Ezekiel · chapter 13 · verse 6
Ezekiel 13:6 in Kannada
ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ.
Avaru vyarthavaadaddannoo sullu bhavishya vaadaddannoo nodiddaarendu kartanu heluttaane; aadare kartanu avarannu kaluhisalilla; taavu nudida maatu bereyavaru nireekshisuvante maaduttaare.
Ezekiel 13:6 in English
- King James Version (KJV)
- They have seen vanity and lying divination, saying, The LORD saith: and the LORD hath not sent them: and they have made [others] to hope that they would confirm the word.
- World English Bible (WEB)
- They have seen falsehood and lying divination, who say, ‘The LORD says;’ but the LORD has not sent them. They have made men to hope that the word would be confirmed.
- American Standard Version (ASV)
- They have seen falsehood and lying divination, that say, Jehovah saith; but Jehovah hath not sent them: and they have made men to hope that the word would be confirmed.
- Bible in Basic English (BBE)
- They have seen visions without substance and made use of secret arts, who say, The Lord has said; and the Lord has not sent them: hoping that the word would have effect.
- Darby Translation (DBY)
- They have seen vanity and lying divination, that say, Jehovah saith! and Jehovah hath not sent them; and they make [them] to hope that the word will be fulfilled.
- Webster's Bible (WBS)
- They have seen vanity and lying divination, saying, The LORD saith: and the LORD hath not sent them: and they have made [others] to hope that they would confirm the word.
- Young's Literal Translation (YLT)
- They have seen vanity, and lying divination, Who are saying: An affirmation of Jehovah, And Jehovah hath not sent them, And they have hoped to establish a word.
Read in context
- 4ಓ ಇಸ್ರಾಯೇಲೇ, ನಿನ್ನ ಪ್ರವಾದಿಗಳು ನಿರ್ಜನ ಸ್ಥಳಗಳಲ್ಲಿರುವ ನರಿಗಳ ಹಾಗೆ ಇದ್ದಾರೆ.
- 5ಕರ್ತನ ದಿನದಲ್ಲಿ ಯುದ್ಧಕ್ಕೆ ನಿಲ್ಲ ಬೇಕೆಂದು ಇಸ್ರಾಯೇಲ್ ಮನೆತನದವರಿಗಾಗಿ ಬೇಲಿ ಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರ ಲಿಲ್ಲ.
- 6ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ.
- 7ವ್ಯರ್ಥ ದರ್ಶನವನ್ನು ನೋಡಿರುವಿ ರಲ್ಲಾ. ಸುಳ್ಳಾದ ಭವಿಷ್ಯವನ್ನು ಹೇಳಿದ್ದೀರಲ್ಲಾ. ನಾನು ಮಾತನಾಡದೆ ಇದ್ದರೂ--ಕರ್ತನೇ ಹೇಳಿದನೆಂದು ಹೇಳಿದ್ದಿರಲ್ಲಾ.
- 8ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ವ್ಯರ್ಥವಾಗಿ ಮಾತನಾಡಿದ್ದರಿಂದಲೂ ಸುಳ್ಳನ್ನು ಕಂಡದ್ದರಿಂದಲೂ ಇಗೋ, ನಾನು ನಿಮಗೆ ವಿರೋಧವಾಗಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Jeremiah 29:8 ಯೆರೆಮೀಯ 29:8ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಧ್ಯ ದಲ್ಲಿರುವ ನಿಮ್ಮ ಪ್ರವಾದಿಗಳೂ ಶಕುನದವರೂ ನಿಮಗೆ ಮೋಸಮಾಡದಿರಲಿ; ನಿಮಗಾಗಿ ಕನಸು ಕಂಡು ಹೇಳು ವವರಿಗೆ ಕಿವಿಗೊಡಬೇಡಿರಿ.
- Jeremiah 28:15 ಯೆರೆಮೀಯ 28:15ಪ್ರವಾದಿಯಾದ ಯೆರೆವಿಾಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನಂದರೆ--ಹನ ನ್ಯನೇ, ಕೇಳು; ಕರ್ತನು ನಿನ್ನನ್ನು ಕಳುಹಿಸಲಿಲ್ಲ; ನೀನು ಈ ಜನರನ್ನು ಸುಳ್ಳಿನಲ್ಲಿ ನಂಬಿಕೆ ಇಡುವಂತೆ ಮಾಡುತ್ತೀ.
- Ezekiel 22:28 ಯೆಹೆಜ್ಕೇಲನು 22:28ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ.
- Ezekiel 21:29 ಯೆಹೆಜ್ಕೇಲನು 21:29ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
- Jeremiah 37:19 ಯೆರೆಮೀಯ 37:19ಬಾಬೆಲಿನ ಅರಸನು ನಿಮ್ಮ ಮೇಲೆಯೂ ಈ ದೇಶದ ಮೇಲೆಯೂ ಬರುವದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? ಆದದರಿಂದ ಈಗ ಕಿವಿಗೊಡು,
- Jeremiah 14:14 ಯೆರೆಮೀಯ 14:14ಆಗ ಕರ್ತನು ನನಗೆ ಹೇಳಿದ್ದೇನಂದರೆ --ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿ ಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ; ಅವ ರಿಗೆ ಆಜ್ಞೆ ಕೊಡಲಿಲ್ಲ; ಅವರ ಸಂಗಡ ಮಾತಾಡ ಲಿಲ್ಲ; ಸುಳ್ಳಿನ ದರ್ಶನವನ್ನೂ ಶಕುನವನ್ನೂ ಶೂನ್ಯ ವನ್ನೂ ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.
- Zechariah 10:2 ಜೆಕರ್ಯ 10:2ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.
- Jeremiah 23:31–32 ಯೆರೆಮೀಯ 23:31–32ಇಗೋ, ತಮ್ಮ ನಾಲಿಗೆಗಳನ್ನು ಆಡಿ ಸುತ್ತಾ--ಆತನು ನುಡಿಯುತ್ತಾನೆ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ಇಗೋ, ಸುಳ್ಳಿನ ಕನಸುಗಳನ್ನು ಪ್ರವಾದಿಸಿ; ತಮ್ಮ ಸುಳ್ಳುಗಳಿಂದಲೂ ನಿರರ್ಥಕವಾದ ವುಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆಕೊಡಲಿಲ್ಲ; ಆದದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವದೇ ಇಲ್ಲವೆಂದು ಕರ್ತನು ಅನ್ನುತ್ತಾನೆ.
- Ezekiel 13:22–23 ಯೆಹೆಜ್ಕೇಲನು 13:22–23ನಾನು ಯಾವನನ್ನು ದುಃಖಪಡಿಸಲಿಲ್ಲವೋ ಆ ನೀತಿವಂತನ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿ ದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ. ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
- 1 Kings 22:6 1 ಅರಸುಗಳು 22:6ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
- 1 Kings 22:27 1 ಅರಸುಗಳು 22:27ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು.
- Ezekiel 21:23 ಯೆಹೆಜ್ಕೇಲನು 21:23ಅದು ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವದು; ಆಣೆಯಿಟ್ಟು ಮಾಡಿದ ಪ್ರಮಾಣಗಳು ಅವರ ಮೇಲೆ ಉಂಟಾಗು ವವು; ಆದರೆ ಅವರು ಹಿಡಿಯಲ್ಪಡುವ ಹಾಗೆ ಅಕ್ರಮವನ್ನು ಜ್ಞಾಪಕಪಡಿಸುವರು.