Ezekiel · chapter 23 · verse 27
Ezekiel 23:27 in Kannada
ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ.
Heege naanu ninna dushkarmavannu neenu aiguptadalliddandininda nadesida vyabhichaaravannu ninninda tolagisuvenu; aamele neenu avara kadege kannettade, aiguptavannu jnyaapakakke tarade iruvi.
Ezekiel 23:27 in English
- King James Version (KJV)
- Thus will I make thy lewdness to cease from thee, and thy whoredom [brought] from the land of Egypt: so that thou shalt not lift up thine eyes unto them, nor remember Egypt any more.
- World English Bible (WEB)
- Thus I will make your lewdness to cease from you, and remove your prostitution from the land of Egypt, so that you will not lift up your eyes to them, nor remember Egypt any more.’
- American Standard Version (ASV)
- Thus will I make thy lewdness to cease from thee, and thy whoredom [brought] from the land of Egypt; so that thou shalt not lift up thine eyes unto them, nor remember Egypt any more.
- Bible in Basic English (BBE)
- So I will put an end to your evil ways and your loose behaviour which came from the land of Egypt: and your eyes will never be lifted up to them again, and you will have no more memory of Egypt.
- Darby Translation (DBY)
- And I will make thy lewdness to cease from thee, and thy whoredom [brought] from the land of Egypt; and thou shalt not lift up thine eyes unto them, nor remember Egypt any more.
- Webster's Bible (WBS)
- Thus will I make thy lewdness to cease from thee, and thy adultery [brought] from the land of Egypt: so that thou shalt not lift up thy eyes to them, nor remember Egypt any more.
- Young's Literal Translation (YLT)
- And I have caused thy wickedness to cease from thee, And thy whoredoms out of the land of Egypt, And thou liftest not up thine eyes unto them, And Egypt thou dost not remember again.
Read in context
- 25ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.
- 26ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು;
- 27ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ.
- 28ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಅಗಲಿ ಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ.
- 29ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು.
Cross references
- Ezekiel 16:41 ಯೆಹೆಜ್ಕೇಲನು 16:41ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;
- Ezekiel 23:19 ಯೆಹೆಜ್ಕೇಲನು 23:19ಆದರೂ ಅವಳು ಐಗುಪ್ತದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿ ದಳು.
- Ezekiel 23:3 ಯೆಹೆಜ್ಕೇಲನು 23:3ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದ ರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲ್ಪಟ್ಟವು; ಅವುಗಳ ತೊಟ್ಟುಗಳು ನಸುಕಲ್ಪಟ್ಟವು.
- Micah 5:10–14 ಮೀಕ 5:10–14ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಆಗುವದೇನಂದರೆ--ನಾನು ನಿನ್ನ ಮಧ್ಯದೊಳಗಿಂದ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು. ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು. ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ. ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ. ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.
- Zechariah 13:2 ಜೆಕರ್ಯ 13:2ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ.
- Ezekiel 22:15 ಯೆಹೆಜ್ಕೇಲನು 22:15ನಿನ್ನನ್ನು ಅನ್ಯ ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು; ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.
- Isaiah 27:9 ಯೆಶಾಯ 27:9ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.