Ezekiel · chapter 3 · verse 1
Ezekiel 3:1 in Kannada
ಇದಾದ ಮೇಲೆ ಆತನು ನನಗೆ--ಮನುಷ್ಯ ಪುತ್ರನೇ, ನಿನಗೆ ಸಿಕ್ಕಿದ್ದನ್ನು ತಿನ್ನು; ಈ ಸುರಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡು ಅಂದನು.
Idaada mele aatanu nanage--manushya putrane, ninage sikkiddannu tinnu; ee suraliyannu tindu, hogi israayelina manetanadavara sangada maatanaadu andanu.
Ezekiel 3:1 in English
- King James Version (KJV)
- Moreover he said unto me, Son of man, eat that thou findest; eat this roll, and go speak unto the house of Israel.
- World English Bible (WEB)
- He said to me, “Son of man, eat what you find. Eat this scroll, and go, speak to the house of Israel.”
- American Standard Version (ASV)
- And he said unto me, Son of man, eat that which thou findest; eat this roll, and go, speak unto the house of Israel.
- Bible in Basic English (BBE)
- And he said to me, Son of man, take this roll for your food, and go and say my words to the children of Israel.
- Darby Translation (DBY)
- And he said unto me, Son of man, eat what thou findest; eat this roll, and go, speak unto the house of Israel.
- Webster's Bible (WBS)
- Moreover he said to me, Son of man, eat what thou findest; eat this roll, and go, speak to the house of Israel.
- Young's Literal Translation (YLT)
- And He saith unto me, 'Son of man, that which thou findest eat, eat this roll, and go, speak unto the house of Israel.'
Read in context
- 1ಇದಾದ ಮೇಲೆ ಆತನು ನನಗೆ--ಮನುಷ್ಯ ಪುತ್ರನೇ, ನಿನಗೆ ಸಿಕ್ಕಿದ್ದನ್ನು ತಿನ್ನು; ಈ ಸುರಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡು ಅಂದನು.
- 2ಆಗ ನಾನು ನನ್ನ ಬಾಯನ್ನು ತೆರೆದೆನು, ಆತನು ನನಗೆ ಆ ಸುರಳಿಯನ್ನು ತಿನ್ನಿಸಿದನು.
- 3ಆಗ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆಯ ಕರುಳುಗಳನ್ನು ತುಂಬಿಸಿಕೋ ಅಂದನು. ಆಗ ನಾನು ಅದನ್ನು ತಿನ್ನಲು ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು.
Cross references
- Revelation 10:9–10 ಪ್ರಕಟನೆ 10:9–10ನಾನು ಆ ದೂತನ ಬಳಿಗೆ ಹೋಗಿ ಅವನಿಗೆ--ಆ ಚಿಕ್ಕ ಪುಸ್ತಕವನ್ನು ನನಗೆ ಕೊಡು ಎಂದು ಹೇಳಲು ಅವನು ನನಗೆ--ನೀನು ಇದನ್ನು ತೆಗೆದು ಕೊಂಡು ತಿಂದುಬಿಡು, ಇದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವದು ಎಂದು ಹೇಳಿ ದನು ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.ಅವನು ನನಗೆ--ನೀನು ಅನೇಕ ಪ್ರಜೆ, ಜನಾಂಗ, ಭಾಷೆ ಮತ್ತು ರಾಜರುಗಳ ಮುಂದೆ ತಿರಿಗಿ ಪ್ರವಾದಿಸತಕ್ಕದ್ದು ಎಂದು ಹೇಳಿದನು.
- Ezekiel 3:17–21 ಯೆಹೆಜ್ಕೇಲನು 3:17–21ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು. ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು. ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು; ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
- Ezekiel 2:8–9 ಯೆಹೆಜ್ಕೇಲನು 2:8–9ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವ ದನ್ನು ಕೇಳು; ಆ ತಿರುಗಿಬೀಳುವವರ ಮನೆಯ ಹಾಗೆ ನೀನೂ ತಿರುಗಿಬೀಳಬೇಡ; ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವದನ್ನು ತಿನ್ನು ಅಂದನು. ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.ಆತನು ಅದನ್ನು ನನ್ನ ಮುಂದೆ ಹರಡಿದನು; ಅದರ ಒಳಗಡೆಯೂ ಹೊರಗಡೆಯೂ ಬರಹವು ಇತ್ತು. ಆ ಬರಹವೇನಂದರೆ--ಗೋಳಾಟವೂ ಮೂಲುಗುವಿಕೆಯೂ ಸಂಕಟಗಳೂ ಇವೆ ಎಂಬದೇ.
- 1 Timothy 4:15 1 ತಿಮೊಥೆಯನಿಗೆ 4:15ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು.ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
- Ezekiel 3:15 ಯೆಹೆಜ್ಕೇಲನು 3:15ಆಮೇಲೆ ನಾನು ಕೆಬಾರ್ ನದಿಯ ದಡದಲ್ಲಿ ವಾಸಿಸುತ್ತಿದ್ದ ತೇಲ್ ಆಬೀಬಿನ ಸೆರೆಯವರ ಬಳಿಗೆ ಬಂದೆನು; ಅವರು ಕುಳಿತಿದ್ದ ಕಡೆಗೆ ನಾನು ಕುಳಿತು ಏಳು ದಿವಸಗಳು ಅವರ ಜೊತೆ ಆಶ್ಚರ್ಯವಾಗಿ ಉಳಿದೆನು.
- Jeremiah 24:1–7 ಯೆರೆಮೀಯ 24:1–7ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾ ಕೀಮನ ಮಗನಾದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಬಡಗಿಯವರನ್ನೂ ಕಮ್ಮಾರರನೂ ಯೆರೂಸಲೇಮಿನಿಂದ ಸೆರೆಗೆ ಒಯ್ದು ಬಾಬೆಲಿಗೆ ತಕ್ಕೊಂಡುಹೋದ ಮೇಲೆ ಕರ್ತನು ನನಗೆ ತೋರಿಸ ಲಾಗಿ, ಅಗೋ, ಎರಡು ಪುಟ್ಟಿ ಅಂಜೂರದ ಹಣ್ಣುಗಳು ಕರ್ತನ ದೇವಾಲಯದ ಮುಂದೆ ಇದ್ದವು. ಒಂದು ಪುಟ್ಟಿಯಲ್ಲಿ ಬಹಳ ಒಳ್ಳೇ ಹಣ್ಣುಗಳು ಮೊದಲು ಮಾಗುವ ಹಣ್ಣುಗಳ ಹಾಗೆ ಇರುವವುಗಳೂ ಮತ್ತೊಂದು ಪುಟ್ಟಿಯಲ್ಲಿ ಬಹಳ ಕೆಟ್ಟ ಹಣ್ಣುಗಳು, ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳೂ ಇದ್ದವು. ಆಗ ಕರ್ತನು ನನಗೆ--ಯೆರೆವಿಾಯನೇ, ಏನು ನೋಡುತ್ತೀ ಅಂದನು. ಆಗ ನಾನು ಅಂಜೂರದ ಹಣ್ಣುಗಳನ್ನು ನೋಡುತ್ತೇನೆ; ಒಳ್ಳೇ ಹಣ್ಣುಗಳು ಬಹಳ ಒಳ್ಳೇವು; ಕೆಟ್ಟ ಹಣ್ಣುಗಳು ಬಹಳ ಕೆಟ್ಟವುಗಳು, ತಿನ್ನ ಕೂಡದ ಹಾಗೆ ಅಷ್ಟು ಕೆಟ್ಟವಾಗಿವೆ ಅಂದೆನು. ಆಗ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ -- ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈ ಒಳ್ಳೇ ಅಂಜೂರದ ಹಣ್ಣುಗಳ ಹಾಗೆ ನಾನು ಈ ಸ್ಥಳದಿಂದ ಕಸ್ದೀಯರ ದೇಶಕ್ಕೆ ಒಳ್ಳೇದಕ್ಕಾಗಿ ಕಳುಹಿಸಿದ ಯೆಹೂದದ ಸೆರೆಯವರನ್ನು ಪರಾಮರಿ ಸುವೆನು. ನಾನು ನನ್ನ ಕಣ್ಣುಗಳನ್ನು ಅವರ ಮೇಲೆ ಒಳ್ಳೇದಕ್ಕಾಗಿ ಇಡುವೆನು. ಈ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು; ಕೆಡವಿ ಹಾಕದೆ ಅವರನ್ನು ಕಟ್ಟುವೆನು, ಕೀಳದೆ ಅವರನ್ನು ನೆಡುವೆನು. ನಾನೇ ಕರ್ತನೆಂದು ನನ್ನನ್ನು ತಿಳುಕೊಳ್ಳುವದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿ ರುವರು; ನಾನು ಅವರ ದೇವರಾಗಿರುವೆನು; ತಮ್ಮ ಪೂರ್ಣ ಹೃದಯದಿಂದ ನನ್ನ ಬಳಿಗೆ ಹಿಂತಿರುಗಿಕೊಳ್ಳು ವರು.
- Ezekiel 3:10–11 ಯೆಹೆಜ್ಕೇಲನು 3:10–11ಇದಲ್ಲದೆ ಆತನು ನನಗೆ--ನರಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲಾ ನಿನ್ನ ಕಿವಿಗಳಿಂದ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ. ಹೋಗು, ಸೆರೆಯಾಗಿರುವ ನಿನ್ನ ಜನರ ಮಕ್ಕಳ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು, ಅವರು ಕೇಳಿದರೂ ಕೇಳದಿದ್ದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು.
- Ezekiel 2:3 ಯೆಹೆಜ್ಕೇಲನು 2:3ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿಬಿದ್ದಂಥ ಮತ್ತು ಬೀಳುವಂಥ ಜನಾಂಗದವರಾದ ಇಸ್ರಾಯೇಲ್ಯರ ಮಕ್ಕಳ ಬಳಿಗೆ ನಾನು ನಿನ್ನನ್ನು ಕಳುಹಿಸು ತ್ತೇನೆ; ಅವರೂ ಅವರ ಪಿತೃಗಳೂ ಇಂದಿನ ವರೆಗೂ ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.