Ezekiel · chapter 15 · verse 4
Ezekiel 15:4 in Kannada
ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ?
Igo, adu saudegaagi benkige haakalpaduttade; benkiyu adara eradu konegalannu tindubidu ttade; adara madhyabhaagavu suttuhoguttade. Idenaadaroo kelasakke baruvado?
Ezekiel 15:4 in English
- King James Version (KJV)
- Behold, it is cast into the fire for fuel; the fire devoureth both the ends of it, and the midst of it is burned. Is it meet for [any] work?
- World English Bible (WEB)
- Behold, it is cast into the fire for fuel; the fire has devoured both its ends, and the middle of it is burned. Is it profitable for any work?
- American Standard Version (ASV)
- Behold, it is cast into the fire for fuel; the fire hath devoured both the ends of it, and the midst of it is burned: is it profitable for any work?
- Bible in Basic English (BBE)
- See, it is put into the fire for burning: the fire has made a meal of its two ends and the middle part of it is burned; is it good for any work?
- Darby Translation (DBY)
- Behold, it is given to the fire for fuel: the fire consumeth both the ends of it, and the midst of it is burned; is it fit for [any] work?
- Webster's Bible (WBS)
- Behold, it is cast into the fire for fuel; the fire devoureth both the ends of it, and the midst of it is burned. Is it suitable for [any] work?
- Young's Literal Translation (YLT)
- Lo, to the fire it hath been given for fuel, Its two ends hath the fire eaten, And its midst hath been scorched! Is it profitable for work?
Read in context
- 2ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
- 3ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
- 4ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ?
- 5ಇಗೋ, ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟು ಬಿಟ್ಟಮೇಲೆ ಯಾವ ಕೆಲಸಕ್ಕೆ ಬಂದೀತು?
- 6ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ.
Cross references
- John 15:6 ಯೋಹಾನನು 15:6ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.
- Isaiah 27:11 ಯೆಶಾಯ 27:11ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
- Psalm 80:16 ಕೀರ್ತನೆಗಳು 80:16ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.
- Ezekiel 19:14 ಯೆಹೆಜ್ಕೇಲನು 19:14ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
- Matthew 3:12 ಮತ್ತಾಯನು 3:12ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.
- Malachi 4:1 ಮಲಾಕಿಯ 4:1ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Amos 4:11 ಆಮೋಸ 4:11ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Isaiah 1:31 ಯೆಶಾಯ 1:31ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ನಾರು, ಅದನ್ನು ಮಾಡುವವನು ಕಿಡಿ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.
- Hebrews 12:29 ಇಬ್ರಿಯರಿಗೆ 12:29ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
- Hebrews 6:8 ಇಬ್ರಿಯರಿಗೆ 6:8ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.