Ezekiel · chapter 45 · verse 18
Ezekiel 45:18 in Kannada
ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮೊದಲನೇ ತಿಂಗಳಿನ ಮೊದಲನೇ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೇಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡ ಬೇಕು.
Devaraada kartanu heege heluttaane-- modalane tingalina modalane dinadalli neenu poornaangavaada ondu elehoriyannu tegedukondu parishuddha sthalavannu shuddhamaada beku.
Ezekiel 45:18 in English
- King James Version (KJV)
- Thus saith the Lord GOD; In the first [month], in the first [day] of the month, thou shalt take a young bullock without blemish, and cleanse the sanctuary:
- World English Bible (WEB)
- “‘The Lord GOD says: “In the first month, on the first day of the month, you shall take a young bull without defect, and you shall cleanse the sanctuary.
- American Standard Version (ASV)
- Thus saith the Lord Jehovah: In the first [month], in the first [day] of the month, thou shalt take a young bullock without blemish; and thou shalt cleanse the sanctuary.
- Bible in Basic English (BBE)
- This is what the Lord has said: In the first month, on the first day of the month, you are to take a young ox without any mark on him, and you are to make the holy place clean.
- Darby Translation (DBY)
- Thus saith the Lord Jehovah: In the first [month], on the first of the month, thou shalt take a young bullock, without blemish, and thou shalt purge the sanctuary.
- Webster's Bible (WBS)
- Thus saith the Lord GOD; In the first [month] , in the first [day] of the month, thou shalt take a young bullock without blemish, and cleanse the sanctuary:
- Young's Literal Translation (YLT)
- 'Thus said the Lord Jehovah: In the first [month], in the first of the month, thou dost take a bullock, a son of the herd, a perfect one, and hast cleansed the sanctuary:
Read in context
- 16ದೇಶದಲ್ಲಿರುವ ಜನ ರೆಲ್ಲರೂ ಈ ಕಾಣಿಕೆಯನ್ನು ಇಸ್ರಾಯೇಲನ ಪ್ರಭು ವಿಗಾಗಿ ಕೊಡಬೇಕು.
- 17ಹಬ್ಬಗಳಲ್ಲಿಯೂ ಅಮಾ ವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮ ಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವದು ಪ್ರಭುವಿನ ಕೆಲಸವಾಗಿರುವದು; ಅವನೇ ಇಸ್ರಾಯೇ ಲಿನ ಮನೆತನದವರಿಗಾಗಿ ಸಮಾಧಾನಕ್ಕಾಗಿ ಪಾಪಬಲಿ ಯನ್ನೂ ಅರ್ಪಣೆಯನ್ನೂ ದಹನಬಲಿಯನ್ನೂ ಸಮಾಧಾನ ಯಜ್ಞವನ್ನೂ ಸಿದ್ಧಮಾಡಬೇಕು.
- 18ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮೊದಲನೇ ತಿಂಗಳಿನ ಮೊದಲನೇ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೇಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡ ಬೇಕು.
- 19ಯಾಜಕನು ಪಾಪಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆ ಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;
- 20ಈ ಪ್ರಕಾರ ನೀನು ತಿಂಗಳಿನ ಏಳನೇ ದಿನದಲ್ಲಿ ತಪ್ಪಿ ಹೋಗುವ ಎಲ್ಲರಿಗಾಗಿಯೂ ಬುದ್ಧಿ ಹೀನರಿಗಾಗಿಯೂ ಮಾಡಬೇಕು. ಹೀಗೆ ನೀವು ಆಲಯಕ್ಕೋಸ್ಕರವಾಗಿ ಸಮಾಧಾನಪಡಿಸಬೇಕು.
Cross references
- Leviticus 16:16 ಯಾಜಕಕಾಂಡ 16:16ಇಸ್ರಾಯೇಲಿನ ಮಕ್ಕಳ ಅಶುದ್ಧ ತ್ವದ ನಿಮಿತ್ತವಾಗಿಯೂ ಅವರ ಪಾಪಗಳಲ್ಲಿರುವ ಎಲ್ಲಾ ಅಪರಾಧಗಳಿಗಾಗಿಯೂ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಅವರ ಅಶುದ್ಧ ತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ಸಭೆಯಗುಡಾರಕ್ಕೂ ಅದರಂತೆಯೇ ಮಾಡಬೇಕು.
- Leviticus 16:33 ಯಾಜಕಕಾಂಡ 16:33ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು. ಹೀಗೆ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಇದ ಲ್ಲದೆ ಸಭೆಯ ಗುಡಾರಕ್ಕಾಗಿಯೂ ಯಜ್ಞವೇದಿ ಗಾಗಿಯೂ ಪ್ರಾಯಶ್ಚಿತ್ತಮಾಡಬೇಕು. ಯಾಜಕರಿ ಗಾಗಿಯೂ ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು.ಹೀಗೆ ಇಸ್ರಾಯೇಲಿನ ಮಕ್ಕಳ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತಮಾಡುವಂತೆ ಇದು ನಿಮಗೆ ನಿರಂತರ ವಾದ ನಿಯಮವಾಗಿರುವದು ಎಂದು ಹೇಳಿದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.
- Ezekiel 43:22 ಯೆಹೆಜ್ಕೇಲನು 43:22ಎರಡನೇ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ಪಾಪ ಬಲಿಯಾಗಿ ಅರ್ಪಿಸ ಬೇಕು; ಅವರು ಯಜ್ಞವೇದಿಯನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.
- Exodus 12:2 ವಿಮೋಚನಕಾಂಡ 12:2ಈ ತಿಂಗಳೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರುವದು.
- Hebrews 9:14 ಇಬ್ರಿಯರಿಗೆ 9:14ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
- Leviticus 22:20 ಯಾಜಕಕಾಂಡ 22:20ಆದರೆ ದೋಷವಿರುವ ಯಾವದನ್ನೂ ಸಮರ್ಪಿಸ ಬಾರದು; ಅದು ನಿಮಗೋಸ್ಕರ ಅಂಗೀಕಾರವಾಗು ವದಿಲ್ಲ.
- Ezekiel 43:26 ಯೆಹೆಜ್ಕೇಲನು 43:26ಏಳು ದಿನಗಳ ತನಕ ಅವರು ಯಜ್ಞವೇದಿಯನ್ನು ಶುದ್ಧಮಾಡಿ ತಮ್ಮನ್ನು ತಾವೇ ಪ್ರತಿಷ್ಠಿಸಿಕೊಳ್ಳಬೇಕು.ಈ ದಿನಗಳು ತೀರಿದಾಗ ಎಂಟನೇ ದಿನದ ತರುವಾಯ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- Hebrews 10:3–4 ಇಬ್ರಿಯರಿಗೆ 10:3–4ಆದರೆ ಪ್ರತಿ ವರುಷವು ಆ ಯಜ್ಞಗಳಲ್ಲಿ ತಿರಿಗಿ ಪಾಪಗಳ ಜ್ಞಾಪಕವಾಗುವದುಂಟು. ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.
- 1 Peter 1:19 1 ಪೇತ್ರನು 1:19ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
- Matthew 6:33 ಮತ್ತಾಯನು 6:33ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Hebrews 10:19–22 ಇಬ್ರಿಯರಿಗೆ 10:19–22ಹೀಗಿರುವಲ್ಲಿ ಸಹೋದರರೇ, ಯೇಸುವಿನ ರಕ್ತದ ಮೂಲಕ ಅತಿಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು. ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು. ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವದರಿಂದ ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
- Numbers 28:11–15 ಅರಣ್ಯಕಾಂಡ 28:11–15ನಿಮ್ಮ ತಿಂಗಳುಗಳ ಆರಂಭದಲ್ಲಿ ನೀವು ಕರ್ತನಿಗೆ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ಮಚ್ಚೆಯಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ ಒಂದೊಂದು ಹೋರಿಗೆ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟಿನ ಮೂರು ದಶಾಂಶಗಳು; ಒಂದೊಂದು ಟಗರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಎರಡು ದಶಾಂಶಗಳು. ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ. ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ. ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು.