Ezekiel · chapter 12 · verse 14
Ezekiel 12:14 in Kannada
ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
Avana suttaloo avanige sahaaya maaduvavarellarannoo avana ellaa sainyagalannoo ellaa dikkugalige chadarisi avara hinde kattiyannu beesuvenu.
Ezekiel 12:14 in English
- King James Version (KJV)
- And I will scatter toward every wind all that [are] about him to help him, and all his bands; and I will draw out the sword after them.
- World English Bible (WEB)
- I will scatter toward every wind all who are around him to help him, and all his bands. I will draw out the sword after them.
- American Standard Version (ASV)
- And I will scatter toward every wind all that are round about him to help him, and all his bands; and I will draw out the sword after them.
- Bible in Basic English (BBE)
- And all his helpers round about him and all his armies I will send in flight to every wind; and I will let loose a sword after them.
- Darby Translation (DBY)
- And I will scatter toward every wind all that are about him to help him, and all his troops; and I will draw out the sword after them.
- Webster's Bible (WBS)
- And I will scatter towards every wind all that [are] about him to help him, and all his bands; and I will draw out the sword after them.
- Young's Literal Translation (YLT)
- 'And all who are round about him to help him, and all his bands, I do scatter to every wind, and a sword I draw out after them.
Read in context
- 12ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು.
- 13ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
- 14ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
- 15ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಚದರಿಸುವಾಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು.
- 16ಆದರೆ ಅವರು ಎಲ್ಲಿ ಬರು ವರೋ ಆ ಅನ್ಯಜನಾಂಗಗಳೊಳಗೆ ತಮ್ಮ ಅಸಹ್ಯಗಳ ನ್ನೆಲ್ಲಾ ತಿಳಿಸುವ ಹಾಗೆ ಅವರಲ್ಲಿ ಕೆಲವರನ್ನು ಕತ್ತಿ ಯಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು.
Cross references
- Ezekiel 5:2 ಯೆಹೆಜ್ಕೇಲನು 5:2ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು
- 2 Kings 25:4–5 2 ಅರಸುಗಳು 25:4–5ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು. ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು.
- Ezekiel 17:21 ಯೆಹೆಜ್ಕೇಲನು 17:21ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು.
- Leviticus 26:33 ಯಾಜಕಕಾಂಡ 26:33ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.
- Ezekiel 14:21 ಯೆಹೆಜ್ಕೇಲನು 14:21ದೇವರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ಕತ್ತಿ ಬರಗಾಲ ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸ ಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವದು?
- Jeremiah 42:16 ಯೆರೆಮೀಯ 42:16ಆಗ ಆಗುವದೇನಂದರೆ --ನೀವು ಭಯಪಡುವ ಕತ್ತಿಯು ಆ ಐಗುಪ್ತದೇಶದಲ್ಲಿ, ನಿಮ್ಮನ್ನು ಹಿಡಿಯುವದು; ನೀವು ಹೆದರಿಕೊಳ್ಳುವ ಕ್ಷಾಮವು ಆ ಐಗುಪ್ತದೇಶಕ್ಕೆ ನಿಮ್ಮನ್ನು ಹಿಂದಟ್ಟುವದು, ಅಲ್ಲೇ ಸಾಯುವಿರಿ.
- Ezekiel 5:10–12 ಯೆಹೆಜ್ಕೇಲನು 5:10–12ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು. ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ. ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
- Ezekiel 14:17 ಯೆಹೆಜ್ಕೇಲನು 14:17ಇಲ್ಲ ದಿದ್ದರೆ ನಾನು ಆ ದೇಶದ ಮೇಲೆ ಕತ್ತಿಯನ್ನು ತರಿಸಿ --ಕತ್ತಿಯೇ, ಆ ದೇಶದಲ್ಲಿ ಹಾದುಹೋಗು ಎಂದು ಹೇಳಿ, ಅದು ಮನುಷ್ಯರನ್ನೂ ಮೃಗಗಳನ್ನೂ ಅದರೊಳ ಗಿಂದ ಕಡಿದುಬಿಟ್ಟಾಗ
- Jeremiah 42:22 ಯೆರೆಮೀಯ 42:22ನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು.