Ezekiel · chapter 11 · verse 21
Ezekiel 11:21 in Kannada
ಆದರೆ ಯಾರ ಹೃದಯವು ಅವರ ಹೇಸಿಗೆಗಳ ಮತ್ತು ಅವರ ಅಸಹ್ಯಗಳ ಹೃದಯದ ಬಳಿಗೆ ಹೋಗುತ್ತದೋ, ನಾನು ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
Aadare yaara hrudayavu avara hesigegala mattu avara asahyagala hrudayada balige hoguttado, naanu avara maargavannu avara talegala mele muyyi teerisuttene endu devaraada kartanu heluttaane.
Ezekiel 11:21 in English
- King James Version (KJV)
- But [as for them] whose heart walketh after the heart of their detestable things and their abominations, I will recompense their way upon their own heads, saith the Lord GOD.
- World English Bible (WEB)
- But as for them whose heart walks after the heart of their detestable things and their abominations, I will bring their way on their own heads,’ says the Lord GOD.”
- American Standard Version (ASV)
- But as for them whose heart walketh after the heart of their detestable things and their abominations, I will bring their way upon their own heads, saith the Lord Jehovah.
- Bible in Basic English (BBE)
- But as for those whose heart goes after their hated and disgusting things, I will send on their heads the punishment of their ways, says the Lord.
- Darby Translation (DBY)
- But as for them whose heart walketh well-pleased with their detestable things and their abominations, I will recompense their way upon their heads, saith the Lord Jehovah.
- Webster's Bible (WBS)
- But [as for them] whose heart walketh after the heart of their detestable things and their abominations, I will recompense their way upon their own heads, saith the Lord GOD.
- Young's Literal Translation (YLT)
- As to those whose heart is going unto the heart Of their detestable and their abominable things, Their way on their head I have put, An affirmation of the Lord Jehovah.'
Read in context
- 19ಅವರಿಗೆ ಒಂದು ಹೃದಯವನ್ನು ಕೊಡು ವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು; ಅವರೊಳಗಿಂದ ಕಠಿಣ ಹೃದಯವನ್ನು ಹೊರಗೆ ತೆಗೆದು ಮೃದು ಹೃದಯವನ್ನು ಕೊಡುವೆನು.
- 20ಆಗ ಅವರು ನನ್ನ ನಿಯಮಗಳಲ್ಲಿ ನಡೆದುಕೊಂಡು ನನ್ನ ನಿಯಮಗ ಳನ್ನು ಕೈಕೊಂಡು ನಡೆಯುವರು. ಅವರು ನನ್ನ ಜನರಾಗು ವರು, ನಾನು ಅವರ ದೇವರಾಗುವೆನು.
- 21ಆದರೆ ಯಾರ ಹೃದಯವು ಅವರ ಹೇಸಿಗೆಗಳ ಮತ್ತು ಅವರ ಅಸಹ್ಯಗಳ ಹೃದಯದ ಬಳಿಗೆ ಹೋಗುತ್ತದೋ, ನಾನು ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
- 22ಆಮೇಲೆ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿದರು, ಅವರ ಪಕ್ಕದಲ್ಲಿ ಚಕ್ರಗಳಿದ್ದವು; ಇಸ್ರಾ ಯೇಲಿನ ದೇವರ ಮಹಿಮೆ ಅವರ ಮೇಲೆ ಇತ್ತು.
- 23ಕರ್ತನ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ ಪಟ್ಟಣದ ಮೂಡಣದಲ್ಲಿರುವ ಪರ್ವತದ ಮೇಲೆ ನಿಂತಿತು.
Cross references
- Ezekiel 9:10 ಯೆಹೆಜ್ಕೇಲನು 9:10ಆದದರಿಂದ ನಾನಂತೂ ಕನಿಕರಿಸುವದೂ ಇಲ್ಲ ಕಟಾಕ್ಷಿಸುವದೂ ಇಲ್ಲ ಆದರೆ ಅವರ ಮಾರ್ಗದಲ್ಲಿಯೇ ಅವರ ತಲೆಯ ಮೇಲೆ ಮುಯ್ಯಿತೀರಿಸುವೆನು ಅಂದನು.ಇಗೋ, ನಾರುಮಡಿಯನ್ನು ತನ್ನ ಪಕ್ಕೆ ಯಲ್ಲಿ ಧರಿಸಿಕೊಂಡಂಥ ಆ ಮನುಷ್ಯನು ವರ್ತಮಾನ ವನ್ನು ತಂದು ನೀನು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ ಅಂದನು.
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Ezekiel 22:31 ಯೆಹೆಜ್ಕೇಲನು 22:31ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 1:16 ಯೆರೆಮೀಯ 1:16ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿ ದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯು ವೆನು.
- Ezekiel 11:18 ಯೆಹೆಜ್ಕೇಲನು 11:18ಅವರು ಅಲ್ಲಿಗೆ ಬಂದು ಎಲ್ಲಾ ಹೇಸಿಗೆಯ ಸಂಗತಿಗಳನ್ನೂ ಎಲ್ಲಾ ಅಸಹ್ಯವಾದವುಗಳನ್ನೂ ಅಲ್ಲಿಂದ ತೆಗೆದು ಹಾಕುವರು;
- James 1:14–15 ಯಾಕೋಬನು 1:14–15ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ; ಪಾಪವು ಸಂಪೂರ್ಣವಾದ ಮೇಲೆ ಮರಣ ವನ್ನು ಹಡೆಯುತ್ತದೆ.
- Hebrews 10:38 ಇಬ್ರಿಯರಿಗೆ 10:38ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- Jeremiah 29:16–19 ಯೆರೆಮೀಯ 29:16–19ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಅರಸ ನನ್ನು ಕುರಿತು, ನಿಮ್ಮ ಸಂಗಡ ಸೆರೆಗೆ ಹೊರಡದೆ ಈ ಪಟ್ಟಣದಲ್ಲಿ ವಾಸವಾಗಿರುವ ನಿಮ್ಮ ಸಹೋದರರಾದ ಜನರೆಲ್ಲರನ್ನೂ ಕುರಿತು, ಕರ್ತನು ಹೀಗೆ ಹೇಳುತ್ತಾನೆ-- ಸೈನ್ಯಗಳ ಕರ್ತನು ಹೇಳುವದೇನಂದರೆ-- ಇಗೋ, ನಾನು ಅವರಲ್ಲಿ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿ ರುವದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರ ಗಳ ಹಾಗೆ ಮಾಡುವೆನು. ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು. ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ ಎಂದು ಕರ್ತನು ಅನ್ನುತ್ತಾನೆ; ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಗಿನಲ್ಲಿಯೇ ಕಳುಹಿಸಿದೆನು; ಆದರೆ ನೀವು ಕೇಳಲಿಲ್ಲವೆಂದು ಕರ್ತನು ಅನ್ನುತ್ತಾನೆ.
- Ezekiel 16:43 ಯೆಹೆಜ್ಕೇಲನು 16:43ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು.
- Hebrews 3:12–13 ಇಬ್ರಿಯರಿಗೆ 3:12–13ಸಹೋದರರೇ, ಎಚ್ಚರಿಕೆಯಿಂದ ನೋಡಿಕೊ ಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬ ರಾದರೂ ಪಾಪದಿಂದ ಮೋಸಹೋಗಿ ಕಠಿಣರಾಗ ದಂತೆ--ಈ ದಿನ ಎಂದು ಕರೆಯಲ್ಪಡುವಾಗಲೇ ಪ್ರತಿ ನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.
- Jeremiah 2:20 ಯೆರೆಮೀಯ 2:20ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
- Mark 7:21–23 ಮಾರ್ಕನು 7:21–23ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.