Ezekiel · chapter 35 · verse 6
Ezekiel 35:6 in Kannada
ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.
Aadadarinda devaraada kartanu heluttaane-- nanna jeevadaane, naanu ninnannu raktamayavaagi maaduvenu; raktada kodiyu ninnannu bennattu vadu; neenu raktasurisuvadakke hesade hoda kaarana raktapravaahave ninna bennu hattuvadu.
Ezekiel 35:6 in English
- King James Version (KJV)
- Therefore, [as] I live, saith the Lord GOD, I will prepare thee unto blood, and blood shall pursue thee: sith thou hast not hated blood, even blood shall pursue thee.
- World English Bible (WEB)
- therefore, as I live,” says the Lord GOD, “I will prepare you for blood, and blood will pursue you. Since you have not hated blood, therefore blood will pursue you.
- American Standard Version (ASV)
- therefore, as I live, saith the Lord Jehovah, I will prepare thee unto blood, and blood shall pursue thee: since thou hast not hated blood, therefore blood shall pursue thee.
- Bible in Basic English (BBE)
- For this cause, by my life, says the Lord, because you have been sinning through blood, blood will come after you.
- Darby Translation (DBY)
- therefore, [as] I live, saith the Lord Jehovah, I will certainly appoint thee unto blood, and blood shall pursue thee; since thou hast not hated blood, blood shall pursue thee.
- Webster's Bible (WBS)
- Therefore, [as] I live, saith the Lord GOD, I will prepare thee to blood, and blood shall pursue thee: since thou hast not hated blood, even blood shall pursue thee.
- Young's Literal Translation (YLT)
- Therefore, I live — an affirmation of the Lord Jehovah, Surely for blood I do appoint thee, And blood doth pursue thee, If blood thou hast not hated, Blood also doth pursue thee.
Read in context
- 4ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
- 5ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
- 6ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.
- 7ಹೀಗೆ ನಾನು ಸೇಯಾರ್ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
- 8ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.
Cross references
- Isaiah 63:2–6 ಯೆಶಾಯ 63:2–6ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
- Revelation 18:24 ಪ್ರಕಟನೆ 18:24ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.
- Obadiah 1:15 ಓಬದ್ಯ 1:15ಕರ್ತನ ದಿನವು ಎಲ್ಲಾ ಜನಾಂಗಗಳ ಮೇಲೆ ಸವಿಾಪವಾಗಿದೆ; ನೀನು ಮಾಡಿದ ಹಾಗೆಯೇ ನಿನಗೆ ಮಾಡಲ್ಪಡುವದು; ನಿನ್ನ ಪ್ರತಿಫಲವು ನಿನ್ನ ತಲೆಯ ಮೇಲೆ ತಿರುಗುವದು.
- Psalm 109:16–17 ಕೀರ್ತನೆಗಳು 109:16–17ಅವನು ಕರುಣೆ ತೋರಿಸುವದನ್ನು ಮರೆತು ಹೃದಯದಲ್ಲಿ ನೊಂದವ ರನ್ನು ಕೊಲ್ಲುವದಕ್ಕೂ ಬಡವನನ್ನೂ ಕೊರತೆಯುಳ್ಳ ವವನ್ನೂ ಹಿಂಸಿಸಿದನು. ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
- Revelation 16:5–7 ಪ್ರಕಟನೆ 16:5–7ಅಮೇಲೆ ಜಲಗಳ ದೂತನು--ಓ ಕರ್ತನೇ, ನೀನು ಇರುವಾತನೂ ಇದ್ದಾತನೂ ಬರುವಾತನೂ ಆಗಿರುವದರಿಂದ ನೀನು ಹೀಗೆ ತೀರ್ಪು ಮಾಡಿದ್ದರಲ್ಲಿ ನೀತಿ ಸ್ವರೂಪನಾಗಿದ್ದೀ. ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು. ಆಮೇಲೆ ಯಜ್ಞವೇದಿಯೊಳಗಿಂದ ಮತ್ತೊಬ್ಬನು--ಹೌದು, ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ ಎಂದು ಹೇಳುವದನ್ನು ನಾನು ಕೇಳಿದೆನು.
- Revelation 19:2–3 ಪ್ರಕಟನೆ 19:2–3ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ.
- Revelation 18:6 ಪ್ರಕಟನೆ 18:6ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.
- Matthew 7:2 ಮತ್ತಾಯನು 7:2ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.