Skip to content
ThuthiThuthiThuthi
Ezekiel · chapter 15 of 48 · 8 verses

Ezekiel 15 in Kannada

ಯೆಹೆಜ್ಕೇಲನು 15

  1. ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

    And the word of the LORD came unto me, saying,

  2. ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?

    Son of man, What is the vine tree more than any tree, [or than] a branch which is among the trees of the forest?

  3. ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?

    Shall wood be taken thereof to do any work? or will [men] take a pin of it to hang any vessel thereon?

  4. ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ?

    Behold, it is cast into the fire for fuel; the fire devoureth both the ends of it, and the midst of it is burned. Is it meet for [any] work?

  5. ಇಗೋ, ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟು ಬಿಟ್ಟಮೇಲೆ ಯಾವ ಕೆಲಸಕ್ಕೆ ಬಂದೀತು?

    Behold, when it was whole, it was meet for no work: how much less shall it be meet yet for [any] work, when the fire hath devoured it, and it is burned?

  6. ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ.

    Therefore thus saith the Lord GOD; As the vine tree among the trees of the forest, which I have given to the fire for fuel, so will I give the inhabitants of Jerusalem.

  7. ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಹೊರಗೆ ಬಂದು ಬೆಂಕಿಯೊಳಗಿಂದ ತಪ್ಪಿಸಿ ಕೊಂಡರೂ ಮತ್ತೊಂದು ಬೆಂಕಿಯು ಅವರನ್ನು ನುಂಗಿ ಬಿಡುವದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

    And I will set my face against them; they shall go out from [one] fire, and [another] fire shall devour them; and ye shall know that I [am] the LORD, when I set my face against them.

  8. ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

    And I will make the land desolate, because they have committed a trespass, saith the Lord GOD.

All chapters of Ezekiel · Kannada Bible · Ezekiel 15 in Tamil

Kannada Bible: Kannada Old Version, public domain.

King James Version: public domain.