Ezekiel · chapter 36 · verse 24
Ezekiel 36:24 in Kannada
ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
Naanu nimmannu anyajanaangagala madhyadinda tegedu ellaa deshagalolaginda koodisi nimma nimma svanta deshagalalli serisuvenu.
Ezekiel 36:24 in English
- King James Version (KJV)
- For I will take you from among the heathen, and gather you out of all countries, and will bring you into your own land.
- World English Bible (WEB)
- “‘“For I will take you from among the nations and gather you out of all the countries, and will bring you into your own land.
- American Standard Version (ASV)
- For I will take you from among the nations, and gather you out of all the countries, and will bring you into your own land.
- Bible in Basic English (BBE)
- For I will take you out from among the nations, and get you together from all the countries, and take you into your land.
- Darby Translation (DBY)
- And I will take you from among the nations, and gather you out of all the countries, and will bring you into your own land.
- Webster's Bible (WBS)
- For I will take you from among the heathen, and gather you out of all countries, and will bring you into your own land.
- Young's Literal Translation (YLT)
- And I have taken you out of the nations, And have gathered you out of all the lands, And I have brought you in unto your land,
Read in context
- 22ಆದದರಿಂದ ನೀನು ಇಸ್ರಾ ಯೇಲನ ಮನೆತನದವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು--ಓ ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡು ತ್ತಿಲ್ಲ, ಆದರೆ ನೀವು ಹೋಗುವಾಗ ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಪರಿಶುದ್ಧನಾಮಕ್ಕಾಗಿ ಮಾಡುತ್ತೇನೆ.
- 23ನೀವು ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಮಹತ್ತರ ನಾಮವನ್ನು ನಾನು ಪರಿಶುದ್ಧಮಾಡುವೆನು; ಹಾಗೆ ನಾನು ಅವರ ಕಣ್ಣುಗಳ ಮುಂದೆ ನಿಮ್ಮಲ್ಲಿ ಪರಿಶುದ್ಧನಾದ ಮೇಲೆ ಆ ಅನ್ಯ ಜನಾಂಗಗಳವರು ನಾನೇ ಕರ್ತನೆಂದು ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- 24ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
- 25ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
- 26ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
Cross references
- Ezekiel 37:21 ಯೆಹೆಜ್ಕೇಲನು 37:21ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಇಸ್ರಾಯೇಲನ ಮಕ್ಕಳನ್ನು ಅವರು ಹೋಗಿರುವ ಕಡೆಯಿಂದಲೂ ಅವರನ್ನು ಒಂದುಗೂಡಿಸಿ ಅವರನ್ನು ಅವರ ಸ್ವಂತ ದೇಶಕ್ಕೆ ತರುವೆನು.
- Ezekiel 34:13 ಯೆಹೆಜ್ಕೇಲನು 34:13ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು.
- Amos 9:14–15 ಆಮೋಸ 9:14–15ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Psalm 107:2–3 ಕೀರ್ತನೆಗಳು 107:2–3ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ.
- Ezekiel 11:17 ಯೆಹೆಜ್ಕೇಲನು 11:17ಆದದರಿಂದ ನೀನು ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆಹೇಳುತ್ತಾನೆ--ನಾನು ನಿಶ್ಚ ಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ ನೀವು ಚದ ರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ; ಇಸ್ರಾ ಯೇಲ್ ದೇಶವನ್ನು ನಿಮಗೆ ಕೊಡುತ್ತೇನೆ.
- Jeremiah 30:3 ಯೆರೆಮೀಯ 30:3ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ನನ್ನ ಜನರಾದ ಇಸ್ರಾಯೇಲ್ ಮತ್ತು ಯೆಹೂದದ ಸೆರೆಯವರನ್ನು ತಿರುಗಿ ಬರ ಮಾಡುತ್ತೇನೆ; ಆಗ ನಾನು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ; ಅವರು ಅದನ್ನು ಸ್ವಾಧೀನ ಮಾಡಿಕೊಳ್ಳುವರು.
- Jeremiah 30:18 ಯೆರೆಮೀಯ 30:18ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.
- Isaiah 43:5–6 ಯೆಶಾಯ 43:5–6ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು. ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
- Deuteronomy 30:3–5 ಧರ್ಮೋಪದೇಶಕಾಂಡ 30:3–5ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು. ಆಕಾಶದ ಅಂತ್ಯದಲ್ಲಿ ನಿನ್ನವರು ಹೊರ ಡಿಸಲ್ಪಟ್ಟಿದ್ದರೂ ಅಲ್ಲಿಂದ ದೇವರಾದ ಕರ್ತನು ನಿನ್ನನ್ನು ಕೂಡಿಸಿ ಅಲ್ಲಿಂದ ನಿನ್ನನ್ನು ಕರತರುವನು. ಇದಲ್ಲದೆ ನಿನ್ನ ಪಿತೃಗಳು ಸ್ವಾಧೀನಮಾಡಿಕೊಂಡ ದೇಶಕ್ಕೆ ನಿನ್ನ ದೇವರಾದ ಕರ್ತನು ನಿನ್ನನ್ನು ತರುವನು; ನೀನು ಅದನ್ನು ಸ್ವಾಧೀನಮಾಡಿಕೊಳ್ಳುವಿ; ಆತನು ನಿನಗೆ ಒಳ್ಳೇದನ್ನು ಮಾಡಿ ನಿನ್ನ ಪಿತೃಗಳಿಗಿಂತಲೂ ನಿನ್ನನ್ನು ಹೆಚ್ಚಿಸುವನು.
- Jeremiah 23:3–8 ಯೆರೆಮೀಯ 23:3–8ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು. ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ; ಅವರು ಇನ್ನು ಮೇಲೆ ಭಯಪಡುವದೇ ಇಲ್ಲ, ಅಂಜುವದಿಲ್ಲ, ಕೊರತೆಪಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ. ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು. ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ. ಆದದರಿಂದ ಇಗೋ, ದಿನಗಳು ಬರುತ್ತವೆಂದು ಕರ್ತನು ಅನ್ನುತ್ತಾನೆ; ಆಗ ಇಸ್ರಾಯೇಲಿನ ಮಕ್ಕಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಹೇಳುವದೇ ಇಲ್ಲ. ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮನೆತನದವರ ಸಂತಾನವನ್ನು ಉತ್ತರ ದೇಶದಿಂದಲೂ ತಾನು ಅವರನ್ನು ಹೊರಡಿಸಿ ಬಿಟ್ಟಿದ್ದ ಎಲ್ಲಾ ದೇಶ ಗಳಿಂದಲೂ ಬರಮಾಡಿದನು ಎಂದು ಹೇಳುವರು; ಅವರು ತಮ್ಮ ದೇಶದಲ್ಲಿ ವಾಸಮಾಡುವರು.
- Isaiah 27:12–13 ಯೆಶಾಯ 27:12–13ಓ ಇಸ್ರಾಯೇಲ್ಯರ ಮಕ್ಕಳೇ, ಕರ್ತನು ನದಿಯ ಕಾಲುವೆ ಮೊದಲುಗೊಂಡು ಐಗುಪ್ತದೇಶದ ನದಿಯ ವರೆಗೆ ಹೊಡೆಯುವನು; ಆಗ ನಿಮ್ಮನ್ನು ಒಬ್ಬೊಬ್ಬರ ನ್ನಾಗಿ ಕೂಡಿಸುವನು.ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು. ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.
- Hosea 1:11 ಹೋಶೇಯ 1:11ಆಗ ಯೆಹೂದದ ಮಕ್ಕಳು ಮತ್ತು ಇಸ್ರಾಯೇಲಿನ ಮಕ್ಕಳು ಒಟ್ಟುಗೂಡಿಕೊಂಡು ತಮಗೆ ಒಬ್ಬನನ್ನೇ ಶಿರಸ್ಸನ್ನಾಗಿ ನೇಮಕಮಾಡಿಕೊಳ್ಳುವರು; ದೇಶದೊಳಗಿಂದ ಹೊರಗೆ ಬರುವರು, ಯಾಕಂದರೆ ಇಜ್ರೇಲಿನ ಸುದಿನವು ಅತಿ ವಿಶೇಷವಾಗಿರುವದು ಅಂದನು.