Ezekiel · chapter 45 · verse 9
Ezekiel 45:9 in Kannada
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನು ಸುಲಿಗೆಯನ್ನು ಬಿಡಿರಿ; ನ್ಯಾಯವನ್ನೂ ನೀತಿಯನ್ನೂ ಮಾಡಿರಿ; ನನ್ನ ಜನರನ್ನು ಓಡಿಸಬೇಡಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
Devaraada kartanu heege heluttaane--o israayelina prabhugale, neevu saakumaadiri, balaatkaaravannu suligeyannu bidiri; nyaayavannoo neetiyannoo maadiri; nanna janarannu odisabediri endu devaraada kartanu heluttaane.
Ezekiel 45:9 in English
- King James Version (KJV)
- Thus saith the Lord GOD; Let it suffice you, O princes of Israel: remove violence and spoil, and execute judgment and justice, take away your exactions from my people, saith the Lord GOD.
- World English Bible (WEB)
- “‘The Lord GOD says: “Enough, you princes of Israel! Remove violence and plunder, and execute justice and righteousness! Stop dispossessing my people!” says the Lord GOD.
- American Standard Version (ASV)
- Thus saith the Lord Jehovah: Let it suffice you, O princes of Israel: remove violence and spoil, and execute justice and righteousness; take away your exactions from my people, saith the Lord Jehovah.
- Bible in Basic English (BBE)
- This is what the Lord has said: Let this be enough for you, O rulers of Israel: let there be an end of violent behaviour and wasting; do what is right, judging uprightly; let there be no more driving out of my people, says the Lord.
- Darby Translation (DBY)
- Thus saith the Lord Jehovah: Let it suffice you, princes of Israel! Put away violence and spoil, and execute judgment and justice; take off your exactions from my people, saith the Lord Jehovah.
- Webster's Bible (WBS)
- Thus saith the Lord GOD; Let it suffice you, O princes of Israel: remove violence and spoil, and execute judgment and justice, take away your exactions from my people, saith the Lord GOD.
- Young's Literal Translation (YLT)
- 'Thus said the Lord Jehovah: Enough to you — princes of Israel; violence and spoil turn aside, and judgment and righteousness do; lift up your exactions from off My people — an affirmation of the Lord Jehovah.
Read in context
- 7ಕಾಣಿಕೆಯಾದ ಪರಿಶುದ್ಧ ಭಾಗಕ್ಕೂ ನಗರದ ಸ್ವಾಸ್ತ್ಯಕ್ಕೂ ಈ ಕಡೆಯಲ್ಲಿಯೂ ಆ ಕಡೆಯಲ್ಲಿಯೂ ಕಾಣಿಕೆಯಾದ ಪರಿಶುದ್ಧ ಭಾಗದ ಮುಂದೆಯೂ ಪಟ್ಟಣದ ಸ್ವಾಸ್ತ್ಯದ ಮುಂದೆಯೂ ಅದರ ಪಶ್ಚಿಮದ ಕಡೆಯಲ್ಲಿ ಪಶ್ಚಿಮಕ್ಕೂ ಅದರ ಪೂರ್ವದ ಕಡೆಯಲ್ಲಿ ಪೂರ್ವಕ್ಕೂ ಪ್ರಭುವಿಗೆ ಪಾಲು ಇರಬೇಕು; ಅದರ ಉದ್ದವು ಭಾಗಗಳಲ್ಲಿ ಒಂದಕ್ಕೆ ಎದುರಾಗಿ, ಪಶ್ಚಿಮ ಮೇರೆ ಮೊದಲುಗೊಂಡು ಪೂರ್ವ ಮೇರೆಯ ತನಕ ಇರಬೇಕು.
- 8ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸ್ವಾಸ್ತ್ಯವಾಗಿರುವದು; ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವಪಡಿಸು ವದೇ ಇಲ್ಲ; ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲ್ಪಡುವದು.
- 9ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನು ಸುಲಿಗೆಯನ್ನು ಬಿಡಿರಿ; ನ್ಯಾಯವನ್ನೂ ನೀತಿಯನ್ನೂ ಮಾಡಿರಿ; ನನ್ನ ಜನರನ್ನು ಓಡಿಸಬೇಡಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
- 10ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್ (ಅಳತೆ) ನಿಮಗಿರಬೇಕು.
- 11ಬತ್ ಹೋಮೆ ರಿನ ಹತ್ತನೇ ಪಾಲನ್ನೂ ಎಫವು ಹೋಮೆರಿನ ಹತ್ತನೆ ಪಾಲನ್ನೂ ಹಿಡಿಯುವ ಹಾಗೆ ಏಫಕ್ಕೂ ಬತಗೂ ಒಂದೇ ಅಳತೆ ಇರಬೇಕು. ಅವುಗಳ ಅಳತೆ ಹೋಮೆ ರಿನ ಅಳತೆಯ ಪ್ರಕಾರ ಇರಬೇಕು.
Cross references
- Zechariah 8:16 ಜೆಕರ್ಯ 8:16ನೀವು ಮಾಡತಕ್ಕ ಕಾರ್ಯಗಳು ಇವೇ--ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನು ಮಾತಾಡಲಿ; ನಿಜವಾದ ಸಮಾಧಾನಕರ ವಾದ ನ್ಯಾಯತೀರ್ವಿಕೆಯನ್ನು ನಿಮ್ಮ ಬಾಗಲು ಗಳಲ್ಲಿ ತೀರಿಸಿರಿ.
- Jeremiah 22:3 ಯೆರೆಮೀಯ 22:3ನ್ಯಾಯವನ್ನೂ ನೀತಿಯನ್ನೂ ನಡಿಸಿರಿ; ಸುಲಿಗೆಯಾದ ವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ; ಪರದೇಶಸ್ಥನಿಗೆ ದಿಕ್ಕಿಲ್ಲದವನಿಗೆ ವಿಧವೆಗೆ ಉಪದ್ರವವ ನ್ನಾದರೂ ಬಲಾತ್ಕಾರವನ್ನಾದರೂ ಮಾಡಬೇಡಿರಿ; ಇಲ್ಲವೆ ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲ ಬೇಡಿರಿ.
- Isaiah 1:17 ಯೆಶಾಯ 1:17ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
- Ezekiel 44:6 ಯೆಹೆಜ್ಕೇಲನು 44:6ತಿರುಗಿ ಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾ ದದ್ದೇನಂದರೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ;
- 1 Peter 4:3 1 ಪೇತ್ರನು 4:3ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು.
- Micah 2:9 ಮೀಕ 2:9ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.
- Job 22:9 ಯೋಬನು 22:9ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.
- Job 24:2–12 ಯೋಬನು 24:2–12ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ. ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ. ದರಿದ್ರನನ್ನು ಮಾರ್ಗದಿಂದ ತೊಲಗಿಸುತ್ತಾರೆ; ದೇಶದ ದೀನರು ಕೂಡಾ ಅಡಗಿಕೊಳ್ಳುತ್ತಾರೆ. ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ. ಹೊಲದಲ್ಲಿ ತಮ್ಮ ತಮ್ಮ ಬೆಳೆಯನ್ನು ಕೊಯ್ದು ದುಷ್ಟನ ದ್ರಾಕ್ಷೆಯ ತೋಟದಲ್ಲಿ ಹಣ್ಣು ಆರಿಸುತ್ತಾರೆ. ಬೆತ್ತಲೆಯಾಗಿ ಬಟ್ಟೆ ಇಲ್ಲದೆ ಮಲಗುವಂತೆ ಮಾಡುತ್ತಾರೆ. ಚಳಿಯಲ್ಲಿ ಅವರಿಗೆ ಹೊದ್ದು ಕೊಳ್ಳು ವದಕ್ಕೆ ಇಲ್ಲ. ಬೆಟ್ಟಗಳ ಮಳೆಯಿಂದ ತೊಯ್ದಿ ದ್ದಾರೆ; ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುತ್ತಾರೆ. ದಿಕ್ಕಿಲ್ಲದವರನ್ನು ತಾಯಿಯ ಮೊಲೆಯಿಂದ ಕಸಕೊಳ್ಳುತ್ತಾರೆ; ಬಡವನಿಂದ ಒತ್ತೆಯಾಗಿ ತಕ್ಕೊಳ್ಳು ತ್ತಾರೆ. ವಸ್ತ್ರವಿಲ್ಲದೆ ಬೆತ್ತಲೆಯಾಗಿರುವವರನ್ನು ತಿರು ಗಾಡಿಸುತ್ತಾರೆ; ಹಸಿದವರು ಸೂಡುಗಳನ್ನು ಹೊರು ತ್ತಾರೆ ಅವರ ಗೋಡೆಗಳ ನಡುವೆ ಇದ್ದುಕೊಂಡು ಎಣ್ಣೆಯನ್ನು ತೆಗೆಯುತ್ತಾರೆ; ತೊಟ್ಟಿಗಳನ್ನು ತುಳಿದು ದಾಹಪಡುತ್ತಾರೆ. ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.
- Micah 2:1–2 ಮೀಕ 2:1–2ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
- 1 Corinthians 6:7–8 1 ಕೊರಿಂಥದವರಿಗೆ 6:7–8ಆದದರಿಂದ ಈಗ ನಿಮ್ಮಲ್ಲಿ ಒಬ್ಬನಿಗೆ ವಿರೋಧವಾಗಿ ಇನ್ನೊಬ್ಬನು ನ್ಯಾಯಸ್ಥಾನಕ್ಕೆ ಹೋಗುವದು ಶುದ್ಧ ತಪ್ಪು; ಇದಕ್ಕಿಂತ ನೀವು ಅನ್ಯಾಯವನ್ನು ಯಾಕೆ ಸಹಿಸಬಾರದು? ಇಲ್ಲವೆ (ಸೊತ್ತನ್ನು ಅಪಹರಿಸುವದನ್ನು) ನೀವು ಯಾಕೆ ಸಹಿಸಿಕೊಳ್ಳಬಾರದು? ನೀವು ನಿಮ್ಮ ಸಹೋದರ ರಿಗೆ ಅನ್ಯಾಯ ಮಾಡುತ್ತೀರಿ; ಅವರನ್ನೇ ಅಪಹರಿಸುತ್ತೀರಿ.
- Job 20:19 ಯೋಬನು 20:19ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು.
- Nehemiah 5:1–13 ನೆಹೆಮೀಯ 5:1–13ಆದರೆ ಜನರಿಂದಲೂ ಅವರ ಹೆಂಡತಿಯರಿಂದಲೂ ತಮ್ಮ ಸಹೋದರರಾದ ಯೆಹೂದ್ಯರ ಮೇಲೆ ದೊಡ್ಡ ಕೂಗು ಉಂಟಾಯಿತು. ಅವರಲ್ಲಿ ಕೆಲವರು--ನಾವೂ ನಮ್ಮ ಕುಮಾರರೂ ನಮ್ಮ ಕುಮಾರ್ತೆಯರೂ ಅನೇಕರಾದದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತಕ್ಕೊಂಡೆವು ಅಂದರು. ಕೆಲವರು ಈ ಬರದಲ್ಲಿ ನಾವು ಧಾನ್ಯಕೊಂಡು ಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಮನೆಗಳನ್ನೂ ಒತ್ತೆ ಇಟ್ಟೆವು ಅಂದರು. ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ. ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು. ಅವರ ಕೂಗನ್ನೂ ಈ ಮಾತುಗಳನ್ನೂ ನಾನು ಕೇಳಿದಾಗ ಬಹಳ ಕೋಪಿಸಿಕೊಂಡೆನು. ಹೃದಯ ದಲ್ಲಿ ಯೋಚನೆ ಮಾಡಿಕೊಂಡು ಪ್ರಮುಖರನ್ನೂ ಅಧಿಕಾರಸ್ಥರನ್ನೂ ಗದರಿಸಿ ಅವರಿಗೆ--ನೀವು ಪ್ರತಿ ಮನುಷ್ಯನು ಅವನವನ ಸಹೋದರನಿಂದ ಬಡ್ಡಿಯನ್ನು ಒತ್ತಾಯದಿಂದ ತಕ್ಕೊಳ್ಳುತ್ತೀರಿ ಎಂದು ಹೇಳಿ ಅವರ ಮೇಲೆ ದೊಡ್ಡ ಸಭೆಯನ್ನು ನೇಮಿಸಿದನು. ಅವ ರಿಗೆ--ಅನ್ಯರಿಗೆ ಮಾರಲ್ಪಟ್ಟ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿ ಇದ್ದ ಹಾಗೆ ವಿಮೋಚಿಸಿದೆವು. ನೀವು ನಿಮ್ಮ ಸಹೋದರರನ್ನು ಮಾರಿ ಬಿಡುವಿರೋ? ಇಲ್ಲವೆ ಅವರು ನಮಗೆ ಮಾರ ಲ್ಪಡುವರೋ ಅಂದೆನು. ಆಗ ಅವರು ಮೌನವಾಗಿ ದ್ದರು; ಅವರಿಗೆ ಮಾತು ಇಲ್ಲದೆ ಹೋಯಿತು. ನಾನು ಅವರಿಗೆನೀವು ಮಾಡುವುದು ಒಳ್ಳೇದಲ್ಲ; ನಮ್ಮ ಶತ್ರುಗಳಾದ ಅನ್ಯರ ನಿಂದೆಯ ನಿಮಿತ್ತ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲಾ. ನಾನು ನನ್ನ ಸಹೋದರರೂ ನನ್ನ ಸೇವಕರೂ ಅವರಿಂದ ಹಣ ವನ್ನೂ ಧಾನ್ಯವನ್ನೂ ಒತ್ತಾಯದಿಂದ ತಕ್ಕೊಳ್ಳಬಹು ದಾಗಿತ್ತು. ದಯಮಾಡಿ ಈ ಬಡ್ಡಿಯನ್ನು ಬಿಟ್ಟು ಬಿಡೋಣ. ನೀವು ಅವರಿಂದ ಒತ್ತಾಯದಿಂದ ತೆಗೆದುಕೊಂಡ ಅವರ ಹೊಲಗಳನ್ನೂ ದ್ರಾಕ್ಷಾತೋಟಗಳನ್ನೂ ಇಪ್ಪೇ ತೋಪುಗಳನ್ನೂ ಮನೆಗಳನ್ನೂ ನೂರಕ್ಕೆ ಒಂದಾದ ಹಣವನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೇಯನ್ನೂ ಇಂದು ಅವರಿಗೆ ತಿರಿಗಿಕೊಡಿರಿ ಎಂದು ಹೇಳಿದೆನು. ಅದಕ್ಕವರುನಾವು ತಿರಿಗಿ ಕೊಡುತ್ತೇವೆ; ಅವರಿಂದ ಏನೂ ಕೇಳು ವದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ ಅಂದರು. ಆಗ ನಾನು ಯಾಜಕರನ್ನು ಕರೆದು ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತಕ್ಕೊಂಡೆನು. ನಾನು ನನ್ನ ಬಟ್ಟೆಯನ್ನು ಝಾಡಿಸಿ -- ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿ ಮನುಷ್ಯನನ್ನು ದೇವರು ಅವನ ಮನೆಯಿಂದಲೂ ಅವನ ಕಷ್ಟಾರ್ಜಿತದಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಲ್ಪಟ್ಟು ಬರಿದಾಗಲಿ ಅಂದೆನು. ಅದಕ್ಕೆ ಸಭೆಯವರೆಲ್ಲರೂ--ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ನನ್ನ ದೇವರೇ, ಜನರು ಈ ಮಾತಿನ ಪ್ರಕಾರ ಮಾಡಿದರು.
Original words (Hebrew)
- saith · H5002נְאֻם nᵉʼum
- Lord · H136אֲדֹנָי ʼĂdônây
- suffice · H7227רַב rab
- princes · H5387נָשִׂיא nâsîyʼ
- Israel · H3478יִשְׂרָאֵל Yisrâʼêl
- remove · H5493סוּר çûwr
- violence · H2555חָמָס châmâç
- spoil · H7701שֹׁד shôd
- execute · H6213עָשָׂה ʻâsâh
- judgment · H4941מִשְׁפָּט mishpâṭ
- justice · H6666צְדָקָה tsᵉdâqâh
- away · H7311רוּם rûwm
- exactions · H1646גְרֻשָׁה gᵉrushâh
- people · H5971עַם ʻam
- saith · H559אָמַר ʼâmar
- Lord · H136אֲדֹנָי ʼĂdônây