Ezekiel · chapter 43 · verse 9
Ezekiel 43:9 in Kannada
ಈಗ ಅವರು ಅವರ ವ್ಯಭಿಚಾರವನ್ನು ಮತ್ತು ಅವರ ಅರಸರ ಹೆಣಗಳನ್ನು ನನ್ನಿಂದ ದೂರವಾಗಿಡಲಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ ಅಂದನು.
Eega avaru avara vyabhichaaravannu mattu avara arasara henagalannu nanninda dooravaagidali, naanu avara madhyadalli endendigoo vaasisuttene andanu.
Ezekiel 43:9 in English
- King James Version (KJV)
- Now let them put away their whoredom, and the carcases of their kings, far from me, and I will dwell in the midst of them for ever.
- World English Bible (WEB)
- Now let them put away their prostitution, and the dead bodies of their kings far from me. Then I will dwell among them forever.
- American Standard Version (ASV)
- Now let them put away their whoredom, and the dead bodies of their kings, far from me; and I will dwell in the midst of them for ever.
- Bible in Basic English (BBE)
- Now let them put their loose ways and the dead bodies of their kings far from me, and I will be among them for ever.
- Darby Translation (DBY)
- Now let them put away their fornication, and the carcases of their kings, far from me, and I will dwell in the midst of them for ever.
- Webster's Bible (WBS)
- Now let them put away their lewd deeds, and the carcasses of their kings, far from me, and I will dwell in the midst of them for ever.
- Young's Literal Translation (YLT)
- Now do they put far off their whoredom, And the carcases of their kings — from Me, And I have dwelt in their midst to the age.
Read in context
- 7ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ.
- 8ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ; ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿ ಬಿಟ್ಟಿದ್ದೇನೆ.
- 9ಈಗ ಅವರು ಅವರ ವ್ಯಭಿಚಾರವನ್ನು ಮತ್ತು ಅವರ ಅರಸರ ಹೆಣಗಳನ್ನು ನನ್ನಿಂದ ದೂರವಾಗಿಡಲಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ ಅಂದನು.
- 10ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ಮನೆಯನ್ನು ತೋರಿಸು ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಮಾದರಿಯನ್ನು ಅಳೆಯಲಿ.
- 11ಅವರು ಮಾಡಿದ್ದಕ್ಕಾಗಿ ನಾಚಿಕೆಪಟ್ಟರೆ ಮನೆಯ ರೂಪವನ್ನೂ ಆಕಾರವನ್ನೂ ಹೊರಡೋಣ ಬರೋಣಗಳನ್ನು ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ನ್ಯಾಯಪ್ರಮಾಣ ಗಳನ್ನ್ನೂ ಅವರಿಗೆ ತೋರಿಸು; ಅದರ ಎಲ್ಲಾ ನಿಯಮ ಗಳನ್ನೂ ಕೈಗೊಂಡು ಅವರು ಅವುಗಳನ್ನು ಮಾಡುವ ಹಾಗೆ ಅವರ ದೃಷ್ಟಿಯಲ್ಲಿಯೇ ಅವುಗಳನ್ನು ಬರೆ,
Cross references
- Ezekiel 43:7 ಯೆಹೆಜ್ಕೇಲನು 43:7ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ.
- Ezekiel 37:26–28 ಯೆಹೆಜ್ಕೇಲನು 37:26–28ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು. ನನ್ನ ಗುಡಾರವು ಸಹ ಅವರೊಂದಿಗಿರುವದು; ಹೌದು, ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು. ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.
- Ezekiel 18:30–31 ಯೆಹೆಜ್ಕೇಲನು 18:30–31ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ. ನೀವು ಮಾಡುವ ದುಷ್ಟತ್ವಗಳನ್ನೆಲ್ಲಾ ನಿಮ್ಮಿಂದ ಬಿಟ್ಟುಬಿಡಿರಿ; ಹೊಸ ಹೃದಯವನ್ನೂ ಹೊಸ ಆತ್ಮವನ್ನೂ ನೀವು ಪಡಕೊಳ್ಳಿರಿ; ಯಾಕಂದರೆ ಓ ಇಸ್ರಾಯೇಲಿನ ಮನೆತನದವರೇ, ನೀವು ಸಾಯುವದೇಕೆ?ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.
- Colossians 3:5–9 ಕೊಲೊಸ್ಸೆಯವರಿಗೆ 3:5–9ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ. ಇವುಗಳ ನಿಮಿತ್ತ ಅವಿಧೇಯ ರಾದ ಮಕ್ಕಳ ಮೇಲೆ ದೇವರ ಕೋಪವು ಬರುತ್ತದೆ. ಪೂರ್ವದಲ್ಲಿ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿ ದ್ದಾಗ ಅವುಗಳಂತೆ ನಡೆದಿರಿ. ಈಗಲಾದರೋ ಕ್ರೋಧ ಕೋಪ ಮತ್ಸರ ದೇವದೂಷಣೆ ನಿಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ?
- Ezekiel 37:23 ಯೆಹೆಜ್ಕೇಲನು 37:23ಇಲ್ಲವೆ ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ಅಸಹ್ಯಗಳಿಂದಲೂ ಎಲ್ಲಾ ಅಕ್ರಮಗಳಿಂದಲೂ ಅಶುದ್ಧವಾಗುವದಿಲ್ಲ; ಆದರೆ ನಾನು ಅವರನ್ನು ಪಾಪಮಾಡಿದವರ ಎಲ್ಲಾ ನಿವಾಸಿ ಗಳಿಂದ ರಕ್ಷಿಸಿ, ಅವರನ್ನು ಶುದ್ಧಮಾಡುವೆನು; ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
- 2 Corinthians 6:16 2 ಕೊರಿಂಥದವರಿಗೆ 6:16ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.
- Hosea 2:2 ಹೋಶೇಯ 2:2ನಿಮ್ಮ ತಾಯಿಯ ಸಂಗಡ ವಾದಿಸಿರಿ, ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ.