Ezekiel · chapter 43 · verse 5
Ezekiel 43:5 in Kannada
ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆ ತಂದಿತು; ಇಗೋ, ಕರ್ತನ ಮಹಿಮೆ ಯಿಂದ ಆಲಯವು ತುಂಬಿಕೊಂಡಿತ್ತು.
Aaga aatmavu nannannu ettikondu olagina angalakke kare tanditu; igo, kartana mahime yinda aalayavu tumbikondittu.
Ezekiel 43:5 in English
- King James Version (KJV)
- So the spirit took me up, and brought me into the inner court; and, behold, the glory of the LORD filled the house.
- World English Bible (WEB)
- The Spirit took me up and brought me into the inner court; and behold, the LORD’s glory filled the house.
- American Standard Version (ASV)
- And the Spirit took me up, and brought me into the inner court; and, behold, the glory of Jehovah filled the house.
- Bible in Basic English (BBE)
- And the spirit, lifting me up, took me into the inner square; and I saw that the house was full of the glory of the Lord.
- Darby Translation (DBY)
- And the Spirit lifted me up, and brought me into the inner court; and behold, the glory of Jehovah filled the house.
- Webster's Bible (WBS)
- So the spirit took me up, and brought me into the inner court; and behold, the glory of the LORD filled the house.
- Young's Literal Translation (YLT)
- And take me up doth the Spirit, and bringeth me in unto the inner court, and lo, the honour of Jehovah hath filled the house.
Read in context
- 3ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.
- 4ಆಗ ಕರ್ತನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿ ಸಿತು.
- 5ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆ ತಂದಿತು; ಇಗೋ, ಕರ್ತನ ಮಹಿಮೆ ಯಿಂದ ಆಲಯವು ತುಂಬಿಕೊಂಡಿತ್ತು.
- 6ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವದನ್ನು ಕೇಳಿದೆನು; ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿ ದ್ದನು.
- 7ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ.
Cross references
- 2 Corinthians 12:2–4 2 ಕೊರಿಂಥದವರಿಗೆ 12:2–4ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೇ ಪರಲೋಕಕ್ಕೆ ಒಯ್ಯಲ್ಪಟ್ಟನು. (ಅವನ ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನು ಹೇಳಲಾರೆನು; ದೇವರೇ ಬಲ್ಲನು.) ಅಂಥ ಮನುಷ್ಯನೊಬ್ಬನನ್ನು ನಾನು ಬಲ್ಲೆನು; (ಅವನು ದೇಹಸಹಿತನಾಗಿದ್ದನೋ ದೇಹ ರಹಿತನಾಗಿದ್ದನೋ ನಾನು ಹೇಳಲಾರೆನು, ದೇವರೇ ಬಲ್ಲನು;) ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯನು ನುಡಿಯಲಶಕ್ಯವಾದ ಆಡಲಾಗದ ಮಾತುಗಳನ್ನು ಕೇಳಿದನು.
- Ezekiel 8:3 ಯೆಹೆಜ್ಕೇಲನು 8:3ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿ ದನು; ಆಗ ಆತ್ಮನು ನನ್ನನ್ನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ಎತ್ತಿ ನನ್ನನ್ನು ದೇವರದರ್ಶನಗಳಲ್ಲಿ ಯೆರೂ ಸಲೇಮಿಗೆ ಉತ್ತರದ ಕಡೆಗೆ ಎದುರಾಗಿರುವ ಒಳ ಬಾಗಲಿನ ಕಡೆಗೆ ಅಸೂಯೆ ಎಬ್ಬಿಸುವ ವಿಗ್ರಹವು ಇದ್ದಲ್ಲಿಗೆ ತೆಗೆದುಕೊಂಡು ಹೋದನು.
- Ezekiel 11:24 ಯೆಹೆಜ್ಕೇಲನು 11:24ಅನಂತರ ಆತ್ಮನು ನನ್ನನ್ನು ಎತ್ತಿ ದೇವರ ಆತ್ಮದಿಂದಾದ ದರ್ಶನದಿಂದ ಕಸ್ದೀಯರ ದೇಶಕ್ಕೆ ಸೆರೆಯವರ ಬಳಿಗೆ ಕರೆದುಕೊಂಡು ಹೋದನು; ಆಗ ನಾನು ನೋಡಿದ ದರ್ಶನವು ನನ್ನಿಂದ ಇಲ್ಲದೆ ಹೋಯಿತು.ಆಮೇಲೆ ಕರ್ತನು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯವರೊಂದಿಗೆ ನಾನು ಮಾತನಾಡಿದೆನು.
- 1 Kings 8:10–11 1 ಅರಸುಗಳು 8:10–11ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ ಮೇಘವು ಕರ್ತನ ಮಂದಿರವನ್ನು ತುಂಬಿತ್ತು. ಕರ್ತನ ತೇಜಸ್ಸಿ ನಿಂದ ವ್ಯಾಪ್ತವಾಗಿದ್ದ ಮೇಘವು ಆಲಯವನ್ನು ತುಂಬಿ ಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆಮಾಡ ಲಾರದವರಾದರು.
- Ezekiel 3:12–14 ಯೆಹೆಜ್ಕೇಲನು 3:12–14ಆಮೇಲೆ ಆತ್ಮನು ನನ್ನನ್ನು ಮೇಲೆ ತೆಗೆದುಕೊಂಡು ಹೋದನು. ನಾನು--ಕರ್ತನ ಮಹಿಮೆ ತನ್ನ ಸ್ಥಳ ದೊಳಗಿಂದ ಹರಸಲ್ಪಡಲೆಂದು ಘೋಷಿಸುವ ಒಂದು ಮಹಾಧ್ವನಿಯು ನನ್ನ ಹಿಂದೆ ನುಗ್ಗಿಕೊಂಡು ಬರುವ ದನ್ನು ನಾನು ಕೇಳಿಸಿಕೊಂಡೆನು. ಇದಲ್ಲದೆ ನಾನು ಒಂದಕ್ಕೊಂದು ತಗಲುವ ಆ ಜೀವಿಗಳ ರೆಕ್ಕೆಗಳ ಶಬ್ದ ವನ್ನೂ ಅವುಗಳ ಬಳಿಯಲ್ಲಿದ್ದ ಚಕ್ರಗಳ ಶಬ್ದವನ್ನೂ ಮಹಾಘೋಷದ ಶಬ್ದವು ನುಗ್ಗಿ ಬರುತ್ತಿರುವದನ್ನೂ ಕೇಳಿದೆನು. ಹೀಗೆ ಆತ್ಮನು ನನ್ನನ್ನು ಎತ್ತಿಕೊಂಡು ಹೋದನು; ನಾನು ಕಹಿಯಲ್ಲಿಯೂ ಆತ್ಮನ ಉರಿಯ ಲ್ಲಿಯೂ ಹೋದೆನು; ಅದರೆ ಕರ್ತನ ಕೈ ನನ್ನ ಮೇಲೆ ಬಲವಾಗಿತ್ತು.
- Acts 8:39 ಅಪೊಸ್ತಲರ ಕೃತ್ಯಗಳು 8:39ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮನು ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಕಂಚುಕಿಯು ಅವನನ್ನು ಕಾಣಲೇಇಲ್ಲ. ಅವನು ತನ್ನ ದಾರಿ ಹಿಡಿದು ಸಂತೋಷವುಳ್ಳವನಾಗಿ ಹೋದನು.ತರುವಾಯ ಫಿಲಿಪ್ಪನು ಅಜೋತಿನಲ್ಲಿ ಕಾಣಿಸಿ ಕೊಂಡು ಅಲ್ಲಿಂದ ಕೈಸರೈಯಕ್ಕೆ ಬರುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.
- Ezekiel 44:4 ಯೆಹೆಜ್ಕೇಲನು 44:4ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು; ನಾನು ನೋಡಲಾಗಿ ಇಗೋ, ಕರ್ತನ ಮಹಿಮೆಯು ಕರ್ತನ ಆಲಯವನ್ನು ತುಂಬಿಕೊಂಡಿತು. ನಾನು ಬೋರಲುಬಿದ್ದೆನು.
- Ezekiel 37:1 ಯೆಹೆಜ್ಕೇಲನು 37:1ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು.
- Ezekiel 40:2 ಯೆಹೆಜ್ಕೇಲನು 40:2ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
- Isaiah 6:3 ಯೆಶಾಯ 6:3ಒಬ್ಬನು ಮತ್ತೊಬ್ಬನಿಗೆ--ಸೈನ್ಯಗಳ ಕರ್ತನು ಪರಿ ಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲ ವೆಲ್ಲಾ ಆತನ ಮಹಿಮೆಯಿಂದ ತುಂಬಿಯದೆ ಎಂದು ಕೂಗಿ ಹೇಳಿದನು.
- Exodus 40:34 ವಿಮೋಚನಕಾಂಡ 40:34ಆಗ ಮೇಘವು ಸಭೆಯ ಡೇರೆಯನ್ನು ಮುಚ್ಚಿಕೊಂಡು ಕರ್ತನ ಮಹಿಮೆಯು ಗುಡಾರವನ್ನು ತುಂಬಿಕೊಂಡಿತು.
- Ezekiel 10:4 ಯೆಹೆಜ್ಕೇಲನು 10:4ಆಗ ಕರ್ತನ ಮಹಿಮೆಯು ಕೆರೂಬಿಗಳನ್ನು ಬಿಟ್ಟು ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಲ್ಲಿ ನಿಂತಿತು, ಆಲಯವು ಮೇಘದಿಂದ ತುಂಬಿತ್ತು. ಆಗ ಕರ್ತನ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು.