Ezekiel · chapter 36 · verse 31
Ezekiel 36:31 in Kannada
ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
Aamele neevu nimma durmaarga duraachaaragalannu jnyaapakakke tandukondu nimma aparaadhagala mattu asahya kaaryagala nimitta nimage neeve hesikolluviri.
Ezekiel 36:31 in English
- King James Version (KJV)
- Then shall ye remember your own evil ways, and your doings that [were] not good, and shall lothe yourselves in your own sight for your iniquities and for your abominations.
- World English Bible (WEB)
- “‘“Then you will remember your evil ways, and your deeds that were not good; and you will loathe yourselves in your own sight for your iniquities and for your abominations.
- American Standard Version (ASV)
- Then shall ye remember your evil ways, and your doings that were not good; and ye shall loathe yourselves in your own sight for your iniquities and for your abominations.
- Bible in Basic English (BBE)
- And at the memory of your evil ways and your wrongdoings, you will have bitter hate for yourselves because of your evil-doings and your disgusting ways, O children of Israel.
- Darby Translation (DBY)
- And ye shall remember your evil ways, and your doings which were not good, and shall loathe yourselves for your iniquities and for your abominations.
- Webster's Bible (WBS)
- Then shall ye remember your own evil ways, and your doings that [were] not good, and shall lothe yourselves in your own sight for your iniquities, and for your abominations.
- Young's Literal Translation (YLT)
- And ye have remembered your ways that [are] evil, And your doings that [are] not good, And have been loathsome in your own faces, For your iniquities, and for your abominations.
Read in context
- 29ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು; ಬೆಳೆ ಬೆಳೆ ಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವದಿಲ್ಲ.
- 30ಅನ್ಯಜನಾಂಗ ಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನು ಹೆಚ್ಚಿಸುವೆನು.
- 31ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
- 32ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ದೇವರಾದ ಕರ್ತನು ಹೇಳುತ್ತಾನೆ; ಓ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾ ರ್ಗಗಳಿಗೆ ನಾಚಿಕೆ ಪಟ್ಟು ಲಜ್ಜೆಹೊಂದಿರಿ.
- 33ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸು ವೆನು; ಹಾಳಾಗಿರುವ ಸ್ಥಳಗಳೂ ಸಹ ಕಟ್ಟಲ್ಪಡುವವು.
Cross references
- Ezekiel 6:9 ಯೆಹೆಜ್ಕೇಲನು 6:9ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.
- Ezekiel 20:43 ಯೆಹೆಜ್ಕೇಲನು 20:43ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು ನೀವು ಯಾವ ಸಂಗತಿ ಗಳಿಂದ ಅಶುದ್ಧವಾಗಿದ್ದಿರೋ ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕಮಾಡಿಕೊಳ್ಳುವಿರಿ; ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿ ಯಲ್ಲಿಯೇ ನೀವು ಅಸಹ್ಯರಾಗುವಿರಿ.
- Nehemiah 9:26–35 ನೆಹೆಮೀಯ 9:26–35ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು. ಆದದರಿಂದ ನೀನು ಬಾಧಿಸುವ ವಿರೋಧಿಗಳ ಕೈಯಲ್ಲಿ ಅವರನ್ನು ಒಪ್ಪಿಸಿದಿ. ಆದರೆ ತಮ್ಮ ಇಕ್ಕಟ್ಟಿನ ಕಾಲದಲ್ಲಿ ಅವರು ನಿನ್ನನ್ನು ಕೂಗಿದಾಗ ನೀನು ಪರಲೋಕದಿಂದ ಕೇಳಿ, ನಿನ್ನ ಅಧಿಕವಾದ ಕರುಣೆಯ ಪ್ರಕಾರ ಅವರ ವೈರಿಗಳ ಕೈಯಿಂದ ರಕ್ಷಿಸುವದಕ್ಕೆ, ರಕ್ಷಕರನ್ನು ಅವರಿಗೆ ಕೊಟ್ಟಿ. ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿನ್ನ ಮುಂದೆ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದ ಕಾರಣ ಅವರ ಶತ್ರುಗಳು ಅವರನ್ನು ಆಳುವ ಹಾಗೆ ಅವರ ಕೈಯಲ್ಲಿ ಅವರನ್ನು ಒಪ್ಪಿಸಿದಿ; ಆದರೆ ಅವರು ತಿರಿಗಿ ನಿನ್ನನ್ನು ಕೂಗಿದಾಗ ನೀನು ಆಕಾಶದಿಂದ ಕೇಳಿ ಅವರನ್ನು ನಿನ್ನ ಕರುಣೆಯ ಪ್ರಕಾರ ಅನೇಕ ಸಾರಿ ವಿಮೋಚನೆ ಮಾಡಿದಿ. ನೀನು ಅವರನ್ನು ನಿನ್ನ ನ್ಯಾಯಪ್ರಮಾಣಕ್ಕೆ ತಿರಿಗಿ ಬರುವ ಹಾಗೆ ಅವರಿಗೆ ವಿರೋಧವಾಗಿ ಸಾಕ್ಷಿ ಹೇಳಿದಿ. ಆದರೆ ಅವರು ಗರ್ವಪಟ್ಟು ನಿನ್ನ ಆಜ್ಞೆಗಳನ್ನು ಕೇಳದೆ ಮನುಷ್ಯರು ಯಾವವುಗಳನ್ನು ಕೈಕೊಳ್ಳುವದರಿಂದ ಬದುಕುವರೋ ಆ ನಿನ್ನ ನ್ಯಾಯಗಳಿಗೆ ವಿರೋಧವಾಗಿ ಪಾಪಮಾಡಿಹೆಗಲುಕೊಡದೆ ಕುತ್ತಿಗೆಯನ್ನು ಕಠಿಣಪಡಿಸಿಕೊಂಡು ಕೇಳದೆಹೋದರು. ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ. ಆದರೂ ನೀನು ನಿನ್ನ ಅಧಿಕವಾದ ಕರುಣೆಯ ನಿಮಿತ್ತ ಅವರನ್ನು ಸಂಪೂರ್ಣ ನಾಶಮಾಡಿ ಬಿಡ ಲಿಲ್ಲ; ಅವರನ್ನು ಕೈಬಿಡಲೂ ಇಲ್ಲ. ಯಾಕಂದರೆ ನೀನು ಕೃಪೆಯೂ ಕರುಣೆಯುಳ್ಳ ದೇವರಾಗಿದ್ದೀ. ಆದಕಾರಣ ನಮ್ಮ ದೇವರೇ, ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವಂಥ ಮಹಾಪರಾಕ್ರಮವು ಳ್ಳಂಥ ಭಯಂಕರನಾದ ದೇವರೇ, ಅಶ್ಶೂರಿನ ಅರಸು ಗಳ ಕಾಲ ಮೊದಲುಗೊಂಡು ಇಂದಿನ ವರೆಗೆ ನಮ್ಮ ಮೇಲೆಯೂ ಅರಸುಗಳ ಮೇಲೆಯೂ ಪ್ರಧಾನರ ಮೇಲೆಯೂ ಯಾಜಕರ ಮೇಲೆಯೂ ಪ್ರವಾದಿಗಳ ಮೇಲೆಯೂ ಪಿತೃಗಳ ಮೇಲೆಯೂ ನಿನ್ನ ಸಮಸ್ತ ಜನರ ಮೇಲೆಯೂ ಬಂದ ಶ್ರಮೆಯು ನಿನಗೆ ಅಲ್ಪ ವಾಗಿ ಕಾಣಲ್ಪಡದೆ ಇರಲಿ. ಆದರೆ ನೀನು ನಮ್ಮ ಮೇಲೆ ಬರಮಾಡಿದ ಎಲ್ಲಾದರಲ್ಲಿ ನೀತಿಪರನಾಗಿದ್ದಿ. ಯಾಕಂದರೆ ನೀನು ಮಾಡಿದ್ದು ಸತ್ಯವಾದದ್ದು; ಆದರೆ ನಾವು ದುಷ್ಟರಾಗಿ ನಡೆದೆವು. ನಮ್ಮ ಅರಸುಗಳೂ ಪ್ರಧಾನರೂ ಯಾಜಕರೂ ನಮ್ಮ ಪಿತೃಗಳೂ ನಿನ್ನ ನ್ಯಾಯಪ್ರಮಾಣವನ್ನು ಕೈಕೊಳ್ಳದೆ ನಿನ್ನ ಆಜ್ಞೆಗಳನ್ನೂ ನೀನು ಅವರಿಗೆ ಸಾಕ್ಷಿಯಾಗಿ ಹೇಳಿದ ನಿನ್ನ ಸಾಕ್ಷಿಗ ಳನ್ನೂ ಆಲೈಸದೆ ಹೋದರು. ಅವರು ತಮ್ಮ ರಾಜ್ಯದಲ್ಲಿಯೂ ನೀನು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀನು ಅವರಿಗೆ ಕೊಟ್ಟ ವಿಸ್ತಾರ ವಾದ, ರಸವತ್ತಾದ ದೇಶದಲ್ಲಿಯೂ ನಿನ್ನನ್ನು ಸೇವಿಸ ಲಿಲ್ಲ; ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ.
- Job 42:6 ಯೋಬನು 42:6ಆದದರಿಂದ ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು.
- Luke 18:13 ಲೂಕನು 18:13ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು.
- Isaiah 6:5 ಯೆಶಾಯ 6:5ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.
- Ezekiel 16:61–63 ಯೆಹೆಜ್ಕೇಲನು 16:61–63ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಸಹೋ ದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವಿ. ಅವರನ್ನು ನಿನ್ನ ಕುಮಾರ್ತೆಗಳಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆ ಯಿಂದಲ್ಲ. ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು; ಆದದರಿಂದ ನಾನೇ ಕರ್ತ ನೆಂದು ನಿಮಗೆ ಗೊತ್ತಾಗುವದು.ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Romans 6:21 ರೋಮಾಪುರದವರಿಗೆ 6:21ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
- Jeremiah 31:18–20 ಯೆರೆಮೀಯ 31:18–20ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ. ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು. ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
- Zechariah 12:10–11 ಜೆಕರ್ಯ 12:10–11ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೊನಿನ ಗೋಳಾಟದ ಹಾಗೆ ಆ ದಿನ ದಲ್ಲಿ ಯೆರೂಸಲೇಮಿನೊಳಗೆ ಮಹಾಗೋಳಾಟವಿ ರುವದು.
- Daniel 9:4–20 ದಾನಿಯೇಲನು 9:4–20ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ, ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ. ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ. ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ. ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ. ಆತನು ನಮಗೂ ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾನು ಹೇಳಿದ ಮಾತುಗಳನ್ನು ನೆರವೇರಿಸಿ; ನಮ್ಮ ಮೇಲೆ ದೊಡ್ಡ ಕೇಡು ಬರುವ ಹಾಗೆ ಮಾಡಿದ್ದಾನೆ; ಯೆರೂಸಲೇಮಿನಲ್ಲಿ ನಡೆದ ಹಾಗೆ ಪೂರ್ಣ ಆಕಾಶದ ಕೆಳಗೆಲ್ಲಾ (ಭೂಮಂಡಲದ ಮೇಲೆ) ಎಲ್ಲಿಯೂ ನಡೆಯಲಿಲ್ಲ. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ. ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ. ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ. ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ. ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು. ಓ ನನ್ನ ದೇವರೇ, ನೀನು ಕಿವಿಗೊಟ್ಟು ಕೇಳು; ಇಗೋ, ನಿನ್ನ ಕಣ್ಣುಗಳನ್ನು ತೆರೆದು ನಾವು ಹಾಳಾದ ದ್ದನ್ನೂ ನಿನ್ನ ಹೆಸರಿನಿಂದ ಕರೆಯಲ್ಪಡುವ ಪಟ್ಟಣವನ್ನೂ ನೋಡು ಯಾಕಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿನ್ನ ಮಹಾ ಕೃಪೆಗೋಸ್ಕರವೇ ನಮ್ಮ ವಿಜ್ಞಾಪನೆಗಳನ್ನು ನಿನ್ನ ಮುಂದೆ ಅರ್ಪಿಸುತ್ತೇವೆ. ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು. ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.
- Leviticus 26:39 ಯಾಜಕಕಾಂಡ 26:39ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.