Ezekiel · chapter 34 · verse 7
Ezekiel 34:7 in Kannada
ಆದದರಿಂದ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
Aadadarinda kurubare, neevu kartana vaakyavannu keliri.
Ezekiel 34:7 in English
- King James Version (KJV)
- Therefore, ye shepherds, hear the word of the LORD;
- World English Bible (WEB)
- “‘Therefore, you shepherds, hear the LORD’s word:
- American Standard Version (ASV)
- Therefore, ye shepherds, hear the word of Jehovah:
- Bible in Basic English (BBE)
- For this cause, O keepers of the flock, give ear to the word of the Lord:
- Darby Translation (DBY)
- Therefore, ye shepherds, hear the word of Jehovah:
- Webster's Bible (WBS)
- Therefore, ye shepherds, hear the word of the LORD;
- Young's Literal Translation (YLT)
- Therefore, shepherds, hear a word of Jehovah:
Read in context
- 5ಅವು ಚದರಿಹೋದವು; ಯಾಕಂದರೆ ಅಲ್ಲಿ ಕುರುಬ ರಿಲ್ಲ; ಅವರು ಚದರಿಹೋದಾಗ ಬಯಲಿನಲ್ಲಿರುವ ಎಲ್ಲಾ ಮೃಗಗಳಿಗೆ ಆಹಾರವಾದವು.
- 6ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದರಿ ಹೋಗಿದೆ; ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.
- 7ಆದದರಿಂದ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
- 8ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದದ ರಿಂದಲೂ ನನ್ನ ಮಂದೆಯು ಕುರುಬ ನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರು ಬರು ನನ್ನ ಮಂದೆಯನ್ನು ಹುಡುಕದೆ ಇದ್ದದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದಿದ್ದದರಿಂದಲೂ
- 9ಓ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
Cross references
- Jeremiah 13:18 ಯೆರೆಮೀಯ 13:18ಅರಸನಿಗೂ ರಾಣಿಗೂ ನೀನು ಹೇಳತಕ್ಕದ್ದೇ ನಂದರೆ--ನೀವು ತಗ್ಗಿಸಿಕೊಂಡು ಕೂತುಕೊಳ್ಳಿರಿ; ನಿಮ್ಮ ದೊರೆತನಗಳು ಅಂದರೆ ನಿಮ್ಮ ಗೌರವದ ಕಿರೀಟವು ಕೆಳಗೆ ಬರುವದು.
- Malachi 2:1 ಮಲಾಕಿಯ 2:1ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ.
- Luke 11:39–54 ಲೂಕನು 11:39–54ಆಗ ಕರ್ತನು ಅವನಿಗೆ-- ಫರಿಸಾಯರಾದ ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನ ದಿಂದಲೂ ತುಂಬಿರುತ್ತದೆ ಮೂರ್ಖರೇ, ಹೊರ ಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ? ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು. ಆದರೆ ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಮರುಗಪತ್ರೆ ಸದಾಪು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು ನ್ಯಾಯತೀರ್ಪನ್ನೂ ದೇವರಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಇವುಗಳನ್ನು ತಪ್ಪದೆ ಮಾಡಿ ಬೇರೆಯವು ಗಳನ್ನು ಬಿಡದೆ ಮಾಡಬೇಕಾಗಿತ್ತು. ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸಭಾಮಂದಿರ ಗಳಲ್ಲಿ ಅತ್ಯುನ್ನತ ಸ್ಥಾನಗಳನ್ನೂ ಸಂತೆಗಳಲ್ಲಿ ವಂದನೆಗಳನ್ನೂ ಪ್ರೀತಿಸುತ್ತೀರಿ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೊ! ಯಾಕಂದರೆ ನೀವು ಕಾಣಿಸದ ಸಮಾಧಿಗಳಂತೆ ಇದ್ದೀರಿ; ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು ಎಂದು ಹೇಳಿದನು. ಆಗ ನ್ಯಾಯಶಾಸ್ತ್ರಿಗಳಲ್ಲಿ ಒಬ್ಬನು ಆತನಿಗೆ-- ಬೋಧಕನೇ, ನೀನು ಇವುಗಳನ್ನು ಹೇಳುವದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀ ಅಂದನು. ಅದಕ್ಕೆ ಆತನು--ನ್ಯಾಯಶಾಸ್ತ್ರಿಗಳಾದ ನಿಮಗೂ ಅಯ್ಯೋ! ಯಾಕಂದರೆ ಹೊರಲು ಕಠಿಣವಾದ ಹೊರೆ ಗಳನ್ನು ಮನುಷ್ಯರ ಮೇಲೆ ಹೊರಿಸಿ ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ನೀವು ಆ ಹೊರೆಗಳನ್ನು ಮುಟ್ಟು ವದಿಲ್ಲ. ನಿಮಗೆ ಅಯ್ಯೋ! ಯಾಕಂದರೆ ನಿಮ್ಮ ತಂದೆಗಳು ಪ್ರವಾದಿಗಳನ್ನು ಕೊಂದರು. ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. ಇದರಿಂದ ನಿಜವಾ ಗಿಯೂ ನಿಮ್ಮ ತಂದೆಗಳ ಕೃತ್ಯಗಳನ್ನು ನೀವು ಒಪ್ಪಿ ಕೊಳ್ಳುವಂತೆ ಸಾಕ್ಷೀಕರಿಸುತ್ತೀರಿ; ಯಾಕಂದರೆ ಅವರು ನಿಜವಾಗಿಯೂ ಅವರನ್ನು ಕೊಂದರು; ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. ಆದದರಿಂದ ದೇವರ ಜ್ಞಾನವು ಸಹ ಹೇಳಿದ್ದೇನಂದರೆ -- ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸು ವೆನು; ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸಿಸುವರು. ಹೀಗೆ ಜಗತ್ತಿನ ಅಸ್ತಿವಾರ ಮೊದಲುಗೊಂಡು ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಉತ್ತರ ಕೊಡಬೇಕಾಗಿರುವದು. ಹೇಬೆಲನ ರಕ್ತ ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ನ್ಯಾಯ ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಯಾಕಂದರೆ ನೀವು ಜ್ಞಾನದ ಬೀಗದ ಕೈಯನ್ನು ತಕ್ಕೊಂಡಿದ್ದೀರಿ, ನೀವಂತೂ ಒಳಗೆ ಪ್ರವೇಶಿಸಲಿಲ್ಲ. ಒಳಗೆ ಪ್ರವೇಶಿಸುತ್ತಿರುವವ ರಿಗೂ ನೀವು ತಡೆದಿರಿ ಎಂದು ಹೇಳಿದನು. ಆತನು ಅವರಿಗೆ ಈ ವಿಷಯಗಳನ್ನು ಹೇಳು ತ್ತಿದ್ದಾಗ ಶಾಸ್ತ್ರಿಗಳು ಮತ್ತು ಫರಿಸಾಯರು ಕೋಪಾವೇಶ ವುಳ್ಳವರಾಗಿ ಆತನು ಇನ್ನೂ ಅನೇಕವಾದವುಗಳ ವಿಷಯವಾಗಿ ಮಾತನಾಡುವಂತೆ ಆತನನ್ನು ಉದ್ರೇಕ ಗೊಳಿಸಲಾರಂಭಿಸಿದರು.ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು. ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು.
- Jeremiah 22:2–3 ಯೆರೆಮೀಯ 22:2–3ಹೇಗಂದರೆ--ದಾವೀ ದನ ಸಿಂಹಾಸನದ ಮೇಲೆ ಕೂತುಕೊಳ್ಳುವ ಯೆಹೂದದ ಅರಸನೇ, ನೀನೂ ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಕರ್ತನ ವಾಕ್ಯವನ್ನು ಕೇಳಲಿ, ಕರ್ತನು ಹೇಳುವದೇನಂದರೆ-- ನ್ಯಾಯವನ್ನೂ ನೀತಿಯನ್ನೂ ನಡಿಸಿರಿ; ಸುಲಿಗೆಯಾದ ವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ; ಪರದೇಶಸ್ಥನಿಗೆ ದಿಕ್ಕಿಲ್ಲದವನಿಗೆ ವಿಧವೆಗೆ ಉಪದ್ರವವ ನ್ನಾದರೂ ಬಲಾತ್ಕಾರವನ್ನಾದರೂ ಮಾಡಬೇಡಿರಿ; ಇಲ್ಲವೆ ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲ ಬೇಡಿರಿ.
- Isaiah 1:10 ಯೆಶಾಯ 1:10ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.
- Psalm 82:1–7 ಕೀರ್ತನೆಗಳು 82:1–7ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ. ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ. ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ. ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ. ಅವರು ಅರಿಯರು; ಗ್ರಹಿಸುವದಿಲ್ಲ; ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕ್ರಮವಿಲ್ಲದವುಗಳು. ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು. ಆದಾಗ್ಯೂ ಮನುಷ್ಯರ ಹಾಗೆ ನೀವು ಸಾಯುವಿರಿ; ಪ್ರಧಾನರಲ್ಲಿ ಒಬ್ಬನ ಹಾಗೆ ಬೀಳುವಿರಿ.ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.
- Matthew 23:13–36 ಮತ್ತಾಯನು 23:13–36ಆದರೆ ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮನುಷ್ಯರ ಮುಂದೆ ಪರ ಲೋಕರಾಜ್ಯವನ್ನು ಮುಚ್ಚುತ್ತೀರಿ. ನೀವಂತೂ ಪ್ರವೇಶಿ ಸುವದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಹೋಗಗೊಡಿಸುವದಿಲ್ಲ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ; ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ; ಆದದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ. ಕಪಟಿಗಳಾದ ಫರಿಸಾಯರೇ, ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಒಬ್ಬನನ್ನು ಮತಾಂತರ ಮಾಡು ವದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ; ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕದ ಮಗನನ್ನಾಗಿ ಮಾಡುತ್ತೀರಿ. ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ. ಆದರೂ--ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತದಲ್ಲಿ ಅವರೊಂದಿಗೆ ಪಾಲುಗಾರರಾಗುತ್ತಿರಲಿಲ್ಲ ಎಂದು ಹೇಳುತ್ತೀರಿ. ಆದದರಿಂದ ನೀವು ಆ ಪ್ರವಾದಿ ಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. ಹಾಗಾದರೆ ನಿಮ ಪಿತೃಗಳ ಅಳತೆಯನ್ನು ನೀವೇ ತುಂಬಿಸಿರಿ. ಹಾವು ಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆ ಯಿಂದ ಹೇಗೆ ತಪ್ಪಿಸಿಕೊಂಡೀರಿ? ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು. ನಿಮಗೆ ನಿಜವಾಗಿ ಹೇಳು ತ್ತೇನೆ--ಇವೆಲ್ಲವುಗಳು ಈ ಸಂತತಿಯವರ ಮೇಲೆ ಬರುವವು.
- Ezekiel 34:9 ಯೆಹೆಜ್ಕೇಲನು 34:9ಓ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
- Micah 3:8–9 ಮೀಕ 3:8–9ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ. ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ,
- Jeremiah 13:13 ಯೆರೆಮೀಯ 13:13ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.