Ezekiel · chapter 2 · verse 5
Ezekiel 2:5 in Kannada
ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.
Avaru kelali athavaa keladirali (avaru tirugibeeluva maneyavaru); aadare tammolage obba pravaadi iruvanendu tilidu kondare saaku.
Ezekiel 2:5 in English
- King James Version (KJV)
- And they, whether they will hear, or whether they will forbear, (for they [are] a rebellious house,) yet shall know that there hath been a prophet among them.
- World English Bible (WEB)
- They, whether they will hear, or whether they will refuse—for they are a rebellious house—yet they will know that there has been a prophet among them.
- American Standard Version (ASV)
- And they, whether they will hear, or whether they will forbear (for they are a rebellious house), yet shall know that there hath been a prophet among them.
- Bible in Basic English (BBE)
- And they, if they give ear to you or if they do not give ear (for they are an uncontrolled people), will see that there has been a prophet among them.
- Darby Translation (DBY)
- And they, whether they will hear or whether they will forbear — for they are a rebellious house — yet shall they know that there hath been a prophet among them.
- Webster's Bible (WBS)
- And they, whether they will hear, or whether they will forbear, (for they [are] a rebellious house,) yet shall know that there hath been a prophet among them.
- Young's Literal Translation (YLT)
- and they — whether they hear, or whether they forbear, for a rebellious house they [are] — have known that a prophet hath been in their midst.
Read in context
- 3ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿಬಿದ್ದಂಥ ಮತ್ತು ಬೀಳುವಂಥ ಜನಾಂಗದವರಾದ ಇಸ್ರಾಯೇಲ್ಯರ ಮಕ್ಕಳ ಬಳಿಗೆ ನಾನು ನಿನ್ನನ್ನು ಕಳುಹಿಸು ತ್ತೇನೆ; ಅವರೂ ಅವರ ಪಿತೃಗಳೂ ಇಂದಿನ ವರೆಗೂ ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.
- 4ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು.
- 5ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.
- 6ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ.
- 7ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.
Cross references
- Ezekiel 33:33 ಯೆಹೆಜ್ಕೇಲನು 33:33ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.
- Ezekiel 3:27 ಯೆಹೆಜ್ಕೇಲನು 3:27ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
- John 15:22 ಯೋಹಾನನು 15:22ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ.
- Matthew 10:12–15 ಮತ್ತಾಯನು 10:12–15ನೀವು ಒಂದು ಮನೆಯೊಳಕ್ಕೆ ಬಂದಾಗ ಅವರನ್ನು ವಂದಿಸಿರಿ. ಆ ಮನೆಯು ಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ಅದರ ಮೇಲೆ ಬರಲಿ; ಆದರೆ ಅದು ಅಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ. ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲೀ ಪಟ್ಟಣದಿಂದಾಗಲೀ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ್ಟಣಕ್ಕಿಂತ ಸೊದೋಮ್ ಗೊಮೋರ ಪಟ್ಟಣಗಳ ಗತಿಯು ತಾಳಬಹುದಾಗಿರುವದು.
- Luke 10:10–12 ಲೂಕನು 10:10–12ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ-- ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ. ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.
- Ezekiel 2:7 ಯೆಹೆಜ್ಕೇಲನು 2:7ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.
- Acts 13:46 ಅಪೊಸ್ತಲರ ಕೃತ್ಯಗಳು 13:46ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
- Romans 3:3 ರೋಮಾಪುರದವರಿಗೆ 3:3ಕೆಲವರು ನಂಬದಿದ್ದರೆ ಏನು? ಅವರ ಅಪನಂಬಿಕೆಯು ದೇವರ ವಿಷಯವಾದ ನಂಬಿಕೆಯನ್ನು ನಿರರ್ಥಕ ಮಾಡುವದೋ?
- 2 Corinthians 2:15–17 2 ಕೊರಿಂಥದವರಿಗೆ 2:15–17ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ. ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ. ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- Ezekiel 33:9 ಯೆಹೆಜ್ಕೇಲನು 33:9ಆದಾಗ್ಯೂ ನೀನು ಒಂದು ವೇಳೆ ದುಷ್ಟನನ್ನು ಅವನ ದುಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತನ್ನ ದುಷ್ಟಮಾರ್ಗದಿಂದ ತಿರುಗದಿದ್ದರೆ ಅವನ ಅಕ್ರಮಗಳಲ್ಲಿಯೇ ಸಾಯುವನು; ಆದರೆ ನೀನು ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಿ.
- Ezekiel 3:10–11 ಯೆಹೆಜ್ಕೇಲನು 3:10–11ಇದಲ್ಲದೆ ಆತನು ನನಗೆ--ನರಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲಾ ನಿನ್ನ ಕಿವಿಗಳಿಂದ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ. ಹೋಗು, ಸೆರೆಯಾಗಿರುವ ನಿನ್ನ ಜನರ ಮಕ್ಕಳ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು, ಅವರು ಕೇಳಿದರೂ ಕೇಳದಿದ್ದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು.
- Ezekiel 3:19 ಯೆಹೆಜ್ಕೇಲನು 3:19ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.