Ezekiel · chapter 3 · verse 21
Ezekiel 3:21 in Kannada
ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
Aadaagyoo neetivantanu paapa maadada haage neenu neetivantanannu echcharisuvaaga avanu paapamaadade echcharikeyaadadarinda nishchayavaagi badukuvanu; neenu ninna praanavannu saha ulisikondiruvi.
Ezekiel 3:21 in English
- King James Version (KJV)
- Nevertheless if thou warn the righteous [man], that the righteous sin not, and he doth not sin, he shall surely live, because he is warned; also thou hast delivered thy soul.
- World English Bible (WEB)
- Nevertheless if you warn the righteous man, that the righteous not sin, and he does not sin, he will surely live, because he took warning; and you have delivered your soul.”
- American Standard Version (ASV)
- Nevertheless if thou warn the righteous man, that the righteous sin not, and he doth not sin, he shall surely live, because he took warning; and thou hast delivered thy soul.
- Bible in Basic English (BBE)
- But if you say to the upright man that he is not to do evil, he will certainly keep his life because he took note of your word; and your life will be safe.
- Darby Translation (DBY)
- And if thou warn the righteous [man], that the righteous sin not, and he doth not sin, he shall certainly live, for he hath taken warning; and thou hast delivered thy soul.
- Webster's Bible (WBS)
- Nevertheless if thou shalt warn the righteous [man] , that the righteous sin not, and he doth not sin, he shall surely live, because he is warned; also thou hast delivered thy soul.
- Young's Literal Translation (YLT)
- And thou, because thou hast warned him — the righteous — that the righteous sin not, and he hath not sinned, he surely liveth, because he hath been warned; and thou thy soul hast delivered.'
Read in context
- 19ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.
- 20ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು;
- 21ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
- 22ಆಗ ಅಲ್ಲಿ ಕರ್ತನ ಹಸ್ತವು ನನ್ನ ಮೇಲಿತ್ತು; ನನಗೆ ಆತನು ಹೇಳಿದ್ದೇನಂದರೆ--ಎದ್ದೇಳು, ಬಯಲು ಸೀಮೆಗೆ ಹೋಗು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು ಅಂದನು.
- 23ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು.
Cross references
- 1 Timothy 4:16 1 ತಿಮೊಥೆಯನಿಗೆ 4:16ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
- 1 Corinthians 4:14 1 ಕೊರಿಂಥದವರಿಗೆ 4:14ನಿಮ್ಮನ್ನು ನಾಚಿಕೆಪಡಿಸುವದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮ್ಮನ್ನು ಎಚ್ಚರಿಸುವ ದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ.
- Proverbs 9:9 ಜ್ಞಾನೋಕ್ತಿಗಳು 9:9ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು.
- Titus 2:15 ತೀತನಿಗೆ 2:15ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- James 5:20 ಯಾಕೋಬನು 5:20ಅವನು ಪಾಪಮಾಡಿದವ ನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಲಿ.
- Galatians 1:6–10 ಗಲಾತ್ಯದವರಿಗೆ 1:6–10ಕ್ರಿಸ್ತನ ಕೃಪೆಯಲ್ಲಿ ನಿಮ್ಮನ್ನು ಕರೆದಾತನಿಂದ ನೀವು ಇಷ್ಟು ಬೇಗನೆ ಬೇರೆ ಸುವಾರ್ತೆಗೆ ತಿರುಗಿಕೊಂಡಿರೆಂದು ನಾನು ಆಶ್ಚರ್ಯಪಡುತ್ತೇನೆ. ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಕಳವಳಪಡಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಪ್ರಯತ್ನಿಸುತ್ತಾರೆ. ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ. ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
- 1 John 3:6–9 1 ಯೋಹಾನನು 3:6–9ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ. ಚಿಕ್ಕ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಆತನು ಹೇಗೆ ನೀತಿವಂತ ನಾಗಿದ್ದಾನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ. ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು. ದೇವರಿಂದ ಹುಟ್ಟಿದವನು ಪಾಪಮಾಡನು; ಯಾಕಂದರೆ ಆತನ ಬೀಜವು ಅವನಲ್ಲಿ ನೆಲೆಗೊಂಡದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡ ಲಾರನು.
- Ezekiel 3:19–20 ಯೆಹೆಜ್ಕೇಲನು 3:19–20ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು;
- Psalm 19:11 ಕೀರ್ತನೆಗಳು 19:11ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Acts 20:31 ಅಪೊಸ್ತಲರ ಕೃತ್ಯಗಳು 20:31ಆದಕಾರಣ ನಾನು ಕಣ್ಣೀರಿನಿಂದ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬ ನನ್ನು ಎಚ್ಚರಿಸಿದೆನೆಂದು ನೀವು ಜ್ಞಾಪಕ ಮಾಡಿಕೊಂಡು ಎಚ್ಚರವಾಗಿರಿ.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- 1 Thessalonians 4:6–8 1 ಥೆಸಲೊನೀಕದವರಿಗೆ 4:6–8ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತನ್ನ ಸಹೋದರನನ್ನು ವಂಚಿಸಬಾರದು; ನಾವು ಮುಂಚೆ ತಿಳಿಸಿ ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವ ವನಾಗಿದ್ದಾನೆ. ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧತೆಗೆ ಕರೆದನು. ಹೀಗಿರಲು ತಾತ್ಸಾರ ಮಾಡು ವವನು ಮನುಷ್ಯನನ್ನಲ್ಲ, ತನ್ನ ಪರಿಶುದ್ಧಾತ್ಮನನ್ನು ನಮಗೆ ದಯಪಾಲಿಸಿರುವ ದೇವರನ್ನೇ ತಾತ್ಸಾರ ಮಾಡುತ್ತಾನೆ.