆಯಿಂದ ಮುಚ್ಚಬೇಕು.
- 4ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪ ಸ್ತಂಭವನ್ನು ಒಳಗೆ ತಂದು ನೀನು ಅದರ ದೀಪಗಳನ್ನು ಅಂಟಿಸಬೇಕು.
- 5ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು.
- 6ನೀನು ದಹನಬಲಿಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡ ಬೇಕು.
Cross references
- Leviticus 24:8 ಯಾಜಕಕಾಂಡ 24:8ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.
- Exodus 25:23–39 ವಿಮೋಚನಕಾಂಡ 25:23–39ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು. ಶುದ್ಧ ಬಂಗಾರದಿಂದ ಅದನ್ನು ಹೊದಿಸಿ ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು. ಅದರ ಸುತ್ತಲೂ ಗೇಣುದ್ದ ಅಂಚನ್ನು ಮಾಡಿ ಅಂಚಿನ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು. ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು. ಅಂಚಿಗೆ ಸವಿಾಪವಾಗಿ ಮೇಜನ್ನು ಹೊರುವದಕ್ಕೋಸ್ಕರ ಇರುವ ಕೋಲುಗಳಿಗೆ ಬಳೆಗಳು ಇರಬೇಕು. ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು. ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು. ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು. ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು. ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು. ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು. ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು. ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು. ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು. ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು. ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
- Exodus 26:35–36 ವಿಮೋಚನಕಾಂಡ 26:35–36ತೆರೆಯ ಹೊರಗೆ ಮೇಜನ್ನು ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಡಬೇಕು. ಉತ್ತರ ಭಾಗದಲ್ಲಿ ಮೇಜನ್ನು ಇಡಬೇಕು. ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.
- Exodus 37:10–24 ವಿಮೋಚನಕಾಂಡ 37:10–24ಅವನು ಜಾಲೀ ಮರದಿಂದ ಒಂದು ಮೇಜನ್ನು ಮಾಡಿದನು; ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು. ಅವನು ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿ ಅದರ ಸುತ್ತಲೂ ಚಿನ್ನದ ಕೀರೀಟವನ್ನು ಮಾಡಿದನು. ಅವನು ಅದರ ಸುತ್ತಲೂ ಗೇಣಗಲವಾದ ಅಂಚನ್ನು ಮಾಡಿದನು; ಆ ಅಂಚಿನ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು. ಅವನು ಅದಕ್ಕೆ ನಾಲ್ಕು ಚಿನ್ನದ ಉಂಗುರಗಳನ್ನು ಎರಕಹೊಯ್ದು ಆ ಉಂಗುರಗಳನ್ನು ಅದರ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿಟ್ಟನು. ಮೇಜನ್ನು ಹೊರುವದಕ್ಕೆ ಕೋಲನ್ನು ಸಿಕ್ಕಿಸುವ ಸ್ಥಳಗಳಲ್ಲಿ ಆ ಉಂಗುರಗಳು ಮೇಜಿನ ಅಂಚಿನ ಮೇಲಿದ್ದವು. ಮೇಜನ್ನು ಹೊರು ವದಕ್ಕೆ ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು. ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು. ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು. ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು. ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು. ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು. ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು. ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು. ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು. ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.
- Exodus 40:22–25 ವಿಮೋಚನಕಾಂಡ 40:22–25ಸಭೆ ಡೇರೆಯ ಗುಡಾರದ ಉತ್ತರ ಭಾಗದಲ್ಲಿ ತೆರೆಯ ಹೊರಗೆ ಮೇಜನ್ನು ಇಟ್ಟನು. ರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿ ಯನ್ನು ಕರ್ತನ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು. ಸಭೆಯ ಡೇರೆಯಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಕರ್ತನ ಸನ್ನಿಧಿಯಲ್ಲಿ ದೀಪಗಳನ್ನು ಹತ್ತಿಸಿದನು.
- Leviticus 24:5–6 ಯಾಜಕಕಾಂಡ 24:5–6ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು. ಅವುಗಳನ್ನು ಶುದ್ಧವಾದ ಮೇಜಿನ ಮೇಲೆ ಕರ್ತನ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ ಎರಡು ಸಾಲುಗಳನ್ನಾಗಿ ಇಡಬೇಕು.