Ezekiel · chapter 23 · verse 11
Ezekiel 23:11 in Kannada
ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು.
Avala sahodari oholeebalu idannu nodidaaga avaliginta adhikavaagi mohagondalu. Tanna sahodariya vyabhichaarakkintaloo hechchaagi vyabhichaaragalannu nade sidalu.
Ezekiel 23:11 in English
- King James Version (KJV)
- And when her sister Aholibah saw [this], she was more corrupt in her inordinate love than she, and in her whoredoms more than her sister in [her] whoredoms.
- World English Bible (WEB)
- “Her sister Oholibah saw this, yet she was more corrupt in her lusting than she, and in her prostitution which was more depraved than the prostitution of her sister.
- American Standard Version (ASV)
- And her sister Oholibah saw this, yet was she more corrupt in her doting than she, and in her whoredoms which were more than the whoredoms of her sister.
- Bible in Basic English (BBE)
- And her sister Oholibah saw this, but her desire was even more unmeasured, and her loose behaviour was worse than that of her sister.
- Darby Translation (DBY)
- And her sister Oholibah saw [this], and was more corrupt in her passion than she, and in her fornications more than the whoredoms of her sister.
- Webster's Bible (WBS)
- And when her sister Aholibah saw [this] , she was more corrupt in her inordinate love than she, and in her prostitutions more than her sister in [her] prostitutions.
- Young's Literal Translation (YLT)
- And see doth her sister Aholibah, And she maketh her doting love more corrupt than she, And her whoredoms than the whoredoms of her sister.
Read in context
- 9ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು;
- 10ಅವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಅವಳ ಪುತ್ರರನ್ನೂ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು; ಸ್ತ್ರೀಯರಲ್ಲಿ (ಕೆಟ್ಟತನಕ್ಕೆ) ಹೆಸರುಗೊಂಡಳು; ಅವಳಲ್ಲಿ ನ್ಯಾಯ ತೀರ್ಪುಮಾಡಿದರು.
- 11ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು.
- 12ಅವಳು ತನ್ನ ನೆರೆಯವರಾದ ಅಶ್ಶೂರ್ಯ ರನ್ನೂ ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಧರಿಸಲ್ಪಟ್ಟು ಕುದುರೆಗಳ ಮೇಲೆ ಸವಾರಿಮಾಡುವ ರಾಹುತರಾಗಿಯೂ ಅಪೇಕ್ಷಿಸತಕ್ಕ ಯೌವನಸ್ಥರಾ ಗಿಯೂ ಇರುವಂಥ ಅವರನ್ನು ಮೋಹಿಸಿದಳು.
- 13ಆಗ ನಾನು ಅವಳು ಅಪವಿತ್ರವಾದಳೆಂದು ನೋಡಿದೆನು; ಅವರಿಬ್ಬರೂ ಒಂದೇ ಮಾರ್ಗವನ್ನು ಹಿಡಿದರು.
Cross references
- Jeremiah 3:8–11 ಯೆರೆಮೀಯ 3:8–11ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು. ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು. ಇದೆಲ್ಲಾ ಆದಾಗ್ಯೂ ವಂಚನೆಯುಳ್ಳ ಅವಳ ಸಹೋ ದರಿಯಾದ ಯೆಹೂದಳು ಪೂರ್ಣ ಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ ಎಂದು ಕರ್ತನು ಅನ್ನುತ್ತಾನೆ. ಕರ್ತನು ನನಗೆ ಹೇಳಿದ್ದೇ ನಂದರೆ--ಹಿಂದಿರುಗಿದ ಇಸ್ರಾಯೇಲು ವಂಚನೆಯುಳ್ಳ ಯೆಹೂದಕ್ಕಿಂತ ಹೆಚ್ಚಾಗಿ ತನ್ನನ್ನು ನೀತಿವಂತಳನ್ನಾಗಿ ಮಾಡಿಕೊಂಡಿದ್ದಾಳೆ.
- Ezekiel 23:4 ಯೆಹೆಜ್ಕೇಲನು 23:4ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು.
- Ezekiel 16:47–51 ಯೆಹೆಜ್ಕೇಲನು 16:47–51ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು, ತಾನಾದರೂ ತನ್ನ ಕುಮಾರ್ತೆಯ ರಾದರೂ ನೀನು ನಿನ್ನ ಕುಮಾರ್ತೆಯರು ಮಾಡಿದ ಹಾಗೆ ಮಾಡಲಿಲ್ಲ. ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು. ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ.