Ezekiel · chapter 44 · verse 25
Ezekiel 44:25 in Kannada
ಅವರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆ ತಾಯಿ, ಮಗ, ಮಗಳು, ಸಹೋದರ, ಮತ್ತು ಗಂಡ ಇಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
Avaru satta manushyara balige bandu ashuddharaagabaaradu. Aadare tande taayi, maga, magalu, sahodara, mattu ganda illada sahodari, ivarigoskara avaru ashuddharaagabahudu.
Ezekiel 44:25 in English
- King James Version (KJV)
- And they shall come at no dead person to defile themselves: but for father, or for mother, or for son, or for daughter, for brother, or for sister that hath had no husband, they may defile themselves.
- World English Bible (WEB)
- “‘“They shall go in to no dead person to defile themselves; but for father, or for mother, or for son, or for daughter, for brother, or for sister who has had no husband, they may defile themselves.
- American Standard Version (ASV)
- And they shall go in to no dead person to defile themselves; but for father, or for mother, or for son, or for daughter, for brother, or for sister that hath had no husband, they may defile themselves.
- Bible in Basic English (BBE)
- They are not to come near any dead person so as to become unclean: but for a father or mother or son or daughter or brother or for a sister who has no husband, they may make themselves unclean.
- Darby Translation (DBY)
- And they shall come at no dead person to become unclean; but for father, or for mother, or for son, or for daughter, for brother, or for sister that hath had no husband, they may become unclean.
- Webster's Bible (WBS)
- And they shall come at no dead person to defile themselves: but for father, or for mother, or for son, or for daughter, for brother, or for sister that hath had no husband, they may defile themselves.
- Young's Literal Translation (YLT)
- And unto any dead man they come not for uncleanness, but for father, and for mother, and for son, and for daughter, for brother, for sister who hath not been to a man, they defile themselves.
Read in context
- 23ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಹೆಚ್ಚು ಕಡಿಮೆಯನ್ನು ಬೋಧಿಸಿ, ಅವರಿಗೆ ಹೊಲೆ ಯಾದದ್ದನ್ನೂ ಶುದ್ಧವಾದದ್ದನ್ನೂ ತಿಳಿಸಬೇಕು.
- 24ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
- 25ಅವರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆ ತಾಯಿ, ಮಗ, ಮಗಳು, ಸಹೋದರ, ಮತ್ತು ಗಂಡ ಇಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
- 26ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
- 27ಅವನು ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವದ ಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಬಲಿಯನ್ನು ಅರ್ಪಿಸಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.
Cross references
- Leviticus 22:4 ಯಾಜಕಕಾಂಡ 22:4ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
- Leviticus 21:1–6 ಯಾಜಕಕಾಂಡ 21:1–6ತರುವಾಯ ಕರ್ತನು ಮೋಶೆಗೆ ಹೇಳಿದ್ದೇನಂದರೆ--ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಸತ್ತವರ ನಿಮಿತ್ತವಾಗಿ ಅವನ ಜನರಲ್ಲಿ ಯಾವನೂ ಹೊಲೆಯಾಗಬಾರದು. ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿ, ತಂದೆ, ಮಗ, ಮಗಳು, ಸಹೋದರನಿಗಾಗಿ ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಅವನು ಹೊಲೆಯಾಗಬಹುದು. ಆದರೆ ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿ ರುವದರಿಂದ ತನ್ನನ್ನು ತಾನು ಹೊಲೆಮಾಡಿ ಕೊಳ್ಳಬಾರದು ಅಪವಿತ್ರಮಾಡಿಕೊಳ್ಳಲೂಬಾರದು. ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು. ಅವರು ತಮ್ಮ ಕರ್ತನಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತಮ್ಮ ದೇವರ ರೊಟ್ಟಿಯನ್ನು ಅರ್ಪಿಸುವದರಿಂದ ಅವರು ತಮ್ಮ ದೇವರ ಹೆಸರನ್ನು ಅಪವಿತ್ರಪಡಿಸದೆ ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು; ಆದಕಾರಣ ಅವರು ಪರಿಶುದ್ಧ ರಾಗಿರುವರು.
- Matthew 8:21–22 ಮತ್ತಾಯನು 8:21–22ಆತನ ಶಿಷ್ಯರಲ್ಲಿ ಮತ್ತೊಬ್ಬನು ಆತನಿಗೆ--ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರುವಂತೆ ನನಗೆ ಅಪ್ಪಣೆ ಕೊಡು ಎಂದು ಹೇಳಿದನು. ಆದರೆ ಯೇಸು ಅವನಿಗೆ--ನನ್ನನ್ನು ಹಿಂಬಾಲಿಸು; ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ ಎಂದು ಹೇಳಿದನು.
- Luke 9:59–60 ಲೂಕನು 9:59–60ಇದಲ್ಲದೆ ಆತನು ಮತ್ತೊಬ್ಬನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆದರೆ ಅವನು--ಕರ್ತನೇ, ನಾನು ಹೋಗಿ ಮೊದಲು ನನ್ನ ತಂದೆಯನ್ನು ಹೂಣಿಡುವಂತೆ ಅಪ್ಪಣೆಕೊಡು ಅಂದನು. ಆದರೆ ಯೇಸು ಅವ ನಿಗೆ--ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ; ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು ಅಂದನು.
- 1 Thessalonians 4:13–15 1 ಥೆಸಲೊನೀಕದವರಿಗೆ 4:13–15ಇದಲ್ಲದೆ ಸಹೋದರರೇ, ನಿರೀಕ್ಷೆಯಿಲ್ಲದ ಬೇರೆಯವರ ಹಾಗೆ ದುಃಖಿಸಿದಂತೆ ನಿದ್ರೆಹೋದವರ ವಿಷಯದಲ್ಲಿ ನೀವು ತಿಳಿದಿರಬೇಕೆಂದು ನಾನು ಇಚ್ಚಿಸುತ್ತೇನೆ. ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ. ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ, ಕರ್ತನು ಪ್ರತ್ಯಕ್ಷನಾಗು ವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದ ವರಿಗಿಂತ ಮುಂದಾಗುವದೇ ಇಲ್ಲ.
- 2 Corinthians 5:16 2 ಕೊರಿಂಥದವರಿಗೆ 5:16ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವದಿಲ್ಲ; ಹೌದು, ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ಎಂದಿಗೂ ತಿಳುಕೊಳ್ಳುವದಿಲ್ಲ,