Ezekiel · chapter 39 · verse 24
Ezekiel 39:24 in Kannada
ಅವರ ಅಶುದ್ಧತ್ವದ ಪ್ರಕಾರವೂ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
Avara ashuddhatvada prakaaravoo akramagala prakaaravoo naanu avarannu dandisi, nanna mukhavannu avarinda maremaadiddene.
Ezekiel 39:24 in English
- King James Version (KJV)
- According to their uncleanness and according to their transgressions have I done unto them, and hid my face from them.
- World English Bible (WEB)
- I did to them according to their uncleanness and according to their transgressions. I hid my face from them.
- American Standard Version (ASV)
- According to their uncleanness and according to their transgressions did I unto them; and I hid my face from them.
- Bible in Basic English (BBE)
- In the measure of their unclean ways and their sins, so I did to them; and I kept my face covered from them.
- Darby Translation (DBY)
- According to their uncleanness and according to their transgressions I did unto them, and I hid my face from them.
- Webster's Bible (WBS)
- According to their uncleanness and according to their transgressions have I done to them, and hid my face from them.
- Young's Literal Translation (YLT)
- According to their uncleanness, And according to their transgressions, I have done with them, And I do hide My face from them.
Read in context
- 22ಹೀಗೆ ಇಸ್ರಾಯೇಲನ ಮನೆತನದವರು ಕರ್ತನಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವ ರಾಗಿರುವೆನೆಂದು ತಿಳಿಯುವರು.
- 23ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಅನ್ಯಜನಾಂಗಗಳು ತಿಳಿಯುವವು; ಅವರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಕತ್ತಿಯಿಂದ ಹತರಾದರು.
- 24ಅವರ ಅಶುದ್ಧತ್ವದ ಪ್ರಕಾರವೂ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
- 25ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈಗ ನಾನು ಯಾಕೋಬಿನ ಸೆರೆಯನ್ನು ತಿರಿಗಿ ತರುತ್ತೇನೆ, ಸಂಪೂರ್ಣ ಇಸ್ರಾಯೇಲಿನ ಮನೆತನದ ವರ ಮೇಲೆ ಕರುಣೆಯಿಡುತ್ತೆನೆ; ನನ್ನ ಪರಿಶುದ್ಧ ಹೆಸರಿಗಾಗಿ ಸ್ವಗೌರವುಳ್ಳವನಾಗಿರುವೆನು.
- 26ಅವರು ಹೆದರಿಸುವವರಿಲ್ಲದೆ ಕ್ಷೇಮವಾಗಿ ತಮ್ಮ ದೇಶದಲ್ಲಿ ವಾಸಮಾಡಿದಾಗ ಉಂಟಾದ ತಮ್ಮ ನಾಚಿಕೆಯನ್ನೂ ನನಗೆ ವಿರೋಧವಾಗಿ ಅತಿಕ್ರಮಿಸಿದ ಎಲ್ಲಾ ಅತಿಕ್ರಮ ಗಳನ್ನು ಹೊತ್ತ ತರುವಾಯ,
Cross references
- Ezekiel 36:19 ಯೆಹೆಜ್ಕೇಲನು 36:19ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶ ಗಳಲ್ಲಿ ಚದರಿಹೋದರು; ಅವರ ಮಾರ್ಗಗಳ ದುಷ್ಕ್ರಿ ಯೆಗಳ ಪ್ರಕಾರವಾಗಿ ಅವರಿಗೆ ನಾನು ನ್ಯಾಯ ತೀರಿಸಿದೆನು.
- Jeremiah 4:18 ಯೆರೆಮೀಯ 4:18ನಿನ್ನ ಮಾರ್ಗಗಳು ನಿನ್ನ ಕ್ರಿಯೆಗಳು ಇವುಗಳನ್ನು ನಿನಗೆ ಉಂಟುಮಾಡಿದವು, ಇದು ನಿನ್ನ ಕೆಟ್ಟತನವೇ; ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ತಾಕುತ್ತದ್ದಲ್ಲವೋ?
- Jeremiah 2:17 ಯೆರೆಮೀಯ 2:17ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
- Jeremiah 2:19 ಯೆರೆಮೀಯ 2:19ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- Daniel 9:5–10 ದಾನಿಯೇಲನು 9:5–10ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ. ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ. ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ.
- 2 Kings 17:7–23 2 ಅರಸುಗಳು 17:7–23ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ. ಆದರೆ ಯೆಹೂದದವರು ತಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳದೆ ಇಸ್ರಾ ಯೇಲು ಮಾಡಿಕೊಂಡ ಕಟ್ಟಳೆಗಳಲ್ಲಿ ನಡೆದರು. ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಇಸ್ರಾಯೇಲನ್ನು ದಾವೀದನ ಮನೆಯಿಂದ ಹರಿದುಬಿಟ್ಟನು; ಅವರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲ್ಯರನ್ನು ಕರ್ತ ನನ್ನು ಹಿಂಬಾಲಿಸುವದರಿಂದ ತಪ್ಪಿಸಿ ಅವರನ್ನು ಮಹಾ ಪಾಪಮಾಡಲು ಪ್ರೇರೇಪಿಸಿದನು. ಕರ್ತನು ಪ್ರವಾ ದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಹಾಗೆ ಅವನು ಇಸ್ರಾಯೇಲನ್ನು ತನ್ನ ಸಮ್ಮುಖದಿಂದ ತೆಗೆದು ಹಾಕುವ ವರೆಗೆ ಇಸ್ರಾಯೇಲಿನ ಮಕ್ಕಳು ಯಾರೊ ಬ್ಬಾಮನು ಮಾಡಿದ ಎಲ್ಲಾ ಪಾಪಗಳಲ್ಲಿ ನಡೆದರು; ಅವುಗಳನ್ನು ತೊರೆದು ಬಿಡಲಿಲ್ಲ. ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.
- Isaiah 1:20 ಯೆಶಾಯ 1:20ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
- Isaiah 3:11 ಯೆಶಾಯ 3:11ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
- Leviticus 26:24 ಯಾಜಕಕಾಂಡ 26:24ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
- Jeremiah 5:25 ಯೆರೆಮೀಯ 5:25ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಅವೆ; ನಿಮ್ಮ ಪಾಪ ಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಳೆದಿವೆ.
- Isaiah 59:17–18 ಯೆಶಾಯ 59:17–18ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು. ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು.